Sunday, December 14, 2025
Sunday, December 14, 2025

Shivamogga News ಕನ್ನಡದಲ್ಲಿ ವೈದ್ಯಕೀಯ ಸಾಹಿತ್ಯ ವಿಪುಲವಾಗಿ ಬರುತ್ತಿದೆ- ಡಾ.ಕೆ.ಎನ್.ಗುರುದತ್

Date:

Shivamogga News ವೈದ್ಯಕೀಯ ಸಾಹಿತ್ಯ- ಒಂದು ಕಿರು ಅವಲೋಕನ” ಮಾಡಿದವರು ಡಾ.ಕೆ.ಎನ್.ಗುರುದತ್ತ.
ಸಹೃದಯರಾದ ಡಾ.ಗುರುದತ್ತರ ಸ್ವಗೃಹದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ನಡೆಯಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವಿಶೇಷವಾಗಿ‌
ಮನೆಮನೆಯಲ್ಲಿ ಸಾಹಿತ್ಯ
ಸಹೃದಯ ಸ್ಪಂದನ ಏರ್ಪಡಿಸಿತ್ತು. ವೈದ್ಯರೇ ಬರೆದರೆ ಸಾಹಿತ್ಯವಾದೀತೆ‌ ? ಎಂಬ ಪ್ರಶ್ನೆಯಿಂದ
ತಮ್ಮ ವಿಚಾರ ಸರಣಿಯನ್ನ ಉಪನ್ಯಾಸಕಾರರಾದ
ಡಾ .ಗುರುದತ್ ಆರಂಭಿಸಿದರು.
ವೈದ್ಯರು ವೈದ್ಯಕೀಯದ ಬಗ್ಗೆ ರಚಿಸಿದರೆ ಅದು ಶಾಸ್ತ್ರ ವಾಗುತ್ತದೆ.
ಆದರೆ ರೋಗ, ಚಿಕಿತ್ಸೆ ,ಮತ್ತು‌ ರೋಗಿಗಳೊಂದಿಗಿನ ಸ್ಪಂದನ ಅಭಿವ್ಯಕ್ತಿ ಸಾಹಿತ್ಯವಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಉಲ್ಲೇಖವಿರುವ ಕನ್ನಡದ ಮೊದಲ ವೈದ್ಯಸಾಹಿತ್ಯ ಗ್ರಂಥ,
ಚಂದ್ರರಾಜನ (1079) “ಮದನತಿಲಕ,”

ಸಾಹಿತ್ಯದಲ್ಲಿ ವೈದ್ಯಕೀಯದ ಹೊಳಹುಗಳು ಯಥೇಚ್ಚವಿವೆ. ಅವು ಮಾಹಿತಿ ಮತ್ತು ಜಾಗೃತಿಯನ್ನು ಮೂಡಿಸುವಂತಿವೆ.
ಸರ್ವಜ್ಞನ ವಚನಗಳಲ್ಲಿ ಈ ತರಹೆಯ ಜಾಗೃತಿ
ಸಂದೇಶವನ್ನು ಕಾಣಬಹುದು.

“ಹಸಿವಿಲ್ಲದುಣಬೇಡ
ಹಸಿದು ಮತ್ತಿರಬೇಡ
ಬಿಸಿಬೇಡ ತಂಗಳುಣಬೇಡ
ವೈದ್ಯನ ಬೆಸನವೇ ಬೇಡ ಸರ್ವಜ್ಞ”
ಹಸಿವಾದರೆ ತಿನ್ನು.
ಅನಗತ್ಯ ತಿನ್ನುಬಾಕತನ ಬೇಡ ಎಂಬುದೇ ಇಲ್ಲಿನ ಆಶಯ. ಅತೀ ಆಹಾರ ಸೇವನೆ,ಆರೋಗ್ಯಕ್ಕೆ ಹಾನಿಕರ ಎಂಬ ವಾಸ್ತವ,ಹಿರಿಯರು ಹೇಳುವ ಹಿತನುಡಿಯೂ ಇದೇ ಆಗಿದೆ.
ತಂಗಳುಣಬೇಡ. ಹಳಸಿದ ಅನ್ನ ಸೇವಿಸಿದರೆ ಆರೋಗ್ಯ ಕೆಡುತ್ತದೆ.
ಹೀಗೆ ತೀರ ಬಿಸಿಬಿಸಿಯದನ್ನೂ ಸೇವಿಸಬೇಡ.
ಹಸಿದುಕೊಂಡೇ ಇರಬೇಡ. ಈ ಎಲ್ಲ ಸಂಗತಿಗಳೂ ಪ್ರಸ್ತುತ
ಈಗಿನ ಸಮುದಾಯಕ್ಕೆ ಸೂಕ್ತವಾಗಿ ಹೇಳಿದಂತಿದೆ.

ಒಂದ್ಹೊತ್ತುಂಡವ ಯೋಗಿ ‘ ಎರಡ್ಹೊತ್ತುಂಡವಭೋಗಿ’
ಮೂರ್ಹೊತ್ತುಂಡವ ರೋಗಿ
ನಾಕ್ಹೊತ್ತುಂಡವನ ಹೊತ್ಕೊಂಡು ಹೋಗಿ” ಎಂಬ ಆಡುಮಾತೂ ಇದೆ

ಹೀಗೆ ಹಿಂದಿನಿಂದಲೂ ವೈದ್ಯಕೀಯ ಕುರಿತ ಸಲಹೆ ,ಮಾಹಿತಿ‌
ಕೊಡುವ ಮೂಲಕ ಒಂದಿಲ್ಲೊಂದು ಜಾಗೃತಿ ಮೂಡಿಸುವಲ್ಲಿ ಬರಹಗಳಲ್ಲಿ ಒಡಮೂಡಿಬಂದಿವೆ.

ವೈದ್ಯಕೀಯ ಬರಹಗಾರರಿಗೆ ಕನ್ನಡದ ಸಮಾನಪದಗಳ ಕೊರತೆಯಿದ್ದಾಗ ವೈದ್ಯಕೀಯ ನಿಘಂಟು ರಚಿಸಿ ಕೊಟ್ಟವರು ಡಾ.ಡಿ.ಎಸ್.ಶಿವಪ್ಪ.
ನಂತರ ಕನ್ನಡದಲ್ಲಿ ಅನೇಕ ವೈದ್ಯಕೀಯ ಬರಹಗಾರರು ಬಂದರು.
ಡಾ.ರಾ.ಶಿವರಾಂ,
ಡಾ.ಅನುಪಮಾ ನಿರಂಜನ, ಡಾ.ಸಿ.ಎನ್.ಚಂದ್ರಶೇಖರ್. ಡಾ.ಮೀನಂಗುಡಿ ಸುಬ್ರಮಣ್ಯ ,
ಡಾ.ಅಶೋಕ ಪೈ, ಡಾ.ಕೆ.ಆರ್.ಶ್ರೀಧರ್
ಡಾ.ಎಚ್.ಡಿ.
ಚಂದ್ರಪ್ಪ ಗೌಡರು..ಹೀಗೆ‌ಬರಹಗಾರರ ಪ್ರವಾಹವೇ ಇದೆ. ಎಂದು ಅವರೆಲ್ಲರ ಕೊಡುಗೆಗಳನ್ನ ಸ್ಮರಿಸಿದರು.

ಸಾಹಿತ್ಯ ರಚನೆ ಅನ್ನುವುದಕ್ಕಿಂತ ವೈದ್ಯಕೀಯ ಬರಹಗಾರರು ಸಾಮಾಜಿಕ ಎಚ್ಚ ಮೂಡಿಸುವಲ್ಲಿ , ಆರೋಗ್ಯದ ಬಗ್ಗೆ ಕಾಳಜಿಯನ್ನ ಸ್ವಯಂಪ್ರೇರಣೆಯಿಂದ ಹೊಂದುವಂತೆ
ಮಾಡುವಲ್ಲಿ‌ ಯಶಸ್ಸು ಸಾಧಿಸಿದ್ದಾರೆ.
ಪಾಶ್ಚಿಮಾತ್ಯ ದೇಶಗಳ ವೈದ್ಯರ ಕುರಿತು ಸೋದಾಹರಣ ಭಾಷಣ ಮಾಡಿದರು.

ಬಿ.ಸಿ.ರಾಯ್ ಪ್ರಶಸ್ತಿ ಪುರಸ್ಕೃತ
ಡಾ.ಕೃಷ್ಣ ಎಸ್. ಭಟ್ ಅವರು
ಸಂವಾದದಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.
ಶಿವಮೊಗ್ಗ ಜಿಲ್ಲಾ ಶಾಖೆ ಅಧ್ಯಕ್ಷ
ಡಾ.ಸುಧೀಂದ್ರ ಅವರು‌ ಮಾತನಾಡಿದರು.
ಕವಿ,ಕಾದಂಬರಿಕಾರರ ಮನಸ್ಥಿತಿಯೇ ಬೇರೆ ,ವೈದ್ಯಕೀಯ ಬರಹಗಾರರ ನಿರೂಪಣೆಯೇ ಭಿನ್ನ.ಏಕೆಂದರೆ ಕವಿ‌ ಕಲ್ಪಿಸಿ ಕೃತಿ ರಚುಸುತ್ತಾನೆ.ಆದರೆ ವೈದ್ಯಕೀಯ ಸಾಹಿತಿಗಳು ವಾಸ್ತವ ಮತ್ತು ಸ್ವಾಸ್ಥ್ಯದ ಚೌಕಟ್ಟಿನೊಳಗೇ ಅಭಿವ್ಯಕ್ತಿ ಸಾಧಿಸುವ ಅಪೂರ್ವತೆ ಹೊಂದಿರುತ್ತಾರೆ ಎಂದರು

ಸದಸ್ಯೆ ಶ್ರೀಮತಿ‌ ಜಯಶ್ರೀ ಅವರು‌‌ ಪ್ರಾರ್ಥಿಸಿದರು.
ಕೋಶಾಧಿಕಾರಿ ಕೆ.ಜಿ.ಮಂಜುನಾಥ ಶರ್ಮ ಸ್ವಾಗತ ಬಯಸಿದರು.
ಸಂಪರ್ಕ ಪ್ರಮುಖ ಎಚ್.ಎನ್ ಸತ್ಯನಾರಾಯಣ ವಂದನೆ ಅರ್ಪಿಸಿದರು.
ಉನ್ಯಾಸ ನೀಡಿದ ಡಾ.ಗುರುದತ್ ಅವರ ಶ್ರೀಮತಿ ಡಾ.ವಸುಧಾ
ಅವರು ಆತಿಥ್ಯ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...