Friday, September 27, 2024
Friday, September 27, 2024

Department of Women and Child Development ಅಪೌಷ್ಠಿಕತೆಯಿಂದ ಯಾವುದೇ ಜನತೆ ಬಳಲದಂತೆ ಆಗಲಿ- ನ್ಯಾ ಎಂ.ಎಸ್.ಸಂತೋಷ್

Date:

Department of Women and Child Development ಮಕ್ಕಳಿಗೆ ಶಿಕ್ಷಣ, ಪೋಷಣೆ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಶಿವಮಗ್ಗ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಆಯೋಜಿಸಲಾಗಿದ್ದ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮ ಹಾಗೂ ಪೌಷ್ಟಿಕ ಆಹಾರ ಮತ್ತು ಗ್ರೋಥ್ ಮಾನಿಟರಿಂಗ್ ಕುರಿತು ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಕಲಿಸುವ, ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸೂಪರ್‌ವೈಸರ್‌ಗಳು ಒಂದು ರೀತಿಯಲ್ಲಿ ತಳಮಟ್ಟದಲ್ಲಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು ತಮಗೆ ನೀಡಿದ ಯಾವುದೇ ಕೆಲಸವನ್ನು ಸಮರ್ಪಕವಾಗಿ ಯೋಜನೆ ರೂಪಿಸಿಕೊಂಡು ಮಾಡಬೇಕು. ಆಗಬೇಕಾದ ಕೆಲಸಗಳ ಕುರಿತು ಒಂದೆಡೆ ಬರೆದಿಟ್ಟುಕೊಳ್ಳಬೇಕು. ಕೆಲಸ ಮುಗಿದು ವರದಿ ನೀಡುವವರೆಗೆ, ಅಪ್‌ಡೇಟ್ ಆಗುವವರೆಗೆ ಕಾರ್ಯವೆಸಗಬೇಕು ಎಂದು ಕಿವಿ ಮಾತು ಹೇಳಿದರು.
Department of Women and Child Development ಜಿಲ್ಲೆಯಲ್ಲಿ 2563 ಅಂಗನವಾಡಿಗಳು ಇದ್ದು ಹಲವಾರು ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅವುಗಳ ಅಪ್‌ಡೇಟ್ ಸಹ ಸಮರ್ಪಕವಾಗಿ ಆಗಬೇಕು. ‘ಸುಪೋಷಿತ್ ಕಿಶೋರಿ ಮತ್ತು ಸಶಕ್ತ ನಾರಿ’ ನಿರ್ಮಾಣ ಈ ಎಲ್ಲ ಕಾರ್ಯಕ್ರಮಗಳ ಉದ್ದೇಶವಾಗಿದ್ದು ಜಿಲ್ಲೆಯಲ್ಲಿ ಯಶಸ್ವಿಯಾಗಿ ಇಂತಹ ತರಬೇತಿಗಳು ನಡೆಯಲಿ. ಹಾಗೂ ಭವಿಷ್ಯದಲ್ಲಿ ಅಪೌಷ್ಟಿಕತೆಯಿಂದ ಯಾವುದೇ ಜನತೆ ಬಳಲದಂತೆ ಆಗಲಿ ಎಂದು ಆಶಿಸಿದರು.
ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿನಿಂದ ಉತ್ತಮ ಅಡಿಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗ ತಯಾರು ಮಾಡಬೇಕು. ಮಕ್ಕಳಲ್ಲಿ ಎಸ್‌ಕ್ಯು3ಆರ್ ಸೂತ್ರವನ್ನು ಅಳವಡಿಸಬೇಕು. ಎಸ್ ಎಂದರೆ ಸ್ಕಿçÃನಿಂಗ್ ಮಕ್ಕಳು ಎಲ್ಲವನ್ನು ಪರಿಶೀಲಿಸುವ, ಕ್ಯು ಎಂದರೆ ಕ್ವೆಷನಿಂಗ್ ಪ್ರಶ್ನಿಸುವ ಮತ್ತು 3 ಆರ್ ಎಂದರೆ ರೀಡ್, ರಿಸೈಟ್, ರಿವೈಸ್ ಮಾಡುವುದನ್ನು ಕಲಿಸಬೇಕು. ಇದರಿಂದ ಅವರಲ್ಲಿ ಓದುವ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ.
ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊAದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡತ್ತಾ ಹೋಗಬೇಕು. ಅತಿ ಮುದ್ದಿನಿಂದ ಕೇಳಿದ್ದಕ್ಕೆಲ್ಲ ಯೆಸ್ ಎನ್ನಬಾರದು, ಹಣದ ಮತ್ತು ಹಸಿವಿನ ಮಹತ್ವ ತಿಳಿಸಬೇಕು, ಅವರು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು, ಸೇವಾ ಮನೋಭಾವ ಬೆಳೆಸಬೇಕು. ಟಿವಿ ಮೊಬೈಲ್‌ನಿಂದ ಅವರು ಹೊರಬೇಕೆಂದರೆ ಮೊದಲು ಪೋಷಕರು ಅದರಿಂದ ದೂರವಿರಬೇಕು. ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ನೀಡಬೇಕು. ಬಂಡೆಯಿAದ ಉತ್ತಮ ಶಿಲ್ಪ ರೂಪುಗೊಳ್ಳಲು ಪೋಷಕರು, ಗುರುಗಳು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದ ಅವರು ತರಬೇತುದಾರರೊಂದಿಗೆ ಸಂವಾದ ನಡೆಸಿದರು.
ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಮಾತನಾಡಿ, ಇಂದು ಇಲ್ಲಿ ತರಬೇತಿ ಪಡೆದ ತರಬೇತುದಾರರು ತಮ್ಮ ಅಧೀನದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧನಾತ್ಮಕ ಸಲಹೆಗಳನ್ನು ನೀಡಬೇಕು. ಗುಂಪಿನಲ್ಲಿರುವ ಮಕ್ಕಳಿಗೆ ಸ್ಪಂದಿಸುವ ಬಗೆಯನ್ನು ಅರಿತು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಬೇಕು. ಮುಂದಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುವುದು. ತಾವು ಸಹ ವಾರದಲ್ಲಿ ಮೂರು ದಿನ ಕ್ಷೇತ್ರ ಭೇಟಿ ನೀಡುವುದಾಗಿ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಬಿ.ಹೆಚ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ.ಎಸ್. ಕಾರ್ಯಕ್ರಮದ ಕುರಿತು ಮಾತನಾಡಿದರು. ಯುನಿಸೆಫ್ ಕನ್ಸಲ್ಟೆಂಟ್‌ಗಳಾದ ಮನೋಜ್ ಸೆಬಾಸ್ಟಿನ್ ಅನೀಮಿಯಾ ಮುಕ್ತ ಭಾರತ ಕುರಿತು ಹಾಗೂ ಕೆ.ವಿಶ್ವನಾಥ್ ಪೌಷ್ಟಿಕ ಆಹಾರ ಹಾಗೂ ಗ್ರೋಥ್ ಮಾನಿಟರಿಂಗ್ ಕುರಿತು ಮಾತನಾಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಓ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಸಿಡಿಪಿಓ ಗಳು, ಅಂಗನವಾಡಿ ಸೂಪರ್‌ವೈಸರ್‌ಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Hassan Manikya Prakashana ಶಿವಮೊಗ್ಗದ ಕವಿ ಶಿ.ಜು.ಪಾಶಾ ಅವರಿಗೆ “ಜನ್ನ ಕಾವ್ಯ ಪ್ರಶಸ್ತಿ”

