Sunday, December 14, 2025
Sunday, December 14, 2025

Bekkina Kalmatha “ಶ್ರಾವಣ ಚಿಂತನ” ನ ಸಾರ್ಥಕ ಸಂಪನ್ನ

Date:

Bekkina Kalmatha ಶಿವಮೊಗ್ಗ ನಗರದ ತುಂಗಾ ತೀರದ ಶ್ರೀ ಬೆಕ್ಕಿನಕಲ್ಮಠವು ಮಲೆನಾಡಿನ ಸರ್ವಜನಾಂಗದ ಸೌಹಾರ್ದ ಪೀಠವಾಗಿದೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಶರಣರ ಆಶಯಗಳಾದ ಕಾಯಕ, ದಾಸೋಹ, ಅನುಭಾವದ ಮೂಲಕ ಜನಮುಖಿ ಕಾರ್ಯಕ್ರಮಗಳನ್ನು ಕಾಲ ಕಾಲಕ್ಕೆ ಯೋಜನಾ ಬದ್ಧವಾಗಿ ಹಮ್ಮಿಕೊಂಡು ಬರುತ್ತಿದೆ.

ಪೂಜ್ಯರು ಕಳೆದ ನಾಲ್ಕುವರೆ ದಶಕಗಳಿಂದ ಆನಂದಪುರ ಮುರುಘರಾಜೇದ್ರ‍್ರ ಮಹಾಸಂಸ್ಥಾನ ಮಠದಲ್ಲಿ ಪ್ರತಿ ಅಮವಾಸೆಯಂದು ಮಾಸಿಕ ಶಿವಾನುಭವ ಗೋಷ್ಠಿಗಳನ್ನು ನಡೆಸುತ್ತಾ ಬರುತ್ತಿದಾರೆ. ಇದುವರೆಗೂ ೫೮೧ ಮಾಸಿಕ ಶಿವಾನುಭವ ಗೋಷ್ಠಿಗಳು ನಿರಂತರವಾಗಿ ನಡೆದಿವೆ. ಶಿವಮೊಗ್ಗ ಬೆಕ್ಕಿನಕಲ್ಮಠದಲ್ಲಿ ಪ್ರತಿ ಹುಣ್ಣಿಮೆಯಂದು ಇದುವರೆಗೂ ೫೩೯ ಮಾಸಿಕ ಶಿವಾನುಭವ ಗೋಷ್ಠಿಗಳು ನಡೆದಿವೆ. ನಾಡಿನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ವಚನ ಸಂಗೀತ, ಪೂಜ್ಯರ ಆಶೀರ್ವಚನ, ದಾಸೋಹ ನಡೆಯುತ್ತದೆ. ಶರಣ ಸಾಹಿತ್ಯ ಸಮ್ಮೇಳನ ಹಾಗೂ ಭಾವೈಕ್ಯ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಗುರುಬಸವಶ್ರೀ ಪ್ರಶಸ್ತಿ, ಶರಣ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡ ವಿದ್ವಾಂಸರಿಗೆ ಅಲ್ಲಮಪ್ರಭು ಪ್ರಶಸ್ತಿ, ಅಪ್ರತಿಮ ಸಾಧನೆ ಮಾಡಿದ ಸಾಧಕಿಯರಿಗೆ ಕೆಳದಿರಾಣ ಚನ್ನಮ್ಮ ಪ್ರಶಸ್ತಿ ನೀಡಿ ಗೌರವಿಲಾಗುತ್ತಿದೆ.
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು. ಡಾ. ಶ್ರೀ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಆಶಯದಂತೆ ಶ್ರಾವಣ ಮಾಸವನ್ನು ಕಳೆದ ೪೫ ವರ್ಷಗಳಿಂದ ಅರ್ಥಪೂರ್ಣ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿದಿನ ವಚನ ಸಂಗೀತ, ಉಪನ್ಯಾಸ, ಸಂವಾದ, ಆಶೀರ್ವಚನಗಳ ಮೂಲಕ ಶರಣರ ವೈಚಾರಿಕ ಚಿಂತನೆಗಳನ್ನು ಶಿವಮೊಗ್ಗ ನಗರದ ವಿವಿಧ ಬಡಾವಣೆಗಳ ಮನೆ-ಮನಗಳಿಗೆ ತಲುಪಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ಶ್ರಾವಣ ಚಿಂತನ ನಾಡಿನ ಮಾದರಿ ಕಾರ್ಯಕ್ರಮವಾಗಿ ಜನಮೆಚ್ಚುಗೆ ಗಳಿಸಿದೆ.
Bekkina Kalmatha ಶರಣರ ಮೌಲಿಕ ಚಿಂತನೆ ಉಪನ್ಯಾಸ ಮಾಲಿಕೆ ಮನೆ-ಮನಗಳಲ್ಲಿ ಶ್ರಾವಣ ಚಿಂತನ ಕಾರ್ಯಕ್ರಮ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಶ್ರಾವಣ ಚಿಂತನ ದಿ:೫ -೮- ೨೦೨೪ ರಂದು ವಿದ್ಯುತ್ ಇಲಾಖೆ ವೀರಶೈವ -ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಸಹಯೋಗದಲ್ಲಿ ಶ್ರೀ ಬೆಕ್ಕಿನಕಲ್ಮಠದಲ್ಲಿ ಉದ್ಘಾಟನೆಯಾದ ಶ್ರಾವಣ ಚಿಂತನದ ಅರಿವಿನ ತೇರು ಶಿವಮೊಗ್ಗ ನಗರ ಗ್ರಾಮಾಂತರ ಪ್ರದೇಶದ ಸಂಘಸಂಸ್ಥೆಗಳು ಹಾಗೂ ಭಕ್ತರ ಮನೆಗಳಲ್ಲಿ ಸಂಚರಿಸಿತು. ನಾಡು-ನುಡಿ, ಸಮಾಜಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ ಮಹನೀಯರ ತ್ಯಾಗ ಅವರ ಕೊಡುಗೆಯನ್ನು ಸ್ಮರಿಸುವ`ಸ್ಮರಣೀಯ ಸಾಧಕರು’ ಮೌಲಿಕ ಚಿಂತನ ಉಪನ್ಯಾಸ ಮಾಲಿಕೆಯ ೩೩ ಚಿಂತನಗಳನ್ನು ಆಯೋಜಿಸಲಾಗಿತ್ತು.ನಾಡಿನ ಖ್ಯಾತ ಸಾಹಿತಿಗಳು,ಪತ್ರಕರ್ತರು, ಉಪನ್ಯಾಸಕರು ಉಪನ್ಯಾಸ ನೀಡಿದರು. ಸುಮಾ ವಿ ಹೆಗಡೆ ಅವರಿಂದ ವಚನ ಸಂಗೀತ ನಡೆಯಿತು. ಎಡ್ವರ್ಡ್ ಪಿಂಟೋ ಅವರ ನಿವಾಸ, ಆರ್ಯ ವೈಶ್ಯ ಮಹಾಜನ ಸಭಾ ಕನ್ನಿಕಾ ಪರಮೇಶ್ವರಿ ದೇವಾಲಯ , ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ನಿವಾಸ, ವಿಶ್ವಕರ್ಮ ಸಮಾಜದ ಪಿ.ಸತೀಶ್ , ಡಿಸಿಸಿ ಬ್ಯಾಂಕ್ ನಿರ್ದೇಶಕ ಮಹಾಲಿಂಗಯ್ಯ ಶಾಸ್ತಿç, ಬಿ.ಎಂ. ಲೋಕೇಶಾರಾಧ್ಯ ಅವರ ಮನೆಯಲ್ಲಿ ಶ್ರಾವಣ ಚಿಂತನ ಅತ್ಯಂತ ಶ್ರದ್ದೆ -ಭಕ್ತಿಯಿಂದ ಆಯೋಜಿಸಿದ್ದರು. ಸೃಷ್ಠಿ ಮಹಿಳಾ ಸಮಾಜ, ವಿನೋಬನಗರ ಶಿವಾಲಯ ವೀರಶೈವ ಸೇವಾಸಮಿತಿ, ಜಂಗಮ ಮಹಿಳಾ ಸಮಾಜ, ಸಿದ್ದೇಶ್ವರನಗರ ಶಿವರಾತ್ರಿ ಸೇವಾ ಸಮಿತಿ, ಶಿವಗಂಗಾ ಯೋಗಕೇಂದ್ರ ಕೃಷಿನಗರ ಶಾಖೆ , ಯಲವಟ್ಟಿ ಬೆಕ್ಕಿನಕಲ್ಮಠ, ಕನ್ನಡ ಸಾಯಿತ್ಯ ಪರಿಷತ್, ಕದಳಿ ಮಹಿಳಾ ಸಮಾಜ, ವಿಜಯನಗೆ ಸಿದ್ದಿವಿನಾಯಕ ದೇವಾಲಯ, ,ಕೆಂಜಿಗಾಪುರ ಹಾಗೂ ಗುಡ್ಡದ ಅರಕೆರೆ ವೀರಭದ್ರದೇವಾಲಯದಲ್ಲಿ ಚಿಂತನ ಗೋಷ್ಠಿ ಆಯೋಜಿಸಲಾಗಿತ್ತು
ಸೆಪ್ಟೆಂಬರ್ ೧ ರಂದು ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಮತ್ತು ತರಬೇತಿ ಕೇಂದ್ರದ ಪದಾಧಿಕಾರಿಗಳ ಸಹಯೋಗದಲ್ಲಿ ಶ್ರಾವಣ ಚಿಂತನ ೨೦೨೪ ಸಂಪನ್ನಗೊಳ್ಳಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Visvesvaraya Technological University ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗೆ ವಿಶೇಷ ಕಾರ್ಯಾಗಾರ

Visvesvaraya Technological University ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ "ಜ್ಞಾನ...

B.Y. Raghavendra ಶಿವಮೊಗ್ಗದಲ್ಲಿ ESIC ಉಪ-ಪ್ರಾದೇಶಿಕ ಕಚೇರಿ ಸ್ಥಾಪನೆಗೆ ಬಿ.ವೈ.ರಾಘವೇಂದ್ರ ಮನವಿ

B.Y. Raghavendra ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಸಚಿವರಾದ ಸನ್ಮಾನ್ಯ ಡಾ....

CM Siddharamaih ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಭೆ

CM Siddharamaih ಸುವರ್ಣ ವಿಧಾನಸೌಧದಲ್ಲಿ ವಿವಿಧ ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ...