Forest Area ಕೇರಳದ ವೈನಾಡಿನಲ್ಲಿ ನಡೆದ ಭೀಕರ ದುರಂತದ ಹಿನ್ನಲೆಯಲ್ಲಿ ಪಶ್ಚಿಮ ಘಟ್ಟ ಪ್ರದೇಶದ ಸೂಕ್ಷ್ಮತೆ ಮತ್ತು ಅದರ ಜಗತೀಕ ಮಹತ್ವವನ್ನು ಅರಿತು ಪರಿಸರ ರಕ್ಷಣೆಗಾಗಿ ಪ್ರೊ. ಮಾಧವ್ ಗಾಡ್ಗೀಳ್ ಸಮಿತಿ 2011ರಲ್ಲಿ ಸಲ್ಲಿಸಿದ ವರದಿಯನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪರಿಸರಕ್ಕಾಗಿ ನಾವು ಸಂಘಟನೆ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಇತ್ತೀಚೆಗೆ ಕೇರಳದಲ್ಲಿ ನಡೆದ ದುರಂತದಲ್ಲಿ ಗುಡ್ಡಗಳು ಕುಸಿದು ರಾತ್ರಿ ಬೆಳಗಾಗುವುದರೊಳಗೆ ಅಪಾರ ಪ್ರಮಾಣದ ಜೀವ, ಆಸ್ತಿ ಪಾಸ್ತಿ ನಷ್ಟವಾಯಿತು. ಅದೇ ರೀತಿ ಉತ್ತರ ಭಾರತದ ಹಿಮಾಚಲ ಪ್ರದೇಶ ಮತ್ತು ಉತ್ತರಖಾಂಡದಲ್ಲೂ ಹಲವು ಭೂ ಕುಸಿತಗಳಾಗಿವೆ. ಇದಕ್ಕೆ ಕಾರಣ ಪ್ರಕೃತಿಯ ಮೇಲೆ ಮಾನವನ ಅತಿಯಾದ ದಬ್ಬಾಳಿಕೆ, ಅರಣ್ಯ ಪ್ರದೇಶಗಳ ಒತ್ತುವರಿ, ಅಕ್ರಮ ಗಣಿಗಾರಿಕೆ, ರೆಸಾರ್ಟ್ ಹೋಂ ಸ್ಟೇ, ಹೋಟೆಲ್‌ಗಳ ಅಕ್ರಮ ನಿರ್ಮಾಣ, ರಸ್ತೆ ಅಗಲೀಕರಣಕ್ಕಾಗಿ ಮರಗಳ ಕಡಿತ, ರಸ್ತೆ, ರೈಲು ದಾರಿ, ವಿದ್ಯುತ್ ಲೈನ್ ಮಾತ್ರವಲ್ಲ, ಮನೆ, ಕಾರ್ಖಾನೆ ಇತ್ಯಾದಿ ಎಲ್ಲಾ ಕಾಮಗಾರಿಗಳಿಗೂ ಅವಿರತವಾಗಿ ಬುಲ್ಡೋಜರಗಳ ಎಣೆಯಿಲ್ಲದ ಬಳಕೆ, ನೀರಿನ ಸಹಾಯವಾದ Forest Area ಅರಿವಿಕೆಗೆ ತಡೆ, ಜೀವ ವೈವಿಧ್ಯವುಳ್ಳ ಅರಣ್ಯ ಪ್ರದೇಶದಲ್ಲಿ ಏಕ ಬೆಳೆಯ ನೆಡುತೋಪುಗಳು ಇವೆಲ್ಲವೂ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಭೂ ಕುಸಿತ ಹಾಗೂ ಮಣ್ಣಿನ ಸವಳಕಳಿಗಳಿಗೆ ಕಾರಣವಾಗಿವೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪಶ್ಚಿಮ ಘಟ್ಟ ಪ್ರಾಧಿಕಾರ ರಚಿಸುವುದು, ಸೂಕ್ಷ್ಮ ಪರಿಸರ ವಲಯ ಘೋಷಿಸುವುದು, ಪರಿಸರ ಪರಿಣಾಮ ಅಧ್ಯಯನವನ್ನು ಬಲಪಡಿಸುವುದು, ಸುಸ್ಥಿರ ಕೃಷಿ ಮತ್ತು ವನೀಕರಣವನ್ನು ಪ್ರೋ ಪ್ರಕೃತಿ ಸಂರಕ್ಷಣೆಗೆ ನಿಧಿ ಕಾಯ್ದಿರಿಸುವುದು, ಪರಿಸರ ಸ್ನೇಹಿ ಪ್ರವಾಸೋಧ್ಯಮಕ್ಕೆ ಮಾರ್ಗಸೂಚಿ ತಯಾರಿಸುವುದು, ಪವಿತ್ರಬನಗಳನ್ನು ಮತ್ತು ಪಾರಂಪರಿಕ ಜನವನ್ನು ರಕ್ಷಿಸುವುದು ಮೊದಲಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಪ್ರತಿ ಪಂಚಾಯಿತಿ, ಹೋಬಳಿ, ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಪಡೆಯನ್ನು ರಚಿಸಿ ದಾಖಲಾತಿ ಮಾಡಬೇಕು. ರಾಜಕೀಯೇತರ ತಜ್ಞರನ್ನು ಉಸ್ತುವಾರಿಗಳನ್ನಾಗಿ ಮಾಡಬೇಕು ಎಂದು ಸಂಘಟನೆ ಆಗ್ರಹಿಸಿದೆ.
ಮನವಿ ನೀಡುವ ಸಂದರ್ಭದಲ್ಲಿ ಶೇಖರ್ ಗೌಳೇರ್, ಎನ್.ಗೋಪಿನಾಥ್, ವಸಂತ ಹೋಬಳಿದಾರ್, ನವ್ಯಶ್ರೀ ನಾಗೇಶ್, ಪರಿಸರ ನಾಗರಾಜ್, ಗುರುದತ್ತ್, ಗೀತಾ, ಶರವಣ ಸಿ.ಎಂ., ಎಸ್.ಬಿ.ಅಶೋಕ್‌ಕುಮಾರ್, ಆರ್.ಎನ್. ಸ್ವಾಮಿ ಮೊದಲಾದವರು ಇದ್ದರು.
Forest Area ಗಾಡ್ಗಿಳ್ ವರದಿ ಅನುಷ್ಠಾನಕ್ಕೆ ಆಗ್ರಹ
Date: