Friday, March 20, 2026
Friday, March 20, 2026

VISL Mine Society ಪಡಿತರದಾರರಿಗೆ ಸೇವಾನ್ಯೂನತೆ. ವಿಐ ಎಸ್ ಎಲ್ ಸೊಸೈಟಿ ಅಮಾನತು

Date:

VISL Mine Society ನ್ಯೂಟೌನ್ ಉಂಬ್ಳೇಬೈಲು ರಸ್ತೆಯಲ್ಲಿರುವ ವಿಐಎಸ್‌ಎಲ್ ಮೈನ್ ಸೊಸೈಟಿಯಲ್ಲಿ ಬಡವರಿಗೆ ನೀಡುವ ಪಡಿತರ26.47ಕ್ವಿಂಟಾಲ್ ಅಕ್ಕಿ ದಾಸ್ತಾನಿಲ್ಲದೆ ಕಡಿಮೆ ಇದ್ದುದ್ದನ್ನು ಆಹಾರ ಇಲಾಖಾಧಿಕಾರಿಗಳು ಪರಿಶೀಲಿಸಿ ಪತ್ತೆ ಹಚ್ಚಿ ಸೊಸೈಟಿಯನ್ನು ಅಮಾನತು ಮಾಡಿ ಕ್ರಮಕೈಗೊಂಡಿದ್ದಾರೆ.
ಆಹಾರ ಇಲಾಖೆಯ ನಿರೀಕ್ಷಕರು ಪರಿಶೀಲನೆ ಮಾಡಲಾಗಿ ಸೊಸೈಟಿಯಲ್ಲಿ ಇರಬೇಕಾಗಿದ್ದ 29.97 ಕ್ವಿಂಟಾಲ್ ಪಡಿತರ ಅಕ್ಕಿಯ ಬದಲು 3.50 ಕ್ವಿಂಟಾಲ್ ಮಾತ್ರ ಇದ್ದಿದ್ದನ್ನು ದಾಖಲಿಸಿಕೊಂಡು ಉಳಿಕೆ ೨೬.೪೭ ಕ್ವಿಂಟಾಲ್ ಇರಲಿಲ್ಲವೆಂದು ಮೇಲಾಧಿಕಾರಿಗಳಿಗೆ ಸಹಾಯಕ ನಿರ್ದೇಶಕರು ನೀಡಿದ ವರದಿ ಆಧರಿಸಿ ಜಿಲ್ಲಾ ಆಹಾರ ಇಲಾಖೆಯ ಉಪ ನಿರ್ದೇಶಕರು ತಕ್ಷಣದಿಂದ ಜಾರಿಗೆ ಬರುವಂತೆ ಸೊಸೈಟಿಯನ್ನು ಅಮಾನತು ಮಾಡಿದ್ದಾರೆ.
VISL Mine Society ಸೊಸೈಟಿಯಲ್ಲಿರುವ 250 ಪಡಿತರ ಚೀಟಿದಾರರ ಅನುಕೂಲಕ್ಕಾಗಿ ಟಿ.ಕೆ.ರಸ್ತೆಯ ಎಂ.ಎಂ.ಕಾಂಪೌಂಡ್ ಪಿಸಿಸಿಎಸ್ ಸೊಸೈಟಿಗೆ ಅಟ್ಯಾಚ್ ಮಾಡಿ ಆದೇಶಿಸಿದ್ದಾರೆ. ಪಿಸಿಸಿಎಸ್ ಸೊಸೈಟಿಯ ಕಾರ್ಯದರ್ಶಿ ಪಡಿತರ ಚೀಟಿದಾರರಿಗೆ ಅನುಕೂಲ ಕಲ್ಪಿಸಲು ಅಮಾನತ್ತುಗೊಂಡ ಸೊಸೈಟಿ ಸಮೀಪ ನ್ಯೂಟೌನ್ ಪೊಲೀಸ್ ಠಾಣೆ ಮುಂಭಾಗದ ಸಿದ್ದಲಿಂಗಯ್ಯ ಅವರ ಕಟ್ಟಡದಲ್ಲಿ ವಿಐಎಸ್‌ಎಲ್ ಮೈನ್ ಸೊಸೈಟಿಯ ಪಡಿತರ ಚೀಟಿದಾರರಿಗೆ ಅಕ್ಕಿ ಮತ್ತಿತರೆ ಪಡಿತರ ನೀಡಲಾಗುತ್ತಿದೆ. ಪಡಿತರ ಚೀಟಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸೊಸೈಟಿಯ ಕಾರ್ಯದರ್ಶಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...