B.Y. Raghavendra ಸಂಸದ ಶ್ರೀ ಬಿ.ವೈ. ರಾಘವೇಂದ್ರರವರು ಮಾಜಿ ಗೃಹ ಸಚಿವರೂ ಹಾಗೂ ತೀರ್ಥಹಳ್ಳಿ ಶಾಸಕರು ಆದ ಶ್ರೀ ಅರಗ ಜ್ಞಾನೇಂದ್ರರವರ ಸಮಕ್ಷಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಇತರೆ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಸುದೀರ್ಘವಾಗಿ ಚರ್ಚಿಸಿ ಈ ಕೆಳಕಂಡಂತೆ ಜಿಲ್ಲಾಡಳಿತಕ್ಕೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಂಸದರಾದ ಶ್ರೀ ಬಿ. ವೈ. ರಾಘವೇಂದ್ರರವರು ಸೂಚನೆ ನೀಡಿದರು.
ಅನುಸೂಚಿತ ಜಾತಿ ಮತ್ತು ಬುಡಕಟ್ಟು ಮತ್ತು ಪರಾಂಪರಿಕ ಅರಣ್ಯವಾಸಿಗಳು (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ ಕಾಯಿದೆ – 2006 ಮತ್ತು ನಿಯಮ 2008 ರ ಕಲಂ 5 ರನ್ವಯ) ಅರ್ಜಿ ಸಲ್ಲಿಸಿದ್ದಲ್ಲಿ ಈ ಅರ್ಜಿ ವಿಲೇ ಆಗುವವರೆಗೂ ಯಾರಿಗೂ ಒತ್ತುವರಿಗೆ ಸಂಬಂಧಿಸಿದ ನೋಟೀಸ್ ನೀಡುವಂತಿಲ್ಲವೆಂದು ಅದೇ ರೀತಿ ಅರಣ್ಯ (ಸಂರಕ್ಷಣಾ) ಕಾಯಿದೆಯಡಿ ಪ್ರಮುಖ ಯೋಜನೆಗಳಡಿ ಪುನರ್ವಸತಿಗೆ ಅರಣ್ಯ ಬಿಡುಗಡೆ ಆಗಿ ಡಿ-ನೋಟಿಫೈ ಆಗದೇ ಇರುವ ಫಲಾನುಭವಿಗಳಿಗೆ ಯಾವುದೇ ನೋಟೀಸ್ ಮತ್ತು ಒತ್ತುವರಿ ತೆರವುಗೊಳಿಸುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
B.Y. Raghavendra 1996 ರ ಸುಪ್ರಿಂ ಕೋರ್ಟ್ ತೀರ್ಪಿನ (ಶ್ರೀ ಗೋಧಾವರ್ಮನ್ ಪ್ರಕರಣ) ಪ್ರಕಾರ 27-04-1978 ಕ್ಕಿಂತ ಹಿಂದೆ ಪೂರ್ವ ಒತ್ತುವರಿ ಆಗಿರುವ ಜಮೀನುಗಳನ್ನು ಮಾನ್ಯ ಜಿಲ್ಲಾಧಿಕಾರಿಗಳಿಂದ ಅನುಮೋದಿತ ಫಲಾನುಭವಿಗಳನ್ನು ಗುರುತಿಸಿ ಅವರನ್ನು ಒಕ್ಕಲೆಬ್ಬಿಸದಿರಲು, ನೋಟೀಸ್ ನೀಡದಿರಲು ಹಾಗೂ ಸದರಿ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದೆಂದು ಹಾಗೂ ವಾಸವಾಗಿರುವ ಮನೆಗಳನ್ನು ತೆರವುಗೊಳಿಸ ಬಾರದೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
B.Y. Raghavendra ಅರಣ್ಯ ಒತ್ತುವರಿ ಸಂತ್ರಸ್ತರನ್ನ ಒಕ್ಕಲೆಬ್ಬಿಸ ಬೇಡಿ- ಸಂಸದ ರಾಘವೇಂದ್ರ
Date:
