Delhi World School Shivamogga ಆಗಸ್ಟ್ 30 ಹಾಗೂ 31 ರಂದು ನಗರದ ಸಾಗರ ರಸ್ತೆಯ ಮಲ್ಲಿಗೇನಹಳ್ಳಿಯಲ್ಲಿರುವ ಡೆಲ್ಲಿ ವರ್ಲ್ಡ್ ಸ್ಕೂಲ್‌ನಲ್ಲಿ ಅಂತರಾಷ್ಟ್ರೀಯ ಮಕ್ಕಳ ಚಲನ ಚಿತ್ರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಪ್ರೆಸ್ ಟ್ರಸ್ಟ್ ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಶಾಲೆ ಪ್ರಾಚಾರ್ಯೆ ದಿವ್ಯಾ ಶೆಟ್ಟಿ,
ಮಕ್ಕಳಮೇಲೆ ಸಿನಿಮಾಗಳು ಬಹಳ ಪ್ರಭಾವ ಬೀರುತ್ತವೆ. ಅವುಗಳಲ್ಲಿನ ಒಳ್ಳೆಯ ಸಂದೇಶದಿಂದ ಮಕ್ಕಳು ಚಿಂತನೆ ಬೆಳೆಸಿಕೊಳ್ಳುವಂತಾಗಬೇಕು, ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು, ಸತ್ಪ್ರಜೆಗಳಾಗಬೇಕೆಂಬ ಉದ್ದೇಶ ಇದರದ್ದಾಗಿದೆ ಎಂದರು.
ಸ್ಕೂಲ್ ಸಿನಿಮಾದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಈ ಚಲನ ಚಿತ್ರೋತ್ಸವ 70ಕ್ಕೂ ಹೆಚ್ಚು ಸಣ್ಣ ಚಲನ ಚಿತ್ರವನ್ನು ಒಳಗೊಂಡಿದೆ. 15ಕ್ಕೂ ಅಧಿಕ ಭಾಷೆಯ ಚಿತ್ರವನ್ನೊಳಗೊಂಡು 20ಕ್ಕೂ ಹೆಚ್ಚು ರಾಷ್ಟ್ರಗಳ ಆಯ್ದ ಅತ್ಯುತ್ತಮ ಚಲನ ಚಿತ್ರವನ್ನು ನಗರದ ಎಲ್ಲ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸ ಬಹುದಾಗಿದೆ ಎಂದರು.
Delhi World School Shivamogga ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮಕ್ಕಳ ಚಲನ ಚಿತ್ರವನ್ನು ವೀಕ್ಷಿಸುವ ಅವಕಾಶ ಬಹಳ ಕಡಿಮೆಯಿದ್ದು ಈ ನಿಟ್ಟಿನಲ್ಲಿ ಇಂತಹ ಮಕ್ಕಳ ಚಲನ ಚಿತ್ರೋತ್ಸವಗಳು ಮಕ್ಕಳಿಗೆ ಉತ್ತಮ ಸಂದೇಶವನ್ನು ನೀಡಲು ಸಹಕಾರಿಯಾಗಿದೆ ಎಂದರು.
ಮಕ್ಕಳಲ್ಲಿ ಸೃಜನ ಶೀಲತೆ, ವಿವಿಧತೆಯ ಮಹತ್ವ, ಸಾಮಾಜಿಕ ಸಮಸ್ಯೆ ಹಾಗೂ ಅದರ ಮೂಲ, ಅದನ್ನು ನಿರ್ಮೂಲನೆ ಮಾಡುವ ಬಗೆ, ಸಾಮಾಜಿಕ ಕಳಕಳಿಯನ್ನು ಹೆಚ್ಚಿಸುವ, ವಿವಿಧ ಭಾಷೆ, ಧರ್ಮ ಸಂಸ್ಕೃತಿಯನ್ನು ಗೌರವಿಸುವ, ಮನೋಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಚಲನ ಚಿತ್ರೋತ್ಸವ ವಿದ್ಯಾರ್ಥಿಗಳ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.
ಚಿತ್ರೋತ್ಸವದಲ್ಲಿ ಕನ್ನಡ ಭಾಷೆಯ ಚಿತ್ರ ಸಹ ಪ್ರದರ್ಶಿತವಾಗಲಿದೆ. ಪ್ರತಿ ಸಿನಿಮಾ ಒಂದು ಗಂಟೆಯ ಅವಧಿಯದ್ದಾಗಿದೆ. ಬೆಳಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನ ಆರಂಭವಾಗುವುದು ಎಂದರು.
Delhi World School Shivamogga ಡೆಲ್ಲಿ ವರ್ಲ್ಡ್ ಸ್ಕೂಲ್ ಆಗಸ್ಟ್ 30 & 31ಡೆಲ್ಲಿ ವರ್ಡ್ ಸ್ಕೂಲ್ ನಲ್ಲಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವ
Date: