Youth Hostel Taranodaya ಉತ್ತಮ ಸಂಘಟನೆಯಿಂದ ಸದಸ್ಯರಿಗೆ ಹೆಚ್ಚಿನ ಅವಕಾಶಗಳಿದ್ದು, ಸಂಘಟನೆ ಸದೃಢಗೊಳ್ಳಲು ಎಲ್ಲರ ಸಹಕಾರ ಮುಖ್ಯ ಎಂದು ಯೂತ್ ಹಾಸ್ಟೆಲ್ ತರಣೋದಯ ಘಟಕದ ಅಧ್ಯಕ್ಷ ಎನ್.ಗೋಪಿನಾಥ್ ಹೇಳಿದರು.
ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯೂತ್ ಹಾಸ್ಟೆಲ್ ತರುಣೋದಯ ಘಟಕದ ಹಿರಿಯ ಸದಸ್ಯರಾದ ಸಿದ್ದಲಿಂಗಯ್ಯ ದಂಪತಿ, ವೀರಭದ್ರಪ್ಪ ಪೂರ್ಣಿಮಾ ಚಂದ್ರಶೇಖರ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿ ವರ್ಷ ನೂರಾರು ಸದಸ್ಯರನ್ನು ಹಿಮಾಲಯ ಚಾರಣಕ್ಕೆ ಕಳಿಸುತ್ತಿರುವುದರಿಂದ ಹಾಗೂ ನಮ್ಮ ಘಟಕ ರಾಷ್ಟ್ರ ಮಟ್ಟದಲ್ಲಿ ಅತ್ಯುತ್ತಮ ಕಾರ್ಯ ಮಾಡುತ್ತಿದ್ದು, ಅ.ನಾ.ವಿಜಯೇಂದ್ರ ಅವರನ್ನು ಇತ್ತೀಚೆಗೆ ರಾಷ್ಟ್ರೀಯ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಚೇರ್ಮನ್ ವಾಗೇಶ್ ಮಾತನಾಡಿ, ಸದಸ್ಯತ್ವದಲ್ಲಿ ರಾಜ್ಯದಲ್ಲಿ ನಮ್ಮ ಘಟಕ ಎರಡನೇ ಸ್ಥಾನದಲ್ಲಿ ಇದ್ದು, ಪ್ರಥಮ ಸ್ಥಾನಕ್ಕೆ ಏರಲು ತಮ್ಮೆಲ್ಲರ ಸಹಕಾರ ಮುಖ್ಯ. ಎಲ್ಲರ ಸಂತೋಷಕ್ಕಾಗಿ ಚಾರಣ ಹಮ್ಮಿಕೊಳ್ಳುತ್ತೇವೆ. ದೇಶಾದ್ಯಂತ ವರ್ಷದ ಎಲ್ಲ ಹವಾಗುಣಕ್ಕೆ ಹೊಂದುವಂತಹ ರಾಷ್ಟ್ರೀಯ ಚಾರಣ ಏರ್ಪಡಿಸಲಾಗುತ್ತದೆ. ಸದಸ್ಯರು ಅದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
Youth Hostel Taranodaya ಗೌರವ ಸ್ವೀಕರಿಸಿ ಮಾತನಾಡಿದ ಅ.ನಾ.ವಿಜಯೇಂದ್ರ, ಯೂತ್ ಹಾಸ್ಟೇಲ್ಸ್ ಇತ್ತೀಚೆಗೆ ಚಾರಣ ಮಾಡಲು ಆಗದವರಿಗೆ ವಿದೇಶಿ, ಧಾರ್ಮಿಕ, ಸಾಮಾಜಿಕ ಪ್ರಸಿದ್ಧಿ ಹೊಂದಿದ ಪ್ರದೇಶಕ್ಕೆ ಪ್ರವಾಸವನ್ನು ಕಡಿಮೆ ಖರ್ಚಿನಲ್ಲಿ ಕರೆದುಕೊಂಡು ಹೋಗಿ ಬರಲಾಗುತ್ತಿದೆ ಎಂದರು.
ಯಶೋಧಾ ಶೇಖರ್ ಪ್ರಾರ್ಥಿಸಿದರು. ಭಾರತಿ ಗುರುಪಾದಪ್ಪ ಸ್ವಾಗತಿಸಿದರು. ಡಾ. ಪ್ರಕೃತಿ ಮಂಚಾಲೆ ವಾರ್ಷಿಕ ವರದಿ ವಾಚಿಸಿದರು. ನಾಗರಾಜ್ ಲೆಕ್ಕಪತ್ರ ಮಂಡಿಸಿದರು. ಎಸ್.ಉಮೇಶ್ ಚಾರಣದ ಅನುಭವ ತಿಳಿಸಿದರು. ಸುಮಾರಾಣಿ ನಿರೂಪಿಸಿದರು. ಕಾರ್ಯದರ್ಶಿ ಸುರೇಶ್ ಕುಮಾರ್ ವಂದಿಸಿದರು.