Rotary Organization ಸನ್ಮಾರ್ಗದಲ್ಲಿ ಜೀವನ ಮುನ್ನಡೆಸಲು ಗುರುಗಳ ಮಾರ್ಗದರ್ಶನ ಅತ್ಯಂತ ಅವಶ್ಯ. ಗುರುಗಳ ಮಾರ್ಗದರ್ಶನದಿಂದ ಯಶಸ್ಸು ಗಳಿಸಲು ಸಾಧ್ಯ ಎಂದು ಶಿವಮೊಗ್ಗ ರೋಟರಿ ರಿವರ್‌ಸೈಡ್ ಅಧ್ಯಕ್ಷ ಎಂ.ಆರ್.ಬಸವರಾಜು ಹೇಳಿದರು.
ಕೃಷಿ ನಗರದಲ್ಲಿ ಶಿವಮೊಗ್ಗ ರೋಟರಿ ರಿವರ್‌ಸೈಡ್ ಸಂಸ್ಥೆಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿ, ಶಾಲಾ ಕಾಲೇಜಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಶಕ್ತಿ ಸಾಮಾರ್ಥ್ಯ ಗುರುತಿಸಿ ಅಗತ್ಯ ಪ್ರೋತ್ಸಾಹ ನೀಡುತ್ತಾರೆ. ಸಲಹೆಗಳನ್ನು ಸರಿಯಾದ ಅರ್ಥ ಮಾಡಿಕೊಂಡು ಹಂತ ಹಂತವಾಗಿ ಪ್ರಗತಿ ಸಾಧಿಸುವುದು ವಿದ್ಯಾರ್ಥಿಗಳ ಜವಾಬ್ದಾರಿ ಎಂದು ತಿಳಿಸಿದರು.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಆಗಿರುತ್ತದೆ. ಪಾಲಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಿ ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಜೀವನ ಮೌಲ್ಯಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.
ರೋಟರಿ ಸಂಸ್ಥೆ ವತಿಯಿಂದ ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಮುಖ ದಿನಾಚರಣೆಗಳಲ್ಲಿ ಸಾಧಕರಿಗೆ ವಿಶೇಷ ಗೌರವ ನೀಡಿ ಅಭಿನಂದಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
Rotary Organization ಮೇರಿ ಇಮ್ಯಾಕ್ಯೂಲೇಟ್ ಶಾಲೆ ಶಿಕ್ಷಕಿ ನಾಗರತ್ನ ಚಂದ್ರಶೇಖರಯ್ಯ ಹಾಗೂ ಅಬ್ಬಲಗೆರೆ ಶಾಲೆಯ ಶಿಕ್ಷಕಿ ಆಶಾ ಮಂಜುನಾಥ್ ಅವರಿಗೆ ಸನ್ಮಾನಿಸಲಾಯಿತು.
ಶಿವಮೊಗ್ಗ ರೋಟರಿ ರಿವರ್‌ಸೈಡ್ ಕಾರ್ಯದರ್ಶಿ ಸಿ.ಬಿ.ವಿನಯ್, ಪ್ರಮುಖರಾದ ಎಂ.ಜಗನ್ನಾಥ್, ಎಂ.ಪಿ.ಆನಂದ ಮೂರ್ತಿ, ಪಿ.ರಾಜೇಶ್, ಸಿದ್ದಲಿಂಗಯ್ಯ, ರಾಜೇಶ್ ಗಾಯಕ್‌ವಾಡ್, ಎಸ್.ಪಿ.ಶಂಕರ್, ಸಿ.ಎನ್.ಮಲ್ಲೇಶ್, ನವಲೆ ಈಶ್ವರಪ್ಪ, ರಾಜೇಂದ್ರಕುಮಾರ್, ಬಿ.ಜಿ.ಧನರಾಜ್, ಆರ್.ದೇವೆಂದ್ರಪ್ಪ, ಶಿವಮೊಗ್ಗ ರೋಟರಿ ರಿವರ್‌ಸೈಡ್ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು.