Monday, December 8, 2025
Monday, December 8, 2025

Dhyan Chand ಕ್ರೀಡಾಲೋಕದ ದಂತಕತೆ “ಧ್ಯಾನ್ ಚಂದ್”

Date:

Dhyan Chand ಕ್ರೀಡಾ ಲೋಕದ ದಂತಕಥೆ ಮೇಜರ್ ಧ್ಯಾನ್‌ಚಂದ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ
ಭಾರತದ ಹಾಕಿ ದಂತಕತೆ, ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಸ್ಮರಣಾರ್ಥ ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಣೆ ಮಾಡಲಾಗುತ್ತದೆ. ರಾಷ್ಟ್ರೀಯ ಕ್ರೀಡಾ ದಿನವನ್ನು ಭಾರತದಲ್ಲಿ ಮೊದಲ ಬಾರಿಗೆ 2012 ರಲ್ಲಿ ಆಚರಿಸಲಾಯಿತು. ಅದೇ ವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ದಿನಗಳ ಪಟ್ಟಿಗೆ ಸೇರಿಸಲಾಯಿತು. ಮೇಜರ್ ಧ್ಯಾನ್À ಚಂದ್ ಆಗಸ್ಟ್ 29, 1905 ರಲ್ಲಿ ಅಹಮದಾಬಾದ್‌ನಲ್ಲಿ ಜನಿಸಿದರು. ವಿಶ್ವಕಂಡ ಅಪರೂಪದ, ಅತ್ಯತ್ತಮ ಹಾಕಿ ಆಟಗಾರ ಎಂಬ ಹೆಗ್ಗಳಿಕೆಗೆ ಧ್ಯಾನ್ ಚಂದ್ ಪಾತ್ರರಾಗಿದ್ದರು. ಇವರ ಹುಟ್ಟುಹಬ್ಬವನ್ನು ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ದಿನವನ್ನಾಗಿ ಆಚರಿಸಲಾಗುತ್ತದೆ.
Dhyan Chand ಮೇಜರ್ ಧ್ಯಾನ್ ಚಂದ್ ಸಿಂಗ್ (1905-1979) ಅವರು ತಮ್ಮ ವಿಶಿಷ್ಟ ಸಾಧನೆಗಳೊಂದಿಗೆ ಇದುವರೆಗೆ ಶ್ರೇಷ್ಠ ಫೀಲ್ಡ್ ಹಾಕಿ ಆಟಗಾರ, ಗಾಲ್ಫ್ ಆಟದಲ್ಲೂ ಅಸಾಧಾರಣ ಕೌಶಲ್ಯಗಳೊಂದಿಗೆ ದಶಕಗಳವರೆಗೆ ಕ್ರೀಡೆಯಲ್ಲಿ ಪ್ರಾಬಲ್ಯ ಸಾಧಿಸಿದ್ದರು. ಅವರು 1928, 1932, ಮತ್ತು 1936 ರಲ್ಲಿ ಸತತ ಮೂರು ಒಲಿಂಪಿಕ್ ಚಿನ್ನದ ಪದಕಗಳನ್ನು ಗಳಿಸಿದ ಭಾರತೀಯ ಹಾಕಿ ತಂಡದ ನಾಯಕರಾಗಿದ್ದರು. ಮೈದಾನದಲ್ಲಿನ ಅವರ ಕ್ರೀಡಾ ಕೌಶಲ್ಯಕ್ಕೆ ಅವರಿಗೆ “ಹಾಕಿ ಮಾಂತ್ರಿಕ” ಎಂಬ ಹೆಸರು ತಂದುಕೊಟ್ಟಿದ್ದು, ಅವರ ಕ್ರೀಡಾ ಕೌಶಲ್ಯ ಭಾರತದಾದ್ಯಂತ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತಿದೆ.
ಒಲಂಪಿಕ್ ಹಾಕಿಯಲ್ಲಿ 8 ಬಾರಿ ಚಿನ್ನ ಗೆದ್ದ ಭಾರತ:
ಒಲಿಂಪಿಕ್ಸ್ನಲ್ಲಿ ಭಾರತದ ಹಾಕಿ ತಂಡದ ಸಾಧನೆ ಕ್ರೀಡಾ ಇತಿಹಾಸದಲ್ಲಿ ಭಾರತ ತಂಡವು ಇದುವರೆಗೂ 8 ಬಾರಿ ಚಿನ್ನ ಪದಕ ಗೆಲ್ಲುವ ಮೂಲಕ ಹಾಕಿ ಕ್ರೀಡಾ ಇತಿಹಾಸದಲ್ಲಿ ದೊಡ್ಡ ಹೆಸರು ಮಾಡಿದೆ.
ಚಿನ್ನದ ಪದಕ – ಮೊದಲ ಸ್ಥಾನ, 1928 (ಆಂಸ್ಟರ್‌ಡ್ಯಾಮ್),
ಚಿನ್ನದ ಪದಕ – ಮೊದಲ ಸ್ಥಾನ, 1932 (ಲಾಸ್ ಏಂಜಲೀಸ್)
ಚಿನ್ನದ ಪದಕ – ಮೊದಲ ಸ್ಥಾನ, 1936, (ಬರ್ಲಿನ್)
ಚಿನ್ನದ ಪದಕ – ಮೊದಲ ಸ್ಥಾನ, 1948 (ಲಂಡನ್)
ಚಿನ್ನದ ಪದಕ – ಮೊದಲ ಸ್ಥಾನ, 1952 (ಹೆಲ್ಸಿಂಕಿ)
ಚಿನ್ನದ ಪದಕ – ಮೊದಲ ಸ್ಥಾನ, 1956 (ಮೆಲ್ಬೋರ್ನ್)
ಚಿನ್ನದ ಪದಕ – ಮೊದಲ ಸ್ಥಾನ, 1964 (ಟೋಕಿಯೋ)
ಚಿನ್ನದ ಪದಕ – ಮೊದಲ ಸ್ಥಾನ, 1980 (ಮಾಸ್ಕೋ)
ಬೆಳ್ಳಿ ಪದಕ – ಎರಡನೇ ಸ್ಥಾನ, 1960 (ರೋಮ್)
ಕಂಚಿನ ಪದಕ – ಮೂರನೇ ಸ್ಥಾನ, 1968 (ಮೆಕ್ಸಿಕೋ ಸಿಟಿ)
ಕಂಚಿನ ಪದಕ – ಮೂರನೇ ಸ್ಥಾನ, 1972 (ಮ್ಯೂನಿಚ್)
ಕಂಚಿನ ಪದಕ – ಮೂರನೇ ಸ್ಥಾನ, 2020 (ಟೋಕಿಯೊ)
ಕಂಚಿನ ಪದಕ – ಮೂರನೇ ಸ್ಥಾನ, 2024 (ಪ್ಯಾರಿಸ್)
ಒಲಂಪಿಕ್ ಚಿನ್ನದ ನಿರಾಸೆಯೊಂದಿಗೆ ಹೊಸ ಭರವಸೆ:
ಈ ಬಾರಿಯ ಸಮ್ಮರ್ ಒಲಿಂಪಿಕ್ಸ್ನಲ್ಲಿ ಭಾರತದಿಂದ 117 ಮಂದಿ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಭಾರತ 5 ಕಂಚಿನ ಪದಕ ಮತ್ತೊಂದು ಬೆಳ್ಳಿ ಪದಕ ಸೇರಿದಂತೆ ಒಟ್ಟಾರೆ 6 ಪದಕಗಳ ಗೆಲುವು ಸಾಧಿಸಿದೆ. ಮನು ಭಾಕರ್ ಅವರು ಮಹಿಳೆಯರ 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಕಂಚಿನ ಪದಕವನ್ನು ತಂದುಕೊಟ್ಟಿದ್ದಾರೆ ಮತ್ತು ಭಾರತಕ್ಕೆ ಒಲಿಂಪಿಕ್ ಪದಕವನ್ನು ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ, ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಲೆ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡ ಸೇರಿದಂತೆ ಒಂದು ಬೆಳ್ಳಿ ಮತ್ತು ಐದು ಕಂಚು ಸೇರಿದಂತೆ ಆರು ಪದಕಗಳಿಗೆ ಕೊಡುಗೆ ನೀಡಿದೆ. ಭಾರತವು ಪ್ಯಾರಿಸ್ 2024 ರ ಒಲಿಂಪಿಕ್ಸ್ನಲ್ಲಿ 71 ನೇ ಸ್ಥಾನದಲ್ಲಿದೆ. 6 ಪದಕಗಳನ್ನು ಗೆಲ್ಲುವ ಮೂಲಕ ಸಂಭ್ರಮಿಸಿದೆ. ಒಲಿಂಪಿಕ್ಸ್ನಲ್ಲಿ ಭಾರತದ ಅಭಿಯಾನವು ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್, ವೇಟ್‌ಲಿಫ್ಟಿಂಗ್‌ನಲ್ಲಿ ಸೈಖೋಮ್ ಮೀರಾಭಾಯ್ ಚಾನು ಅವರ ಸೋಲು ನಿರಾಶೆಗೊಳಿಸಿದೆ. ಆದರೆ ವಿನೀಶ್ ಪೋಗಟ್ ಮಹಿಳಾ ಕುಸ್ತಿಯಲ್ಲಿ 50 ಕೆಜಿ ಒಲಿಂಪಿಕ್ಸ್ನಲ್ಲಿ ಫೈನಲ್ ತಲುಪಿದ ನಂತರ ಅಧಿಕ ತೂಕದ ಕಾರಣಕ್ಕಾಗಿ ಅನರ್ಹಗೊಂಡ ಕಾರಣಕ್ಕೆ ವಿನೇಶ್ ಚಿನ್ನದ ಪದಕದಿಂದ ವಂಚಿತರಾಗಿದ್ದು ಇಡೀ ದೇಶದ ಜನ ಮಿಡಿಯುವಂತೆ ಮಾಡಿದ್ದು ಎಲ್ಲರೂ ಅವರ ಪರವಾಗಿ ಬೆಂಬಲಕ್ಕೆ ನಿಂತಿದ್ದು ಅಭಿನಂದನೀಯ. ಕನಿಷ್ಠ ಬೆಳ್ಳಿ ಪದಕಕ್ಕಾಗಿ ಸಿಎಎಸ್‌ಗೂ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ.
ಐಸಿಸಿ ಟಿ20 ವಿಶ್ವಕಪ್ ಗೆದ್ದ ಭಾರತ:
ಕ್ರೀಡಾ ಲೋಕದಲ್ಲಿ ಕ್ರಿಕೆಟ್ ಒಂದು ಅತೀ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ಕ್ರೀಡೆಯಾಗಿದೆ. ಭಾರತದ ಪಾಲಿಗೆ ಕ್ರಿಕೆಟ್ ಜನಮಾನಸದಲ್ಲಿ ಮನೆ ಮಾಡಿದೆ ಎಂದರು ತಪ್ಪಾಗಲಾರದು. ಭಾರತದ ಬಿಸಿಸಿಐ ನಡೆಸುವ ಐಪಿಎಲ್ ಕ್ರೀಡಾಕೂಟ ಇಡೀ ಜಗತ್ತನ್ನು ಆಕರ್ಷಿಸುತ್ತದೆ.
ಕ್ರಿಕೆಟ್ ಕ್ರೀಡೆಯಲ್ಲಿ ಭಾರತ ಉತ್ತಮ ಸಾಧನೆಯೊಂದಿಗೆ ಮುಂದೆ ಸಾಗಿದ್ದು ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದ 2007ರ ಮೊದಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಟ್ರೋಫಿ ಗೆದ್ದಿತ್ತು. ಬಾರ್ಬೆಡೋಸ್‌ನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ 2024 ರ ಜೂನ್ 29 ರಂದು ನಡೆದ ಟಿ20 ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ರೋಹಿತ್ ಶರ್ಮಾ ಬಳಗ 7 ರನ್‌ಗಳ ರೋಚಕ ಜಯ ದಾಖಲಿಸಿ, 2013 ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತ ಅನುಭವಿಸಿದ್ದ ಟ್ರೋಫಿ ಗೆಲುವಿನ ನಿರಾಸೆ ಮರೆಯುವಂತೆ ಮಾಡಿತು.
ಭಾರತದ ಕ್ರೀಡಾಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಉತ್ತಮ ತರಬೇತಿಯನ್ನು ನೀಡಬೇಕಾಗಿದೆ. ಹಾಗೂ ಸರ್ಕಾರ ಇನ್ನೂ ಹೆಚ್ಚಿನ ಕ್ರೀಡಾಶಾಲೆಗಳು, ಅಕಾಡೆಮಿಗಳು ಹಾಗೂ ಕ್ರೀಡೆಗೆ ಸಂಬAಧಿಸಿದAತೆ ಕ್ರೀಡಾ ವಿಶ್ವವಿದ್ಯಾಲಯವನ್ನು ತೆರೆಯುವ ಮೂಲಕ ಯುವ ಜನರಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವಂತಾದರೆ ಕ್ರೀಡಾ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಲು ಸಾಧ್ಯವಾಗಲಿದೆ.
-ರಘು ಆರ್.
ಅಪ್ರೆಂಟಿಸ್ ವಾರ್ತಾ ಇಲಾಖೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B. Y. Raghavendra ಮಕ್ಕಳ ಸಾಂಸ್ಕೃತಿಕ ಪ್ರದರ್ಶನ ಮೆಚ್ಚಿದ ಸಂಸದ ರಾಘವೇಂದ್ರ

B. Y. Raghavendra ಭದ್ರಾವತಿಯ ನ್ಯೂ ಟೌನ್‌ನಲ್ಲಿರುವ ಶ್ರೀ ಸತ್ಯ ಸಾಯಿ...

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...