Bharat Scouts and Guides ಶಿಸ್ತು ಹಾಗೂ ಸಮಯ ಪ್ರಜ್ಞೆ ಜೀವನದ ಯಶಸ್ಸಿನ ಮೂಲ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ, ಮಾಜಿ ಸಚಿವ ಪಿಜಿಆರ್ ಸಿಂಧ್ಯಾ ಹೇಳಿದರು.
ಕಿರಿಯ, ಹಿರಿಯ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಜಿಲ್ಲಾಮಟ್ಟದ ಪ್ಲಾಕ್ ಲೀಡರ್, ಕ್ಲಬ್ ಮಾಸ್ಟರ್, ಗೈಡ್ ಕ್ಯಾಪ್ಟನ್, ಸ್ಕೌಟ್ ಮಾಸ್ಟರ್ ತರಬೇತಿ ಶಿಬಿರದಲ್ಲಿ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ನಮಗೆ ಮಾನ್ಯತೆ ಕೊಡುತ್ತದೆ. ಸಮವಸ್ತ್ರವು ನಾವೆಲ್ಲಾ ಒಂದೇ ಭಾವನೆ ಬೆಳೆಸುತ್ತದೆ. ಸಮಾಜದ ಬದಲಾವಣೆ ತರುವ ಶಕ್ತಿ ಸಾಮೂಹಿಕವಾಗಿ ಮಾಡಿದಾಗ ಬರುತ್ತದೆ ಎಂದು ತಿಳಿಸಿದರು.
ಶಿಕ್ಷಕ ವೃತ್ತಿ ಬಹಳ ಶ್ರೇಷ್ಠ. ದೇವರು ನಮಗೆ ಕೊಟ್ಟಿರುವ ವರ ಎಂಬ ಹೆಮ್ಮೆ ಇರಬೇಕು. ಸಮಾಜದ ಓರೆಕೋರೆಗಳನ್ನು ತಿದ್ದುವ ಶಕ್ತಿ ಶಿಕ್ಷಕರಿಗೆ ಇರುತ್ತದೆ. ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಒಳ್ಳೆಯ ಆಲೋಚನೆಗಳನ್ನು ಬೆಳೆಸಬೇಕು ಎಂದರು.
ಇದೇ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಕೆ.ಪಿ.ಬಿಂದುಕುಮಾರ್ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಬದುಕುವ ಕಲೆ, ಆತ್ಮವಿಶ್ವಾಸ ಹಾಗೂ ಉತ್ತಮ ಜೀವನಶೈಲಿ ಜತೆ ಸಂವಹನ ಕಲೆ ಕಲಿಸುತ್ತದೆ. ಆದ್ದರಿಂದ ಇಲ್ಲಿನ ತರಬೇತಿ ಹೊಂದಿದ ಶಿಕ್ಷಕರು ಶಾಲಾ ಹಂತದಲ್ಲಿ ಘಟಕಗಳನ್ನು ಸ್ಥಾಪಿಸಿ ಸ್ಕೌಟ್ಸ್ ಮತ್ತು ಗೈಡ್ಸ್ ತತ್ವಗಳು, ಮನೆ ಮನೆಗೆ ತಲುಪಿಸುವ ಕಾರ್ಯವಾಗಬೇಕು. ಪ್ರತಿ ಮನೆಯಲ್ಲಿ ಸ್ಕೌಟ್, ಗೈಡ್ ಇರಬೇಕು ಎಂದು ಹೇಳಿದರು.ಸಂಸ್ಥೆಯಿಂದ ತರಬೇತಿ ಶಿಬಿರದ ಜತೆಗೆ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಮಕ್ಕಳನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
Bharat Scouts and Guides ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪದಾಧಿಕಾರಿಗಳಾದ ಶಿವಶಂಕರ್, ಪ್ರೊ. ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್, ಆಂಜನೇಯ, ವೀರೇಶಪ್ಪ, ರಾಜೇಶ್ ಅವಲಕ್ಕಿ, ಆನಂದ್, ಶಕುಂತಲಾ ಚಂದ್ರಶೇಖರ್, ರವಿ, ಲಕ್ಷ್ಮೀ ಕೆ.ರವಿ, ಜಿ.ವಿಜಯಕುಮಾರ್, ಜ್ಯೋತಿ, ಗೀತಾ ಚಿಕ್ಕಮಠ್, ವಿದ್ಯಾ ಕೃಷ್ಣಸ್ವಾಮಿ, ಎಂ.ಪರಮೇಶ್ವರಯ್ಯ, ವಿನಯ ಭೂಷಣ್, ಅಶೋಕ್‌ಕುಮಾರ್, ಕೆ.ವಿ.ಚಂದ್ರಶೇಖರ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
Bharat Scouts and Guides ಶಿಕ್ಷಕ ವೃತ್ತಿ ಶ್ರೇಷ್ಠ.ದೇವರು ನಮಗೆ ಕೊಟ್ಟಿರುವ ವರ ಎಂಬ ಹೆಮ್ಮೆ ಇರಬೇಕು- ಪಿ.ಜಿ.ಆರ್.ಸಿಂಧ್ಯಾ
Date: