Karnataka Minorities Development Corporation ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ವತಿಯಿಂದ 2024-25 ನೇ ಸಾಲಿಗೆ ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿಗಳು ಮತ್ತು ಆಂಗ್ಲೋ ಇಂಡಿಯನ್ ಸಮುದಾಯದ ವಿದ್ಯಾರ್ಥಿಗಳಿಗೆ ಅರಿವು(ರಿನಿವಲ್) ಸಾಲ ಯೋಜನೆ ಅಡಿ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗಿರುವ ಎಂಬಿಬಿಎಸ್ ಎಂಡಿ ಎಂಎಸ್, ಬಿಡಿಎಸ್, ಎಂಡಿಎಸ್, ಬ್ಯಾಚುಲರ್ ಆಫ್ ಆಯುಷ್, ಮಾಸ್ಟರ್ ಆಫ್ ಆಯುಷ್, ಬಿ.ಇ. ಬಿ.ಟೆಕ್, ಎಂಇ, ಎಂ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್, ಮಾಸ್ಟರ್ ಆಫ್ ಆರ್ಕಿಟೆಕ್ಚರ್, ಎಂಬಿಎ, ಎಂಸಿಎ, ಎಲ್‌ಎಲ್‌ಬಿ, ಬಿಎಸ್‌ಸಿ ಇನ್ ಹಾರ್ಟಿಕಲ್ಚರ್. ಕೃಷಿ ಇಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಫಾರೆಸ್ಟರಿ, ಪಶುವೈದ್ಯಕೀಯ ಮತ್ತು ಪ್ರಾಣಿ ತಂತ್ರಜ್ಞಾನ, ಮೀನುಗಾರಿಕೆ, ಸಿರಿಕಲ್ಚರ್, ಗೃಹ/ಸಮುದಾಯ ವಿಜ್ಞಾನಗಳು ಆಹಾರ ಪೋಷಣೆ ಮತ್ತು ಆಹಾರ ಪದ್ಧತಿ, ಬಿ. ಫಾರ್ಮಾ, ಎಂ. ಫಾರ್ಮಾ, ಫಾರ್ಮಾ ಡಿ ಆಂಡ್ ಡಿ ಫಾರ್ಮಾ ಕೋರ್ಸ್ಗಳಲ್ಲಿ ಆಯ್ಕೆಯಾಗಿರುವಂತಹ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅರಿವು (ರಿನಿವಲ್) ಸಾಲ ಯೋಜನೆಯಡಿಯಲ್ಲಿ ಆನ್‌ಲೈನ್ ಮೂಲಕ ದಿನಾಂಕ: 17-08-2024 ರಿಂದ ದಿನಾಂಕ: 31-10-2024 ರ ವರೆಗೆ ಅರ್ಜಿಯನ್ನು ಆಹ್ವಾನಿಸಲಾಗಿರುತ್ತದೆ.
Karnataka Minorities Development Corporation ವಿದ್ಯಾರ್ಥಿಗಳು ಹಿಂದಿನ ವರ್ಷದಲ್ಲಿ ಪಡೆದ ಸಾಲದ ಮೊತ್ತಕ್ಕೆ ಶೇ 12% ರಷ್ಟು ಹಣವನ್ನು ಪಾವತಿಸಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ. ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಕೆಇಎ) ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಳಲ್ಲಿ ವಿಧ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಹಾಗೂ ಅರಿವು ವಿದ್ಯಾಭ್ಯಾಸ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಸಹ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು ಇಂತಹ ವಿದ್ಯಾರ್ಥಿಗಳು ರಿನಿವಲ್ ಮೊತ್ತವನ್ನು ಪಾವತಿಸುವುದು ಅಗತ್ಯವಿರುವುದಿಲ್ಲ.
ಅರ್ಜಿ ಸಲ್ಲಿಸಲು ನಿಗಮದ ವೆಬ್‌ಸೈಟ್: kmdconline.karnataka.gov.in ಆನ್‌ಲೈನ್ ಮೂಲಕ ಭರ್ತಿ ಮಾಡಿದ ಅರ್ಜಿಯ ಪ್ರತಿಯನ್ನು ತೆಗೆದುಕೊಂಡು ವ್ಯಾಸಂಗ ಪ್ರಮಾಣಪತ್ರ, ಕಾಲೇಜು ಶುಲ್ಕ ವಿನ್ಯಾಸ, ಎಸ್‌ಎಸ್‌ಎಲ್‌ಸಿ ಅಂಕÀಪಟ್ಟಿ, ಹಿಂದಿನ ವರ್ಷ ಉತ್ತೀರ್ಣರಾದ ಅಂಕಪಟ್ಟಿ, ಬ್ಯಾಂಕ್ ಖಾತೆಯ ವಿವರ, 12% ಸಾಲದ ಮೊತ್ತ ಪಾವತಿಸಿದ ರಸೀದಿ, ಕೆಇಎ ಪ್ರವೇಶ ಆದೇಶದ ಪ್ರತಿ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣಪತ್ರ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ನೋಟರಿಯೊಂದಿಗೆ ಇಂಡೆಮ್ನಿಟಿ ಬಾಂಡ್, ವಿದ್ಯಾರ್ಥಿ ಮತ್ತು ಪೋಷಕರ ಸ್ವಯಂ ಘೋಷಣೆ ಪತ್ರ. ಈ ಎಲ್ಲಾ ದಾಖಲಾತಿಗಳೊಂದಿಗೆ ಆನ್‌ಲೈನ್ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 31-10-2024 ಆಗಿರುತ್ತದೆ. ಹಾಗೂ ಸದರಿ ದಾಖಲಾತಿಗಳನ್ನು ಆನ್‌ಲೈನ್ ಅರ್ಜಿಯ ಜೊತೆ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಚ್ಚುತರಾವ್ ಲೇ ಔಟ್, 4ನೇ ತಿರುವು, ನಂಜಪ್ಪ ಆಸ್ಪತ್ರೆ ಮುಂಭಾಗ ಶಿವಮೊಗ್ಗ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕಛೇರಿಯ ದೂರವಾಣಿ ಸಂಖ್ಯೆ:08182-228262 ಮತ್ತು ಜಿಲ್ಲಾ ವ್ಯವಸ್ಥಾಪಕರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.
Karnataka Minorities Development Corporation ಅರಿವು( ರಿನ್ಯುವಲ್)ಸಾಲ ಯೋಜನೆಯಡಿ ಅರ್ಜಿಗೆ ಆಹ್ವಾನ
Date:
