Forest Department ಕರ್ನಾಟಕ ಅರಣ್ಯ ಅಭಿವೃದ್ಧಿ ನಿಧಿ-ಪ್ಲೆಕ್ಸಿ ಫಂಡ್ (ಕೆ.ಎಫ್.ಡಿ.ಎಫ್) ಹಾಗೂ ಆರ್.ಎಸ್.ಪಿ.ಡಿ ಲೆಕ್ಕಶೀರ್ಷಿಕೆಯಡಿ ಬೆಳೆಸಲಾದ 8×12 ಅಳತೆಯ ಕಸಿ ಸಸಿಗಳನ್ನು ಪ್ರಸ್ತುತ ಸಾಲಿಗೆ ಇಲಾಖಾ ಹಂಚಿಕೆ/ಸಾರ್ವಜನಿಕ/ರೈತರಿಗೆ ವಿತರಣೆ ಮಾಡಲು ಧಾರವಾಡ ಸಂಶೋಧನಾ ವೃತ್ತ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Forest Department ಅದೇ ರೀತಿ, ಶಿವಮೊಗ್ಗ ಸಂಶೋಧನಾ ವಲಯದಲ್ಲಿ 2024-25ನೇ ಸಾಲಿಗೆ ಅರಣ್ಯ ಅಭಿವೃದ್ಧಿ ನಿಧಿ-ಪ್ಲೆಕ್ಸಿ ಫಂಡ್ (ಕೆ.ಎಫ್.ಡಿ.ಎಫ್) ಯೋಜನೆಯಡಿಯಲ್ಲಿ 8×12 ಅಳತೆಯ ಪಾಲಿಥೀನ್ ಬ್ಯಾಗಿನಲ್ಲಿ 10000 ಕಸಿಕಟ್ಟಿದ ಸಸಿಗಳನ್ನು ಇಲಾಖೆಗೆ ವಿತರಿಸಲು ಹಾಗೂ ಆರ್.ಎಸ್.ಪಿ.ಡಿ.ಯೋಜನೆಯಡಿಯಲ್ಲಿ 8000 ಕಸಿಕಟ್ಟಿದ ಸಸಿಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ವಿತರಿಸಲು ಸಸಿಗಳು ಲಭ್ಯವಿದೆ. ಅರಣ್ಯ ಇಲಾಖೆಗೆ ಹಾಗೂ ರೈತರು/ಸಾರ್ವಜನಿಕರು ಪಡೆದುಕೊಳ್ಳಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ; 9481996689,9535598470 ಸಂರ್ಕಿಸಬಹುದು.