Saturday, March 28, 2026
Saturday, March 28, 2026

JCI Institute ಸೆ.15 ರವರೆಗೆ ಜಿಸಿಐ ಹಬ್ಬ ಆಚರಣೆ- ಪೂರ್ಣಿಮಾ ಸುನೀಲ್

Date:

JCI Institute ಸೇವಾ ಮನೋಭಾವ ಹಾಗೂ ನಾಯಕತ್ವ ಗುಣ ಬೆಳೆಸುವಲ್ಲಿ ಜೆಸಿಐ ಮಹತ್ತರ ಪಾತ್ರ ವಹಿಸುತ್ತದೆ ಎಂದು ಜೆಸಿಐ ಸಪ್ತಾಹ ಸಂಯೋಜಕಿ ಪೂರ್ಣಿಮಾ ಸುನೀಲ್ ಹೇಳಿದರು.
ಜೆಸಿಐ ಸಪ್ತಾಹದ ಅಂಗವಾಗಿ ಮಿಷನ್ ಕಾಂಪೌಂಡ್‌ನಲ್ಲಿ ಇರುವ ಪಾರ್ಕ್ ನಲ್ಲಿ ಜೆಸಿಐ ಇಂಡಿಯಾದ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, ಸಮಾಜಮುಖಿ ಕೆಲಸದೊಂದಿಗೆ ತರಬೇತಿ ನೀಡುವ ಜತೆಯಲ್ಲಿ ಸ್ವಸ್ಥ ಸಮಾಜ ಕಟ್ಟಲು ನಿರಂತರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಜೆಸಿಐ ಸಂಸ್ಥೆ ಪ್ರತಿ ವರ್ಷ ಸಪ್ತಾಹ ನಡೆಸುತ್ತಿದ್ದು, ಪ್ರಸ್ತಕ ಸಾಲಿನಲ್ಲಿ ಸೆ. 9ರಿಂದ 15ರವರೆಗೆ ಜೆಸಿಐ ಹಬ್ಬ ಆಚರಿಸುತ್ತಿದ್ದು, ಸಪ್ತಾಹದಲ್ಲಿ ಸಾರ್ವಜನಿಕ ಸಂವಹನ ಹಾಗೂ ಸೇವೆಗೆ ಸಂಬಂಧಿಸಿ ವೈವಿಧ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸೇವೆ ಹಾಗೂ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು.
JCI Institute ಜೆಸಿಐ ಸಂಸ್ಥೆಯು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೇವಾ ಕಾರ್ಯಗಳನ್ನು ನಡೆಸುತ್ತಿದ್ದು, ಶಾಲೆಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡುತ್ತದೆ. ಸಾರ್ವಜನಿಕರ ಅನುಕೂಲಕ್ಕಾಗಿ ಆರೋಗ್ಯ ಜಾಗೃತಿ ಶಿಬಿರಗಳನ್ನು ನಡೆಸಲಾಗುತ್ತದೆ. ಯುವಜನರಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕೆಲಸವನ್ನು ಜೆಸಿಐ ಸಂಸ್ಥೆ ಮಾಡುತ್ತದೆ ಎಂದು ತಿಳಿಸಿದರು.
ಶುಭಂ ಹೊಟೇಲ್ ಮಾಲೀಕರಾದ ಜೆಸಿ ಚಂದ್ರಹಾಸ ಶೆಟ್ಟಿ, ಉದಯ ಕದಂಬ ಅವರ ಸಹಕಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಜಡ್‌ಪಿ ಜೆಸಿ ಅನುಷ್ ಗೌಡ, ಪಿಜಡ್ ಅಧಿಕಾರಿಗಳು, ಶಿವಮೊಗ್ಗದ ಜೆಸಿಐ ಘಟಕದ ಎಲ್ಲ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa 2026-27 ನೇ ಶೈಕ್ಷಣಿಕ ವರ್ಷದಲ್ಲಿ ಒಂದನೇ ತರಗತಿಗೆ ದಾಖಲಾಗುವ ಮಕ್ಕಳ ವಯೋಮಿತಿಯಲ್ಲಿ 60 ದಿನ ಸಡಿಲಿಕೆ- ಮಧು ಬಂಗಾರಪ್ಪ.

Madhu Bangarappa “ಒಂದನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಆರು ವರ್ಷ ತುಂಬಿರಲೇಬೇಕು...

MADHU BANGARAPPA ಶಿಕ್ಷಣದಲ್ಲಿ ಹಿಂದಿ ಹೇರಿಕೆ ವಿರೋಧ ಮತ್ತು ‘ಪಾಸ್ ವಿಥೌಟ್ ಹಿಂದಿ’ ಜಾರಿ ಕುರಿತು ಚರ್ಚೆ

MADHU BANGARAPPA ರಾಜ್ಯದ ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖಾ ಮಂತ್ರಿಗಳಾದ ಮಧುಬಂಗಾರಪ್ಪ...

Morarji Desai Residential School ಜಿಲ್ಲೆಯ ಮೊರಾರ್ಜಿ ದೇಸಾಯಿ‌ ವಸತಿ ಶಾಲೆ 6 ನೆ ತರಗತಿಗೆ ಪ್ರವೇಶ ಪರೀಕ್ಷೆ.

Morarji Desai Residential School ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯ...

Mylaralingeshwara Temple Shimoga ಮಾರ್ಚ್ 29. ಮೈಲಾರೇಶ್ವರ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

Mylaralingeshwara Temple in Shimoga ಶಿವಮೊಗ್ಗ ನಗರದಲ್ಲಿನ ಶ್ರೀ ಮೈಲಾರೇಶ್ವರ ದೇವಸ್ಥಾನನಲ್ಲಿ...