Thursday, November 14, 2024
Thursday, November 14, 2024

Indira Canteens ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 8 ವಲಯಗಳಲ್ಲಿ ಇಂದಿರಾ‌ ಕ್ಯಾಂಟೀನ್ ಗಳು ಕಾರ್ಯಾರಂಭ ಮಾಡಲಿವೆ

Date:

Indira Canteens ಬಡವರು, ಕೂಲಿ ಕಾರ್ಮಿಕರಿಗೆ ರಿಯಾಯಿತಿ ದರದಲ್ಲಿ ಮೂರು ಹೊತ್ತು ಊಟ, ತಿಂಡಿ ನೀಡುವ ಇಂದಿರಾ ಕ್ಯಾಂಟೀನ್‌ಗಳು ಶೀಘ್ರದಲ್ಲೇ ಹೊಸ ಮೆನುವಿನೊಂದಿಗೆ ಆರಂಭಗೊಳ್ಳಲಿವೆ. ಮರುಜೀವ ಪಡೆಯುತ್ತಿರುವ ಕ್ಯಾಂಟೀನ್‌ಗಳಲ್ಲಿ ತರಹೇವಾರಿ ತಿಂಡಿಗಳು ಸಿಗಲಿವೆ.ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲು 4 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಟೆಂಡರ್‌ ಕರೆದು ಅಂತಿಮಗೊಳಿಸಲಾಗಿತ್ತು. ಇದಕ್ಕೆ ಸರ್ಕಾರ ಅನುಮೋದನೆ ನೀಡಿದ್ದು, ಸದ್ಯ ಮೂರು ಪ್ಯಾಕೇಜ್‌ಗಳ ಗುತ್ತಿಗೆ ಪಡೆದಿರುವ ಸಂಸ್ಥೆಗೆ ಕಾರ್ಯಾದೇಶ ನೀಡಲಾಗುತ್ತಿದೆ. ಒಂದು ಪ್ಯಾಕೇಜ್‌ಗೆ ಸಂಬಂಧಿಸಿದಂತೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ.ಈವರೆಗೆ ಚೆಫ್‌ಟಾಕ್‌, ರಿವಾರ್ಡ್ಸ್ ಮತ್ತು ಅದಮ್ಯ ಚೇತನ ಸಂಸ್ಥೆಯು ನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆ ಜತೆಗೆ ಆಹಾರ ಸರಬರಾಜು ಮಾಡುತ್ತಿದ್ದವು. ಈ ಸಂಸ್ಥೆಗಳ ಗುತ್ತಿಗೆ ಅವಧಿ ಮುಗಿದ ಹಿನ್ನೆಲೆಯಲ್ಲಿ ಕೆಲ ತಿಂಗಳ ಹಿಂದೆಯೇ ಟೆಂಡರ್‌ ಆಹ್ವಾನಿಸಿ ಅಂತಿಮಗೊಳಿಸಲಾಗಿತ್ತು.

Indira Canteens ಆದರೆ, ಈ ಟೆಂಡರ್‌ ಪ್ರಕ್ರಿಯೆಗೆ ಸರ್ಕಾರ ದಿಂದ ತಡವಾಗಿ ಅನುಮೋದನೆ ದೊರೆತಿದೆ. 175 ಸ್ಥಿರ, 24 ಮೊಬೈಲ್‌ ಕ್ಯಾಂಟೀನ್‌ರಾಜಧಾನಿಯಲ್ಲಿ 175 ಸ್ಥಿರ ಮತ್ತು 24 ಮೊಬೈಲ್‌ ಕ್ಯಾಂಟೀನ್‌ಗಳ ಮೂಲಕ ಬಡವರು, ಕೂಲಿ ಕಾರ್ಮಿಕರು, ಆಟೊ, ಟ್ಯಾಕ್ಸಿ ಚಾಲಕರು, ಬೀದಿಬದಿ ವ್ಯಾಪಾರಿಗಳಿಗೆ 2017 ರಿಂದ ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ರಿಯಾಯಿತಿ ದರದಲ್ಲಿ ಆಹಾರ ನೀಡಲಾಗುತ್ತಿದೆ. ಸರ್ಕಾರ , ಬಿಬಿಎಂಪಿಯ ನಿರ್ಲಕ್ಷ್ಯ ಧೋರಣೆ ಹಾಗೂ ನಿರ್ವಹಣೆ ಕೊರತೆಯಿಂದ ಹಲವು ಕ್ಯಾಂಟೀನ್‌ಗಳು ಮುಚ್ಚಲ್ಪಟ್ಟಿವೆ.ಪಾಲಿಕೆಯ ಅಂಕಿ-ಅಂಶಗಳ ಪ್ರಕಾರ, ಸದ್ಯ 147 ಸ್ಥಿರ ಮತ್ತು 3 ಮೊಬೈಲ್‌ ಕ್ಯಾಂಟೀನ್‌ಗಳಲ್ಲಷ್ಟೇ ಗ್ರಾಹಕರಿಗೆ ಊಟ, ತಿಂಡಿ ಕೊಡಲಾಗುತ್ತಿದೆ. 28 ಸ್ಥಿರ ಮತ್ತು 21 ಮೊಬೈಲ್‌ ಕ್ಯಾಂಟೀನ್‌ಗಳು ಸ್ಥಗಿತಗೊಂಡಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್‌ಗಳಲ್ಲೂಶುಚಿ-ರುಚಿಯಾದ ಆಹಾರ ದೊರಕುತ್ತಿಲ್ಲವೆಂಬ ದೂರುಗಳು ಕೇಳಿಬಂದಿವೆ. ಮೂರು ಪ್ಯಾಕೇಜ್‌ಗಳಿಗೆ ಅಸ್ತುಇಂದಿರಾ ಕ್ಯಾಂಟೀನ್‌ಗಳಿಗೆ ಕಾಯಕಲ್ಪ ನೀಡುವ ಜತೆಗೆ ಗ್ರಾಹಕರಿಗೆ ಬಗೆಬಗೆಯ ಊಟ-ತಿಂಡಿ ನೀಡುವ ಸಲುವಾಗಿ ಕರೆದಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿಈ ಹಿಂದೆ ಆಹಾರ ಪೂರೈಸುತ್ತಿದ್ದ ಸಂಸ್ಥೆಗಳೇ ಬಿಡ್‌ ಸಲ್ಲಿಸಿದ್ದವು.

ಅದಮ್ಯ ಚೇತನ ಸಂಸ್ಥೆ ಮಾತ್ರ ಟೆಂಡರ್‌ ಸಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ 4 ಪ್ಯಾಕೇಜ್‌ಗಳ ಪೈಕಿ 3 ಪ್ಯಾಕೇಜ್‌ಗಳ ಟೆಂಡರ್‌ ಅನ್ನು ಹೊಸದಿಲ್ಲಿ ಮೂಲದ ರಿವಾರ್ಡ್ಸ್ ಸಂಸ್ಥೆಯೇ ಪಡೆಯುವಲ್ಲಿ ಯಶಸ್ವಿಯಾಗಿದೆ.ರಿವಾರ್ಡ್ಸ್ ಸಂಸ್ಥೆಯು ಪೂರ್ವ-ಯಲಹಂಕ, ದಕ್ಷಿಣ, ಬೊಮ್ಮನಹಳ್ಳಿ-ರಾಜರಾಜೇಶ್ವರಿನಗರ-ಮಹದೇವಪುರ ವಲಯ ಪ್ಯಾಕೇಜ್‌ನ ಟೆಂಡರ್‌ ಪಡೆದುಕೊಂಡಿದೆ. ಒಟ್ಟು 144 ವಾರ್ಡ್‌ಗಳಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸಲಿದೆ. ಈ ಗುತ್ತಿಗೆ ಸಂಸ್ಥೆಗೆ ಕಾರ್ಯಾದೇಶ ನೀಡಲು ವಲಯ ಆಯುಕ್ತರಿಗೆ ಸೂಚಿಸಲಾಗಿದೆ. ಮುಂದಿನ 15 ದಿನಗಳೊಳಗೆ ಹೊಸ ಮೆನುವಿನೊಂದಿಗೆ ಇಂದಿರಾ ಕ್ಯಾಂಟೀನ್‌ಗಳು ಆರಂಭವಾಗಲಿವೆ.ಉಳಿದ ಒಂದು ಪ್ಯಾಕೇಜ್‌ಗೆ ಚೆಫ್‌ಟಾಕ್‌ ಮತ್ತು ಶಶಿ ಕೇಟರರ್ಸ್ ಸಂಸ್ಥೆಗಳು ಟೆಂಡರ್‌ ಹಾಕಿದ್ದವು. ತಾಂತ್ರಿಕ ಬಿಡ್‌ನಲ್ಲಿ ಸಮರ್ಪಕ ದಾಖಲೆ ಸಲ್ಲಿಸಿದ ಕಾರಣಕ್ಕೆ ಚೆಫ್‌ಟಾಕ್‌ ಸಂಸ್ಥೆಯನ್ನು ತಿರಸ್ಕರಿಸಲಾಗಿದೆ. ಈ ಹಿನ್ನೆಲೆಯಲ್ಲಿಸಂಸ್ಥೆಯು ನ್ಯಾಯಾಲಯದ ಮೆಟ್ಟಿಲೇರಿದ್ದು, ತಡೆಯಾಜ್ಞೆ ತಂದಿದೆ.”ಸಮರ್ಪಕ ದಾಖಲೆಗಳನ್ನು ಸಲ್ಲಿಸಿದ್ದರೂ ತಾಂತ್ರಿಕ ಬಿಡ್‌ನಲ್ಲಿತಿರಸ್ಕರಿಸಲಾಗಿದೆ. ಅಲ್ಲದೇ ಪಾಲಿಕೆಯಿಂದ ಕೋಟ್ಯಂತರ ರೂ. ಬಾಕಿ ಬರಬೇಕಿದೆ. ಹೀಗಾಗಿ, ದಾಸರಹಳ್ಳಿ-ಪಶ್ಚಿಮ ವಲಯ ಪ್ಯಾಕೇಜ್‌ಗೆ ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದುಕೊಳ್ಳಲಾಗಿದೆ’ ಎಂದು ಚೆಫ್‌ಟಾಕ್‌ನ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಪೂಜಾರಿ ತಿಳಿಸಿದರು. ಸಬ್ಸಿಡಿ ಮೊತ್ತದಲ್ಲಿ ಹೆಚ್ಚಳಸಾರ್ವಜನಿಕರಿಂದ ಸದ್ಯ ಇಂದಿರಾ ಕ್ಯಾಂಟೀನ್‌ಗಳಲ್ಲಿಸಂಗ್ರಹಿಸುತ್ತಿರುವ ದರವನ್ನೇ (ಬೆಳಗ್ಗಿನ ಉಪಹಾರ 5 ರೂ., ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ತಲಾ 10 ರೂ.) ಮುಂದುವರಿಸಲು ತೀರ್ಮಾನಿಸಲಾಗಿದೆ.

ಆದರೆ, ಬಿಬಿಎಂಪಿಯಿಂದ ಗುತ್ತಿಗೆ ಸಂಸ್ಥೆಗಳಿಗೆ ನೀಡುವ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಲಾಗಿದೆ. ಆಹಾರ ಸರಬರಾಜು ಸಂಸ್ಥೆಗೆ ದಿನಕ್ಕೆ ಒಬ್ಬರಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಸೇರಿ ಒಟ್ಟು 42 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. ಅದರಂತೆ ಗುತ್ತಿಗೆ ಸಂಸ್ಥೆಗಳಿಗೆ ಮೂರು ಹೊತ್ತಿನ ಆಹಾರ ವಿತರಣೆಗೆ 67 ರೂ. ಸಿಗಲಿದೆ.ಇಂದಿರಾ ಕ್ಯಾಂಟೀನ್‌ಗಳಿಗೆ ಆಹಾರ ಪೂರೈಸುತ್ತಿರುವ ಕೆಲ ಸಂಸ್ಥೆಗಳು ಕಡಿಮೆ ಸಂಖ್ಯೆಯ ಗ್ರಾಹಕರಿಗೆ ಆಹಾರ ವಿತರಿಸಿ, ಹೆಚ್ಚಿನ ಲೆಕ್ಕ ತೋರಿಸಿ ಬಿಲ್‌ ಪಡೆಯುತ್ತಿರುವ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಪ್ರತಿ ಕ್ಯಾಂಟೀನ್‌ನಲ್ಲಿ ಕಿಯೋಸ್ಕ್‌ಗಳನ್ನು ಅಳವಡಿಸಿ, ಊಟ-ತಿಂಡಿಯ ಟೋಕನ್‌ ಪಡೆಯುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಅಲ್ಲದೆ, ಅಡುಗೆ ಮನೆ ಮತ್ತು ಕ್ಯಾಂಟೀನ್‌ಗಳಲ್ಲಿ ನಿಯೋಜಿಸಲ್ಪಡುವ ಮಾರ್ಷಲ್‌ಗಳೂ ಊಟ, ತಿಂಡಿ ತಯಾರಿಕೆ ಪ್ರಮಾಣ ಹಾಗೂ ವಿತರಣೆಯ ಲೆಕ್ಕ ಪಡೆಯಲಿದ್ದಾರೆ.

52 ಕ್ಯಾಂಟೀನ್‌ಗೆ 4ಜಿ ವಿನಾಯಿತಿಬಿಬಿಎಂಪಿ ವ್ಯಾಪ್ತಿಯಲ್ಲಿಹೆಚ್ಚುವರಿ ಇಂದಿರಾ ಕ್ಯಾಂಟೀನ್‌ಗಳನ್ನು ಅಡುಗೆ ಕೋಣೆ ಸಹಿತ ನಿರ್ಮಿಸುವ ಗುತ್ತಿಗೆಯನ್ನು ಎಕ್ಸೆಲ್‌ ಪ್ರೀಕಾಸ್ಟ್‌ ಸೊಲ್ಯೂಷನ್‌ ಪ್ರೈವೆಟ್‌ ಲಿಮಿಟೆಡ್‌ಗೆ ವಹಿಸಲು 4ಜಿ ವಿನಾಯಿತಿ ನೀಡಿ ಸಚಿವ ಸಂಪುಟ ನಿರ್ಣಯಿಸಿದೆ. ಇಂದಿರಾ ಕ್ಯಾಂಟೀನ್‌ಗಳನ್ನು ಸ್ಥಾಪಿಸಲು ಮತ್ತು ಇದಕ್ಕೆ ತಗಲುವ 20 ಕೋಟಿ ರೂ. ಅನುದಾನವನ್ನು ಪಾಲಿಕೆಗೆ ಬಿಡುಗಡೆ ಮಾಡಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಟೀ, ಕಾಫಿ; ಬ್ರೆಡ್‌-ಜಾಮ್‌ಇಂದಿರಾ ಕ್ಯಾಂಟೀನ್‌ಗಳ ಆಹಾರದ ಮೆನುವಿನಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ರಾಗಿ ಮುದ್ದೆ, ಸೊಪ್ಪಿನ ಸಾರು, ಇಡ್ಲಿ, ಪುಲಾವ್‌, ಖಾರಾಬಾತ್‌, ಪೊಂಗಲ್‌, ಬ್ರೆಡ್‌-ಜಾಮ್‌, ಮಂಗಳೂರು ಬನ್ಸ್‌, ಬಿಸಿಬೇಳೆಬಾತ್‌, ಟೀ, ಕಾಫಿ ನೀಡಲಾಗುತ್ತದೆ. ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿರಾಗಿ ಮುದ್ದೆ, ಚಪಾತಿ, ಅನ್ನ, ಸಾಂಬಾರು ಇರಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Chamber of Commerce Shivamogga ಸರಿಯಾದ ಆಹಾರಕ್ರಮ ಅನುಸರಿಸಿದರೆ ಉತ್ತಮ ಆರೋಗ್ಯ- ಡಾ.ಲತಾ ಶೇಖರ್

Chamber of Commerce Shivamogga ಭಾರತೀಯ ಪರಂಪರೆಯ ಚಿಕಿತ್ಸಾ ಪದ್ಧತಿಯಲ್ಲಿ ವಿಶೇಷ...

Yaksha Sinchana Trust ಯಕ್ಷ ಸಿಂಚನ ಟ್ರಸ್ಟ್ ನ ಆಶ್ರಯದಲ್ಲಿ ನವೆಂಬರ್ 17 ರಂದು ಪೌರಾಣಿಕ ಯಕ್ಷೋತ್ಸವ

Yaksha Sinchana Trust ಹವ್ಯಾಸಿ ಯಕ್ಷಗಾನ ರಂಗಭೂಮಿಯಲ್ಲಿ ತನ್ನದೇಯಾದ ಸಾಧನೆಯನ್ನು ಮಾಡಿರುವ...