Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ ಇಲಾಖೆಯು ರಾಷ್ಟ್ರದಾದ್ಯಂತ ಸ್ವಚ್ಛ ಭಾರತ್ ಮಿಷನ್- ನಯಾ ಸಂಕಲ್ಪದ ಯೋಜನೆಯಲ್ಲಿ ಸ್ವಭಾವ್ ಸ್ವಚ್ಛತಾ, ಸಂಸ್ಕಾರ್ ಸ್ವಚ್ಛತವನ್ನು ಸೆಪ್ಟೆಂಬರ್ 17 ರಿಂದ 2ನೇ ಅಕ್ಟೋಬರ್ 2024 ವರೆಗೆ ಹಮ್ಮಿಕೊಳ್ಳಲಾಗಿದ್ದು, ದಿನಾಂಕ 21.09.2024 ರಂದು ನೆಹರು ಯುವ ಕೇಂದ್ರ ಶಿವಮೊಗ್ಗ ಮತ್ತು ಮುಖಾ ಮುಖಿ ಎಸ್. ಟಿ ರಂಗ ತಂಡ (ರಿ ) ಶಿವಮೊಗ್ಗ, ರಾಜರಾಜೇಶ್ವರಿ ಪ್ರೌಢಶಾಲೆ,ಗೋಪಾಳ ಇವರ ಸಹಯೋಗದೊಂದಿಗೆ ” ಸ್ವಚ್ಛತ ಹೀ ಸೇವಾ ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಪನ್ಮೂಲ ವ್ಯಕ್ತಿಯಾದ ಶ್ರೀ. ಕೆ.ಜಿ ವೆಂಕಟೇಶ್ ರವರು ಮಹಾತ್ಮ ಗಾಂಧೀಜಿ ಕಂಡ ಸ್ವಚ್ಛತಾ ಸಂಕಲ್ಪದ ಬಗ್ಗೆ ಸ್ವಚ್ಛತಾ ಅಭಿಯಾನದ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿ ಮುಂದಿನ ದಿನಗಳಲ್ಲಿ ಸ್ವಚ್ಛತೆಯ ಜಾಗೃತಿಗೊಳಿಸುವುದಕ್ಕೆ ನಾವು ನಿರಂತರವಾಗಿ ಕೈಜೋಡಿಸಿ ಕ್ರಮವನ್ನು ಕೈಗೊಳ್ಳುವ ಬಗ್ಗೆ ಉತ್ತಮವಾದ ಮಾಹಿತಿಯನ್ನು ನೀಡಿ Youth Empowerment and Sports ಕಾರ್ಯಕ್ರಮದ ಉದ್ಘಾಟನೆ ನುಡಿಗಳನ್ನು ನುಡಿದರು. ಈ ಸಂದರ್ಭದಲ್ಲಿ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ,ಶ್ರೀ. ಉಲ್ಲಾಸ್ ಕೆಟಿಕೆ ಅವರು ಸ್ವಚ್ಛತೆಯ ಸಂದೇಶವನ್ನು,ವಿದ್ಯಾರ್ಥಿಗಳಿಗೆ ಪ್ರಸ್ತಾಪಿಸಿದರು. ನಂತರ ಗೋಪಾಳ ವೃತ್ತ ಮತ್ತು ಬಸ್ಟ್ಯಾಂಡ್ ಸುತ್ತಮುತ್ತ ಜಾಗವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ರಾಜರಾಜೇಶ್ವರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಮುಖ್ಯ ಶಿಕ್ಷಕರಾದಂತಹ ಧನಂಜಯ ಜೆ.ಆರ್ & ಶಿಕ್ಷಕ ವೃಂದದವರು, ಮುಖಾಮುಖಿ ಎಸ್ ಟಿ ರಂಗ ತಂಡದ ಮಂಜು ರಂಗಾಯಣ. ಮಹೇಂದ್ರ. ಆಶಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಿದರು.
Youth Empowerment and Sports ಸೆ. 17 ರಿಂದ 2 ಅ.2ವರೆಗೆ ” ಸ್ವಚ್ಛತ ಹೀ ಸೇವಾ” ಕಾರ್ಯಕ್ರಮ
Date: