Thursday, March 19, 2026
Thursday, March 19, 2026

Bharat Scouts and Guides Shivamogga ಕೊರೊನಾ ಸಮಯದಲ್ಲಿ ಸ್ಕೌಟ್ಸ್ & ಗೈಡ್ಸ್ ಸೇವೆ ಅವಿಸ್ಮರಣೀಯ- ಎಸ್.ಆರ್.ಮಂಜುನಾಥ್

Date:

Bharat Scouts and Guides Shivamogga ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ, ಶಿವಮೊಗ್ಗ.
ಕರೋನಾ ಸಮಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸೇವೆ ಅವಿಸ್ಮರಣೀಯ”-ಮಂಜುನಾಥ್.ಎಸ್.ಆರ್
ಜಿಲ್ಲಾ ಉಪನಿರ್ದೇಶಕರು. ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ನೂತನ ಜಿಲ್ಲಾ ಉಪನಿರ್ದೇಶಕರಾಗಿ ಕರ್ತವ್ಯಕ್ಕೆ ಹಾಜರಾದ ಮೊದಲದಿನದ ಮೊದಲ ಸ್ಕೌಟ್ ಗೈಡ್ ಕಾರ್ಯಕ್ರಮವಾಗಿ ೭ ದಿನಗಳ ಜಿಲ್ಲಾ ಮಟ್ಟದ ಮೂಲತರಬೇತಿ ಶಿಬಿರವನ್ನು ಶಿವಮೊಗ ಸ್ಕೌಟ್ಸ್ಭವನದ ಆವರಣದಲ್ಲಿ ಉದ್ಘಾಟಿಸುತ್ತಾ,
ಸ್ಕೌಟ್ ಗೈಡ್ ಸಂಸ್ಥೆಯು ಮಕ್ಕಳಲ್ಲಿ ಶಿಸ್ತು ಸೇವಾಮನೋಭಾವನೆಯನ್ನು ರೂಢಿಸಲು ಸಹಕಾರಿ ಯಾಗಿದೆ. ಹಾಗೂ ಕರೋನಾ ವಿಷಮ ಕಾಲದಲ್ಲಿ ತುರ್ತು ಸೇವೆಗಳನ್ನು ಸ್ಕೌಟ್ ಗೈಡ್ಸ್ ಸ್ವಯಂ ಸೇವಕರು ನಿರ್ವಹಿಸಿದರು. ಇಂಥಹ ಅಮೂಲ್ಯ ಸೇವೆಗಳು ಸ್ವಯಂಸೇವಕರಿAದ ಜಿಲ್ಲಾದ್ಯಂತ ಅಗತ್ಯ ವಸ್ತುಗಳನ್ನು, ಮಾಸ್ಕ್ ಗಳನ್ನು, ಆಹಾರ, ಔಷಧಗಳನ್ನು ತಲುಪಿಸಿದ್ದಾರೆ. ಎಂದು ಅಭಿಮತ ವ್ಯಕ್ತಪಡಿಸಿದರು.
ಶಾಲೆಯ ಸಂಚಿತ ನಿಧಿಯ ಬಳಕೆ ಮಾಡಿಕೊಂಡು ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳನ್ನು ನಡೆಸಲು ಅವಕಾಶÀವಿರುವುದನ್ನು ತಿಳಿಸಿದರು. ತಮ್ಮ ಶಾಲೆಯ ಚಟುವಟಿಕೆಗಳ ವರದಿ ಭಾವಚಿತ್ರಗಳನ್ನು ಇಲಾಖೆಯೊಂದಿಗೆ ಹಂಚಿಕೊಳ್ಳಲು ತಿಳಿಸಿದರು.
ತಾಲ್ಲೂಕಿ ಕ್ಷೆತ್ರಶಿಕ್ಷಣಾಧಿಕಾರಿಗಳಾದ ಶ್ರೀ. ರಮೇಶ್ ರವರು ಶಿಕ್ಷಕರು ತರಬೇತಿಯಲ್ಲಿ ಪೂರ್ಣ ಪ್ರಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕಲಿತು ತಮ್ಮ ತಮ್ಮ ಶಾಲೆಯ ವ್ಯಾಪ್ತಿಯಲ್ಲಿ ಶಿಸ್ತು ಅದರ್ಶ ಗುಣಗಳನ್ನು ಅನ್ವಯ ಮಾಡಿಕೊಂಡು ಶಾಲೆಯ ವಾತಾವರಣವನ್ನು ಕ್ರಿಯಾಶೀಲವಾಗಿಡುವಂತೆ ತಿಳಿಸಿದರು.

Bharat Scouts and Guides Shivamogga ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಶ್ರೀ ಪ್ರಕಾಶ್ ರವರು ಮಾತನಾಡುತ್ತಾ ಮಕ್ಕಳನ್ನು ಇಂದು ಮೊಬೈಲ್ ಗೀಳಿನಿಂದ ಹೊರತರುವುದು ಅತೀ ಅವಶ್ಯಕವಾಗಿದೆ ಇದಕ್ಕೆ ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳು ಅತ್ಯಂತ ಪೂರಕವಾಗಿವೆಎಂದು ತಿಳೀಸಿದರು. ಹಾಗೂ ತಮ್ಮ ಶಾಲೆಗಳಲ್ಲಿ ಕಡ್ಡಾಯವಾಗಿ ಸ್ಕೌಟ್ಸ್ ಮತ್ತು ಗೈಡ್ಸ್ ದಳಗಳನ್ನು ತೆರೆಯಲು ತಿಳಿಸಿದರು. ತಾವೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯೊAದಿಗೆ ಬೆಳೆದು ಮಕ್ಕಳನ್ನೂ ಬೆಳೆಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಕರೆನೀಡಿದರು. ಶ್ರೀ ಚಂದ್ರ ಶೇಖರ್ ಪ್ರೌಢಶಾಲಾ ಮುಖ್ಯ ಶಿಕ್ಷಕರು ಚಿಕ್ಕಮಗಳೂರು ಉಪಸ್ಥಿತರಿದ್ದರು.
ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಕೆ.ಪಿ. ಬಿಂದುಕುಮಾರ್ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ನಮ್ಮ ಶಿವಮೊಗ್ಗ ಜಿಲ್ಲಾ ತರಬೇತಿ ತಂಡವು ಅತ್ಯಂತ ಹಿರಿಯ ಅನುಭವಿ ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿದೆ ಎಂದು ಹಷÀðವ್ಯಕ್ತ ಪಡಿಸಿದರು. ಸ್ಕೌಟ್ ಗೈಡ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳು ಮಾನಸಿಕವಾಗಿ,ದೈಹಿಕವಾಗಿ, ಸಧೃಢವಾಗಿ ಸಮಾಜಮುಖಿಯಾಗಿ ಬೆಳೆಯುತ್ತಾರೆಎಂದು ಅಭಿಪ್ರಾಯ ವ್ಯಕ್ತ ಪಡಿಸಿದರು. ಸ್ಕೌಟ್ಸ್ ಗೈಡ್ ಚಳುವಳಿಯನ್ನು ಮನೆಮನೆಗೂ ತಲುಪಿಸಲು ಜಿಲ್ಲಾ ಶಿಕ್ಷಕ ಶಿಕ್ಷಕಿಯರು ತಮ್ಮನ್ನು ತೊಡಗಿಸಿಕೊಳ್ಳ ಬೇಕೆಂದು ಕರೆ ನೀಡಿದರು.
ತರಬೇತಿಯಲ್ಲಿ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ೧೪೦ ಶಿಕ್ಷಕ/ಶಿಕ್ಷಕಿಯರಯ ಭಾಗವಹಿಸಿದ್ದಾರೆ, ಕಾರ್ಯಕ್ರಮದ ಸ್ವಾಗತವನ್ನು ಅತಿಥಿಗಳಿಗೆ ಸ್ಕಾರ್ಫ್ ಧರಿಸುವ ಮೂಲಕ ಜಿಲ್ಲಾ ರೋವರ್ ಆಯುಕ್ತರು ಕೆ.ರವಿ ಯವರು ಸ್ವಾಗತಿಸಿದರು, ಶಿಬಿರದ ವರದಿ ಹೆಚ್. ಶಿವಶಂಕರ್ ಜಿಲ್ಲಾ ತರಬೇತಿ ಆಯುಕ್ತರು ಸ್ಕೌಟ್, ರವರಿಂದ, ವಂದನಾರ್ಪಣೆ ಜಿ.ವಿಜಯ ಕುಮಾರ್ ಕೇಂದ್ರ ಸ್ಥಾನಿಕ ಆಯುಕ್ತರು, ನಿರೂಪಣೆ ರಾಜೇಶ್ ಅವಲಕ್ಕಿ. ರೋವರ್ ಲೀಡರ್. ಕರ‍್ಯಕ್ರಮದಲ್ಲಿ ಜಿಲ್ಲಾ ಗೈಡ್ ಆಯುಕ್ತೆ ಶಕುಂತಲಾ ಚಂದ್ರ ಶೇಖರ್, ಶ್ರೀ.ಎಸ್.ಜಿ.ಆನಂದ್ ಜಿಲ್ಲಾ ಸ್ಕೌಟ್ ಆಯುಕ್ತರು, ಶ್ರೀಮತಿ ಗೀತಾ ಚಿಕ್ಕಮಠ ಜಿಲ್ಲಾ ತರಬೇತಿ ಆಯುಕ್ತರುಗೈಡ್, ಶ್ರೀ ವೀರೇಶಪ್ಪ ವೈ ಆರ್. ಸಹ ಕಾರ್ಯದರ್ಶಿ, ಶ್ರೀ ಕೃಷ್ಣಸ್ವಾಮಿ, ಶ್ರೀ ಸಿ.ಎಂ. ಪರಮೇಶ್ವರಯ್ಯ, ಶ್ರೀ.ವಿನಯಭೂಷಣ್ ,ಶ್ರೀ ಅಶೋಕ್ ಕುಮಾರ್, ಶ್ರೀ ಪುಟ್ಟಪ್ಪ ಗೌಳೇರ್, ಶ್ರೀಮಲ್ಲಿಕಾರ್ಜುನ ಕಾನೂರ್, ಶ್ರೀಮತಿ ಹೇಮಲತಾ,ಶ್ರೀಮತಿ ಮೀನಾಕ್ಷಮ್ಮ, ಶ್ರೀಮತಿ ಜ್ಯೋತಿ, ಶ್ರೀಮತಿ ಪರಿಮಳ, ಶ್ರೀಮತಿಶಾರದಮ್ಮ, ತರಬೇತಿ ತಂಡದ ನಾಯಕರು ಜಿಲ್ಲಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...