Kuvempu University ಕುವೆಂಪು ವಿಶ್ವವಿದ್ಯಾಲಯ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುವೆಂಪು ವಿ.ವಿ ಅವ್ಯವಸ್ಥೆಗಳ ಆಗರವಾಗಿದೆ. ಎ.11ರಂದು ಪಿಯು ಫಲಿತಾಂಶ ಬಂದಿದ್ದರೂ ಕೂಡ ಪದವಿ ತರಗತಿಗಳಿಗೆ ಇನ್ನೂ ಪ್ರವೇಶಾತಿ ಆರಂಭವಾಗಿಲ್ಲ. 4 ತಿಂಗಳು ಕಳೆದು ಹೋಗಿವೆ. ಕುವೆಂಪು ವಿವಿ ವ್ಯಾಪ್ತಿಯಲ್ಲಿ ಸುಮಾರು 84 ಕಾಲೇಜುಗಳು ಬರುತ್ತವೆ. ಈ ಎಲ್ಲಾ ಕಾಲೇಜುಗಳಲ್ಲಿಯೂ ಇಷ್ಟು ಹೊತ್ತಿಗೆ ಪ್ರವೇಶ ಆರಂಭವಾಗಿ ಪಾಠಗಳು ಆರಂಭವಾಗಬೇಕಿತ್ತು. ಆದರೆ ಇದುವರೆಗೂ ಅಡ್ಡಿಷನ್ ಆಗಿಲ್ಲ ಎಂದು ದೂರಿದರು.
Kuvempu University ಪರೀಕ್ಷೆ ಮೌಲ್ಯ ಮಾಪನ ಮಾಪನ ಮಾಡಿದವರಿಗೆ ಹಣವನ್ನೇ ನೀಡಿಲ್ಲ, ಅತಿಥಿ ಉಪನ್ಯಾಸಕರನ್ನು ಕಡೆಗಾಣಿಸಲಾಗುತ್ತಿದೆ. ರಾಜ್ಯದಲ್ಲಿ ಕುವೆಂಪು ವಿವಿ ಕೊನೆಯ ಸ್ಥಾನದಲ್ಲಿದೆ ಎಂದ ಅವರು, ಸ್ನಾತಕೋತ್ತರ ಕಾಲೇಜುಗಳು ಕೂಡ ಆರಂಭವಾಗಿಲ್ಲ. ಹೀಗಾದರೆ ಮಕ್ಕಳ ಗತಿಯೇನು, ಪೋಷಕರು ಆತಂಕಗೊಂಡಿದ್ದಾರೆ. ಕುವೆಂಪು ವಿವಿ ಮಕ್ಕಳ ಜೊತೆ ಚೆಲ್ಲಾಟವಾಡುತ್ತಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.