BGS Gurupura ಕ್ರೀಡೆ ಎಂದ ತಕ್ಷಣ, ಕ್ರೀಡಾ ಕ್ಷೇತ್ರ ನಮಗೆ ದೈಹಿಕವಾಗಿ ಅಂದರೆ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಎರಡು ಸ್ವಾಸ್ಥ್ಯವನ್ನು ಕೊಡುವಂತಹ ಕ್ಷೇತ್ರ ಎಂದರೆ ಅದು ಕ್ರೀಡಾಕ್ಷೇತ್ರ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ಅಭಿಪ್ರಾಯ ಪಟ್ಟರು.
ಅವರು ಗುರುಪುರದ ಬಿಜಿಎಸ್ ಶಾಲಾ ಕಾಲೇಜಿನ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ.
ಹಾಗೂ ಅನುದಾನ ರಹಿತ ಶಾಲೆಗಳ ಖಾಸಗಿ ವಿದ್ಯಾ ಸಂಸ್ಥೆಗಳ ಒಕ್ಕೂಟ, ಶಿವಮೊಗ್ಗ. ಇವರ ಸಂಯುಕ್ತ ಆಶ್ರಯ ದಲ್ಲಿ ಆಯೋಜಿಸಲಾಗಿದ್ದ 17 ವರ್ಷ ವಯೋಮಿತಿಯೊಳಗಿನ ಪ್ರೌಢ ಶಾಲೆಗಳ ಅನುದಾನ ರಹಿತ ಶಿವಮೊಗ್ಗ ತಾಲ್ಲೂಕಿನ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು, ಯಾವುದೇ ಒಂದು ಕೆಲಸವನ್ನು ಮಾಡಬೇಕಾದರೆ, ಮನಸ್ಸು ಸ್ವಾಸ್ಥ್ಯವಾಗಿದ್ದರೆ, ಮನಸ್ಸು ಚೆನ್ನಾಗಿದ್ದರೆ, ಎಂತಹ ಕೆಲಸ ಮಾಡಬೇಕಾದರೂ ಮನಸ್ಸು ಬರುತ್ತದೆ. ಹಾಗಾಗಿ ಆ ಮನಸ್ಸು ಸ್ವಾಸ್ಥ್ಯವಾಗಿ, ಆರೋಗ್ಯಕರವಾಗಿ ಇರಬೇಕಾದರೆ,ನಮಗೆ ಮುಖ್ಯವಾಗಿ ಬೇಕಾಗಿರುವುದು ಕ್ರೀಡೆ. ಮಕ್ಕಳೇ ತರಗತಿ ಮಧ್ಯದಲ್ಲಿರುವಂತಹ ಸಂತೋಷಕ್ಕೂ, ಹಾಗೂ ಆಟದ ಮೈದಾನದಲ್ಲಿರುವ ಸಂತೋಷಕ್ಕೂ ಅಜ ಗಜಾಂತರ ವ್ಯತ್ಯಾಸವನ್ನು ಕಾಣುತ್ತೇವೆ.
ಪ್ರಾಣಿ ಪಕ್ಷಗಳು ಸಹ ಎಷ್ಟು ಅದ್ಭುತವಾಗಿ ಆಟ ಆಡ್ತಾ ಇರುತ್ತವೆ. ಪ್ರಾಣಿ ಪಕ್ಷಿಗಳು ಸಹ ಕ್ರೀಡೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುತ್ತವೆ . ಅದಕ್ಕೆ ಗೊತ್ತಿದೆ, ನಾನು ಆಟ ಆಡ್ತಾ ಇದ್ದರೆ ಶಾರೀರಿಕಾವಾಗಿ ಸದೃಢವಾಗಿರುತ್ತೇನೆ ಎಂದು.
ಮಕ್ಕಳೇ ಕ್ರೀಡಾ ಕ್ಷೇತ್ರದಲ್ಲಿಯೂ ಸಹ ಬಿಸಿಲಲ್ಲಿ ಒಂದಿಷ್ಟು ಆಟ ಆಡಿದರೆ, ನಾವು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ, ಹಾಗಾಗಿ ಕ್ರೀಡೆಗೆ ಪ್ರಾಮುಖ್ಯತೆಯನ್ನು ಕೊಡಬೇಕಾಗಿದೆ. ಕೃಷಿಕ ಎಷ್ಟು ಶ್ರಮ ಪಡುತ್ತಾನೆ, ಸೈನಿಕ ಎಷ್ಟು ಕಷ್ಟ ಪಡುತ್ತಾನೆ,ಹಾಗಾಗಿ ಅವರು
ಆರೋಗ್ಯವಂತರಾಗಿರುತ್ತಾರೆ ಎಂಬುದನ್ನು ನಾವು ಗಮನಿಸಬೇಕು ಎಂದರು.