Hassan Manikya Prakashana ಹಾಸನದ ಮಾಣಿಕ್ಯ ಪ್ರಕಾಶನ(ರಿ) ರಾಜ್ಯಮಟ್ಟದ ಜನ್ನ ಕಾವ್ಯ...

Vajreshwari Co Operative Society ಶ್ರೀವಜ್ರೇಶ್ವರಿ ಸಹಕಾರ ಸಂಘದಿಂದ ಪ್ರತಿಭಾ ಪುರಸ್ಕಾರ

Vajreshwari Co Operative Society ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ಶ್ರೀ...

Inner Wheel Shivamogga ದುರ್ಬಲರಿಗೆ ನೆರವು ನೀಡಿದಾಗ ಸೇವೆ ಸಾರ್ಥಕ- ಶಿಲ್ಪ ಗೋಪಿನಾಥ್

Inner Wheel Shivamogga ನಾವು ಮಾಡುವ ಸೇವೆ ಸಾರ್ಥಕಗೊಳ್ಳಬೇಕಾದರೆ...

National Education Committee ಬೆಳಗುತ್ತಿ & ಮಲ್ಲಿಗೇನಹಳ್ಳಿಯಲ್ಲಿ ಗಮನ ಸೆಳೆದ ಎನ್.ಎಸ್.ಎಸ್. ವಾರ್ಷಿಕ ಶಿಬಿರ

National Education Committee ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿರಂಗಪ್ರಯೋಗದ...