Rotary Shivamogga ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ರೋಟರಿ ಸದಸ್ಯರು ಪ್ರಶಂಸಾರ್ಹರು ರೋಟರಿ ಮಾಜಿ ಸಹಾಯಕ ಗವರ್ನರ್ ವಸಂತ್ ಹೋಬಳಿದಾರ್ ಹೇಳಿದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ವತಿಯಿಂದ ಆಯೋಜಿಸಿದ್ದ ಸದಸ್ಯತ್ವ ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯಲ್ಲಿ ಸದಸ್ಯರ ಜವಾಬ್ದಾರಿ ಹಾಗೂ ಸೇವಾ ಕಾರ್ಯಗಳ ಬಗ್ಗೆ ಮಾತನಾಡಿ, ಹೆಚ್ಚು ಹೆಚ್ಚು ಯುವಜನರು ಸಮುದಾಯಗಳೊಂದಿಗೆ ಬೆರೆತು ಸಮುದಾಯದ ಜತೆಗೆ ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಲು ರೋಟರಿ ವೇದಿಕೆಗಳು ಸಹಕಾರಿಯಾಗಬಲ್ಲವು ಎಂದು ತಿಳಿಸಿದರು.
Rotary Shivamogga ರೋಟರಿ ಸದಸ್ಯರು ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅಧಾರ ಸ್ತಂಭಗಳಿದ್ದಂತೆ. ಅವರಿಗೆ ಜವಾಬ್ದಾರಿಗಳು ಹೆಚ್ಚಿದ್ದು, ಅವುಗಳನ್ನ ಬಹಳ ಮುತುವರ್ಜಿಯಿಂದ ನಿಭಾಯಿಸಬೇಕಾಗುತ್ತದೆ. ಸಮಾಜದಲ್ಲಿ ರೋಟರಿ ಸದಸ್ಯರಿಗೆ ವಿಶೇಷವಾದ ಸ್ಥಾನಮಾನವಿದೆ. ಅವರ ಸೇವಾಪರತೆಯನ್ನು ಕಂಡು ಸಾರ್ವಜನಿಕ ಸದಾಭಿಪ್ರಾಯ ಬಹುಉತ್ತುಂಗದಲ್ಲಿದೆ. ಸಮುದಾಯದ ಅವಶ್ಯಕತೆಗಳನ್ನ ಪರಾಮರ್ಶಿಸಿ ಅದಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸಬೇಕು ಎಂದರು.
ರೋಟರಿ ಪಿಡಿಜಿ ಜಿ.ಎನ್.ಪ್ರಕಾಶ್ ಸಂಸ್ಥೆ ಕುರಿತು ಮಾತನಾಡಿ, ಎಲ್ಲ ರೋಟರಿ ಸದಸ್ಯರು ರೋಟರಿ ಮೂಲ ಉದ್ದೇಶ, ಕಾರ್ಯವೈಖರಿ ಮತ್ತು ಆಲೋಚನೆಗಳನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಂಡು ರೋಟರಿ ಚಿಂತನೆಗೆ ಅನುಗುಣವಾಗಿ ಕಾರ್ಯ ಪ್ರವೃತ್ತರಾಗಬೇಕು. ಚತುರ್ವಿಧ ಪರೀಕ್ಷೆ, ಫ್ಯೂಚರ್ ವಿಷನ್ ಪ್ಲಾನ್, ಫೈವ್ ಅವೆನ್ಯೂಸ್ ಆಫ್ ಸರ್ವಿಸಸ್, ಸ್ಟೇಟರ್ಜಿ ಪ್ಲಾನಿಂಗ್, ಡಿಸಿಗ್ನೇಟೆಡ್ ಮಂತ್ಸ್ ಹೀಗೆ ಹಲವಾರು ವಿಚಾರಗಳು ಸಮಾಜಕ್ಕೆ ಉತ್ತಮ ನೇತಾರರನ್ನು ಕೊಡುವಲ್ಲಿ, ಪೊಲಿಯೋ ಮತ್ತು ಸಾಕ್ಷರತಾ ಮಿಷನ್ ರೀತಿ ಪರಿಣಾಮಕಾರಿ ಯೋಜನೆಗಳನ್ನು ಸಾದರಪಡಿಸುವಲ್ಲಿ ರೋಟರಿ ಮಹತ್ತರ ಪಾತ್ರ ವಹಿಸಿದೆ ಎಂದು ಹೇಳಿದರು.
ಕಿರಣ್ ಕುಮಾರ್.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಈಶ್ವರ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ರವಿ ಕೋಟೋಜಿ, ಡಾ. ಗುಡುದಪ್ಪ ಕಸಬಿ, ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಅರುಣ್ ದೀಕ್ಷಿತ್ ಉಪಸ್ಥಿತರಿದ್ದರು. ಸೆಂಟ್ರಲ್ ಕ್ಲಬ್ಬಿನ ಹೊಸ ಸದಸ್ಯರು ಮತ್ತು ಈಸ್ಟ್ ಕ್ಲಬ್ಬಿನ ಹೊಸ ಸದಸ್ಯರು ಕಾರ್ಯಗಾರದ ಪ್ರಯೋಜನವನ್ನು ಪಡೆದುಕೊಂಡರು.
Rotary Shivamogga ಯುವಜನರೇ ಹೆಚ್ಚಾಗಿ ಸಮುದಾಯದೊಂದಿಗೆ ಬೆರೆತು ದೇಶದ ಅಭಿವೃದ್ದಿಗೆ ಶ್ರಮಿಸಲು ರೋಟರಿ ವೇದಿಕೆ ಸಹಕಾರಿ- ವಸಂತ ಹೋಬಳಿದಾರ್
Date: