College of Veterinary Medicine ಶಿವಮೊಗ್ಗ ನಗರದ ಪಶುವೈದ್ಯ ಮಹಾವಿದ್ಯಾಲಯ ಪಶುವೈದ್ಯ ವಿಜ್ಞಾನಿ ಡಾ|| ಎನ್.ಬಿ.ಶ್ರೀಧರ ಅವರಿಗೆ 2024 ನೇ ಸಾಲಿನ ” “ಶ್ರೇಷ್ಟ ಸಂಶೋಧಕ” ಪ್ರಶಸ್ತಿ ನೀಡಿ ಶಿವಮೊಗ್ಗದ ಪಶುವೈದ್ಯ ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇವರು ಪಶುವೈದ್ಯ ರಂಗದಲ್ಲಿ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಷಯವನ್ನು ಬೋಧನೆ ಮಾಡುತ್ತಿದ್ದಾರೆ.200 ಕ್ಕೂ ಹೆಚ್ಚಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ವಿದ್ಯಾರ್ಥಿಗಳಿಗೆ ಸಂಶೋಧನೆಯಲ್ಲಿ ಮಾರ್ಗದರ್ಶನ ಮಾಡಿದ್ದಾರೆ. ಜಾನುವಾರುಗಳಲ್ಲಿ ಬರುವ ಅನೇಕ ರೀತಿಯ ಸಸ್ಯಜನ್ಯ ಶಿಲೀಂದ ವಿಷಜನ್ಯ ಮತ್ತಿತರ ನಿಗೂಢ ಕಾಯಿಲೆಗಳ ಬಗ್ಗೆ ಸಂಶೋಧನೆ ನಡೆಸಿ ಅವುಗಳಿಗೆ ಕಾರಣ ಮತ್ತು ಚಿಕಿತ್ಸೆಯನ್ನು ಪತ್ತೆ ಮಾಡಿ ಜಾನುವಾರುಗಳ ಉಳಿವಿಗೆ ಕಾರಣರಾಗಿದ್ದಾರೆ.
College of Veterinary Medicine ಇಂತಹ ಸಂಶೋಧನಾ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇತ್ತೀಗಷ್ಟೆ ಇವರಿಗೆ ಭಾರತೀಯ ಪಶುವೈದ್ಯಕೀಯ ಔಷಧಶಾಸ್ತ್ರಜ್ಞರ ಮತ್ತು ವಿಷಶಾಸ್ತ್ರಜ್ಞರ ಸಂಘವು”ರಾಷ್ಟ್ರೀಯ ಫೆಲೊ” ಪ್ರಶಸ್ತಿ ನೀಡಿರುವುದನ್ನು,ಕರ್ನಾಟಕರಾಜ್ಯ ಪಶುವೈದ್ಯ ಸಂಘವು”ಜೀವ ಮಾನದ ಶ್ರೇಷ್ಟ ಪಶುವೈದ್ಯ” ಪ್ರಶಸ್ತಿ ನೀಡಿರುವುದನ್ನು ಮತ್ತುಕರ್ನಾಟಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯವು”ಶ್ರೇಷ್ಟಶಿಕ್ಷಕ” ಪ್ರಶಸ್ತಿಯನ್ನು ನೀಡಿರುವುದನ್ನು ಈ ಸಂದರ್ಭದಲ್ಲಿ ನೆನೆಯಬಹುದಾಗಿದೆ.