Rotary Club Shivamogga ಪರಿಸರ ಜಾಗೃತಿಗಾಗಿ ಮಾನ್ಸೂನ್ ಸೈಕಲ್ ಜಾಥ ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ಮತ್ತು ಡೆಕಾಥ್ಲಾನ್ ಸಂಸ್ಥೆಯ ಸಹಯೋಗದೊಂದಿಗೆ ಹಸಿರಿನ ಉಳಿವುಗಾಗಿ ಸೈಕಲ್ ಜಾಥವನ್ನು ಭಾನುವಾರ ಬೆಳಗ್ಗೆ ಸೆಂಟ್ರಲ್ ಮಾಲ್ ನಿಂದ 30 ಕಿಲೋ ಮೀಟರ್ ಸೈಕಲ್ ಜಾಥ ನಡೆಯಿತು.
ಜಾಥ ಕಾರ್ಯಕ್ರಮವನ್ನು ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ ನ ಅಧ್ಯಕ್ಷರಾದ ಕಿರಣ್ ಕುಮಾರ್ ಉದ್ಘಾಟಿಸಿದರು. ಸುಮಾರು ನೂರು ಜನ ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು ಕಾರ್ಯಕ್ರಮದ ಉದ್ಘಾಟನೆಯನ್ನು ಅವರು ಮಾಡಿದರು.
ಡೆಕಾಥ್ಲಾನ್ ಸಂಸ್ಥೆಯ ಮ್ಯಾನೇಜರ್ ಅಮೃತ ಮಾತನಾಡಿ, ಸಂಸ್ಥೆಯಿಂದ ಇನ್ನು ಮುಂದೆ ಇದೇ ರೀತಿ ಹೆಚ್ಚೆಚ್ಚು ಕಾರ್ಯಕ್ರಮ ನಡೆಯುತ್ತದೆ ಹಾಗೂ ಇದೇ ರೀತಿ ರೋಟರಿ ಕ್ಲಬ್ ಸೆಂಟ್ರಲ್ ನ ಸಹಕಾರವನ್ನು ಬಯಸುತ್ತೇವೆ ಎಂದು ತಿಳಿಸಿದರು.
Rotary Club Shivamogga ಜಾಥಾ ಕಾರ್ಯಕ್ರಮದಲ್ಲಿ ಡೆಕಾಥ್ಲಾನ್ ಸಂಸ್ಥೆಯ ಮ್ಯಾನೇಜರ್ ಅಮೃತ್ ಮತ್ತು ಸ್ಪೋರ್ಟ್ಸ್ ಲೀಡರ್ಗಳಾದ ನಿಖಿಲ್ ಮತ್ತು ಅಮಿತ್ ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಶಿವಮೊಗ್ಗ ಸೆಂಟ್ರಲ್ ನಿಂದ ಸುಮಾರು 20 ಕ್ಕೂ ಹೆಚ್ಚು ಸದಸ್ಯರು ಈ ಸೈಕಲ್ ಜಾಥದಲ್ಲಿ ಭಾಗವಹಿಸಿದ್ದು, ವಿಶೇಷ ಪಾಸ್ ಅಸಿಸ್ಟೆಂಟ್ ಗೌರ್ನರ್ ರವಿ ಕೋಟೋಜಿ ರಮೇಶ್ ಸಂತೋಷ್ ಬಸವರಾಜ್ ಇನ್ನು ಹಲವಾರು ಸದಸ್ಯರು ಭಾಗವಹಿಸಿದ್ದರು.