GM Institute of Technology ರಾಷ್ಟ್ರ ನಿರ್ಮಾಣದ ಗುರುತರ ಹೊಣೆಗಾರಿಕೆಯು ಭಾರತದ ಇಂಜಿನಿಯರಿಂಗ್ ಪದವೀಧರರ ಮೇಲಿದ್ದು ಕೇವಲ ಉದ್ಯೋಗ ಪ್ರಾಪ್ತಿಗಷ್ಟೇ ಗುರಿಯನ್ನು ಕೇಂದ್ರೀಕರಿಸಬೇಡಿ ಎಂದು ನೂತನ ವಿದ್ಯಾರ್ಥಿಗಳಿಗೆ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ ಕರೆ ಕೊಟ್ಟರು.
ಅವರು ಜಿ ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನೂತನ ವಿದ್ಯಾರ್ಥಿಗಳ ಪೀಠಿಕಾ ಕಾರ್ಯಕ್ರಮದಲ್ಲಿ ‘ಭಾರತೀಯ ಸಂಸ್ಕೃತಿ, ಪರಂಪರೆ, ಶೈಕ್ಷಣಿಕ ಶಿಸ್ತು’ ವಿಷಯವಾಗಿ ಮಾತನಾಡುತ್ತಾ ದೇಶದ ಸುಮಾರು 8876 ತಾಂತ್ರಿಕ ಕಾಲೇಜುಗಳಿಂದ ವಾರ್ಷಿಕ ಸುಮಾರು 15 ಲಕ್ಷ ಇಂಜಿನಿಯರಿಂಗ್ ಪದವೀಧರರು ಹೊರ ಬರುತ್ತಿದ್ದು ಇವರಲ್ಲಿ ಶೇಕಡ ಹತ್ತರಷ್ಟು ಪದವೀಧರರು ವಿನೂತನ ಚಿಂತನೆಗಳಿಂದ ಉತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದರೂ ಸಾಕು ನಮ್ಮ ಜಿ ಡಿ ಪಿ ಯು ಗರಿಷ್ಠ ಮಟ್ಟ ತಲುಪುತ್ತದೆ.
GM Institute of Technology ರಾಷ್ಟ್ರಾಭಿಮಾನ ಬೆಳೆಸಿಕೊಂಡರೆ ಇದನ್ನು ಸಾಧಿಸಬಹುದು. ಇದಕ್ಕಾಗಿ ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ವಿಶೇಷತೆಯನ್ನು ಅರಿತುಕೊಳ್ಳಬೇಕು, ವಿದ್ಯಾರ್ಥಿ ದೆಸೆಯಲ್ಲಿ ಶೈಕ್ಷಣಿಕ ಶಿಸ್ತು ಪಾಲಿಸಿದಲ್ಲಿ ಇವೆಲ್ಲವೂ ಸಾಧ್ಯ ಎಂಬುದನ್ನು ನಿದರ್ಶನಗಳ ಸಹಿತ ವಿವರಿಸಿದರು. ಅಧ್ಯಾಪಕ ವರ್ಗದ ಡಾ. ಓಂಕಾರಪ್ಪ, ಮೇಘ ಹಿರೇಮಠ, ಸುಮಾ ಸತೀಶ್ ಮುಂತಾದವರು ಉಪಸ್ಥಿತರಿದ್ದರು.