BGS Gurupura ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಜಿ.ಕೆ. ಮಿಥುನ್ ಕುಮಾರ್ ಕ್ರೀಡಾಕೂಟಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್,ಟಿವಿಗಳ ಹಾವಳಿಯಿಂದ ಕ್ರೀಡೆಗೆ ಎಲ್ಲೋ ಒಂದು ರೀತಿ ಪ್ರಾಮುಖ್ಯತೆ ಕಡಿಮೆಯಾಗುತ್ತಾ ಇದೆ ಎಂಬುದು ನನ್ನ ಭಾವನೆ. ಓದಿಗೆ ಕೊಡುವಷ್ಟು ಪ್ರಾಮುಖ್ಯತೆಯನ್ನು, ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಪ್ರಾಮುಖ್ಯತೆಯನ್ನು ಕೊಡಬೇಕು ಎಂದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಶಾರೀರಿಕ ಹಾಗೂ ದೈಹಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಯಾಕೆಂದರೆ ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಕಾಣಬಹುದು. ನಾನು ಕೂಡ ಕ್ರೀಡಾಪಟುನೇ,ವಾಲಿಬಾಲ್, ಬಾಸ್ಕೆಟ್ ಬಾಲ್ ,ಇನ್ನು ಮುಂತಾದ ಕ್ರೀಡೆಗಳನ್ನು ಹೀಗೂ ಕೂಡ ಆಡುತ್ತೇನೆ. ಕ್ರೀಡೆಯಲ್ಲಿ ನಾಯಕತ್ವದ ಗುಣ ಬೆಳೆಸುತ್ತದೆ.ಸೋಲು ಗೆಲುವನ್ನು ಹೇಗೆ ಒಂದೇ ಸಮನಾಗಿ ತೆಗೆದುಕೊಳ್ಳಬಹುದು ಎಂಬುದನ್ನು ಕ್ರೀಡೆಯಲ್ಲಿ ಕಾಣಬಹುದು.
ಅಂಕಗಳು ಒಂದು ಸಲ ಕಡಿಮೆ ಆಗುತ್ತದೆ, ಹೆಚ್ಚು ಆಗುತ್ತದೆ, ಇಂತಹ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಇಂತಹ ನೂನ್ಯತೆಗಳಿಂದ ದೂರವಾಗಬಹುದು, ಹಾಗಾಗಿ ಪ್ರತಿದಿನ ವಿದ್ಯಾರ್ಥಿಗಳು ಅರ್ಧ ಗಂಟೆ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯ, ಧೈರ್ಯ ವಂತರಾಗಲು ಕಾರಣವಾಗುತ್ತದೆ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್ ಮಾತನಾಡಿ, ಪ್ರತಿಯೊಬ್ಬ ಮಕ್ಕಳು ಸಹ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರತಿಭಾವಂತರಾಗಿರುತ್ತಾರೆ. ಅಂತಹ ಪ್ರತಿಭೆಗಳನ್ನು ಹೊರಗೆ ತರುವುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಕ್ರೀಡೆಯಲ್ಲಿ ಶ್ರಮಪಟ್ಟು ಮುಂದೆ ಬರಬೇಕೆಂದರೆ, ತಾವೆಲ್ಲರೂ ಸತತ ತರಬೇತಿಯನ್ನು ಪಡೆದು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಆರ್.ಗಿರೀಶ್ ಮಾತನಾಡಿ,ಕ್ರೀಡಾಪಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಸಂಕಲ್ಪ ಇರಬೇಕು. ಸತತ ಪ್ರಯತ್ನದಿಂದ ಜೀವನವನ್ನು ಹಾಗೂ ಕ್ರೀಡೆಗಳಲ್ಲಿ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಅಧಿಕಾರಿಗಳಾದ ಶ್ರೀ ನಿರಂಜನ್ ಮೂರ್ತಿ, ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್, ದಿನೇಶ್, ಖಾಸಗಿ ವಿದ್ಯಾ ಸಂಸ್ಥೆಗಳ ಒಕ್ಕೂಟದ ಪದಾಧಿಕಾರಿಗಳು ,
ಬಿಜಿಎಸ್ ಗುರುಕುಲ ಶಾಲಾ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ಎಸ್. ಹೆಚ್. ಮತ್ತು ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರುಗಳು , ಉಪನ್ಯಾಸಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
BGS Gurupura ತರಗತಿ ಪಾಠದ ಸಂತೋಷ & ಆಟದ ಮೈದಾನದ ಸಂತೋಷ ಎರಡೂ ಭಿನ್ನ ಅನುಭವಗಳು – ಶ್ರೀಪಸನ್ನನಾಥಶ್ರೀ
Date: