Rotary Club Shivamogga ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿದೆ. ಆರೋಗ್ಯವೇ ಭಾಗ್ಯ, ಆರೋಗ್ಯವೇ ಸಂಪತ್ತು, ಆರೋಗ್ಯವೇ ನಿಮ್ಮ ಅಮೂಲ್ಯ ಆಸ್ತಿ ಎಂದು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಎಫ್ ಪಿ ಏ ಐ ಶಿವಮೊಗ್ಗ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ವಿತರಣೆ ಕಾರ್ಯಕ್ರಮವನ್ನು ಹಕ್ಕಿಪಿಕ್ಕಿ ಕ್ಯಾಂಪ್ (ಹಸೂಡಿ) ನಲ್ಲಿ ನೆರವೇರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೈಹಿಕ, ಮಾನಸಿಕ ಮತ್ತು ಸಾಮಾಜಿಕ ನೆಮ್ಮದಿಯ ಸ್ಥಿತಿ ಆರೋಗ್ಯ. ಹಾಗೆ ಇದೇ ರೀತಿ ಇನ್ನು ಹೆಚ್ಚು ಹೆಚ್ಚು ಉಚಿತ ಆರೋಗ್ಯ ತಪಾಸಣೆಯ ಶಿಬಿರಗಳನ್ನು ಎಫ್ ಪಿ ಎ ಐ ಶಿವಮೊಗ್ಗ ಶಾಖೆ ಇವರೊಂದಿಗೆ ಇನ್ನು ಮುಂದೆಯೂ ಮಾಡಿಲಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಎಫ್ ಪಿ ಎ ಐ ಸಿಬ್ಬಂದಿ ಗಳಾದ ಸತೀಶ್ ಮತ್ತು ತೇಜಸ್ವಿನಿ ಮತ್ತು ಹೆಡ್ನರ್ಸ್ ಸರಸ್ವತಿ ಹಾಗೂ ಆಶಾ ಕಾರ್ಯಕರ್ತೆ ಗೀತಾ ರವರಿಗೆ ಕೃತಜ್ಞತೆ ತಿಳಿಸಿದರು. ಹಾಗೆಯೇ ವಿಶೇಷವಾಗಿ ಈ ದಿನದ ಕಾರ್ಯಕ್ರಮಕ್ಕೆ ಉಚಿತವಾಗಿ ಔಷಧ ನೀಡಿದ ಸಂಜಯ್ (ಫ್ರಾನ್ಕೊ ಇಂಡಿಯನ್ ಫಾರ್ಮ) ರವರಿಗೂ ಮತ್ತು ರೋಟರಿಯನ್ ಬಸವರಾಜ್ ಬಿ ರವರಿಗೂ ಕೃತಜ್ಞತೆಗಳನ್ನು ತಿಳಿಸಿದರು.
Rotary Club Shivamogga ಎಫ್ ಪಿ ಎ ಐ ನ ಸತೀಶ್ ಮಾತನಾಡಿ ಆರೋಗ್ಯ ತಪಾಸಣೆ ಶಿಬಿರವನ್ನು ಸದುಪಯೋಗಪಡಿಸಿಕೊಳ್ಳಿ ಮತ್ತು ರೋಟರಿ ಕ್ಲಬ್ ನೊಂದಿಗೆ ಕಾರ್ಯಕ್ರಮ ಮಾಡುತ್ತಿರುವುದು ಸಂತೋಷ ತಂದಿದೆ ಇನ್ನು ಹೆಚ್ಚು ಹೆಚ್ಚು ಕಾರ್ಯಕ್ರಮ ಅವರ ಜೊತೆ ಮಾಡುತ್ತೇವೆ ಎಂದ ಅವರು, ರೋಟರಿ ಸಂಸ್ಥೆ ಪಲ್ಸ್ ಪೋಲಿಯೋ ನಿರ್ಮೂಲನೆಗೆ ಪ್ರಮುಖ ಕಾರಣ ಎಂದು ತಿಳಿಸಿದರು.
ಶಿಬಿರದಲ್ಲಿ 200 ಕ್ಕೂ ಹೆಚ್ಚು ಜನ ಪಾಲ್ಗೊಂಡು ಶಿಬಿರವನ್ನು ಸದುಪಯೋಗ ಪಡೆದುಕೊಂಡರು.
ವಿಶೇಷವಾಗಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಲೋಲ್ ಕಿ ಬಾಯಿ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಈಶ್ವರ್, ರವಿ ಕೋಟೊಜಿ, ರಮೇಶ್, ಧರ್ಮೇಂದ್ರ ಸಿಂಗ್, ಬಲರಾಮ್, ಸಂತೋಷ್, ರಾಜಶ್ರೀ ಬಸವರಾಜ್, ದೀಪ ಜಯಶೀಲ ಶೆಟ್ಟಿ ಹಾಗೂ ಆನ್ಸ್ ಕ್ಲಬ್ ನ ಅಧ್ಯಕ್ಷರಾದ ಗೀತಾ ಜಗದೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.