Department of Handloom and Textiles ಕೈಮಗ್ಗ ಮತ್ತು ಜವಳಿ ಇಲಾಖೆಯು ಆ.23 ರಂದು ಮಧ್ಯಾಹ್ನ 12.00ಕ್ಕೆ ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಮಂಜುನಾಥ್ ಟವರ‍್ಸ್, 2ನೇ ಮಹಡಿ, ಗಾಂಧಿನಗರ, 1ನೇ ಮುಖ್ಯರಸ್ತೆ, ಜಿಲ್ಲಾ ಪಂಚಾಯತ್ ಇಲ್ಲಿ ಜವಳಿ/ಸಿದ್ಧ ಉಡುಪು ತಯಾರಕರ ಘಟಕ, ಕೈಮಗ್ಗ ಮತ್ತು ವಿದ್ಯುತ್ ಮಗ್ಗ ಸಹಕಾರ ಸಂಘ, ಇತರೆ ಜವಳಿ ಕ್ಷೇತ್ರದ ಉದ್ದಿಮೆದಾರರೊಂದಿಗೆ ಸಂವಾದ ಸಭೆಯನ್ನು ಏರ್ಪಡಿಸಿದೆ.
Department of Handloom and Textiles ಜವಳಿ ಮತ್ತು ಸಿದ್ಧ ಉಡುಪು ಉದ್ದಿಮೆದಾರರು ಈ ಸಭೆಯಲ್ಲಿ ಭಾಗವಹಿಸಿ ಹೊಸ ಜವಳಿ ನೀತಿಯಲ್ಲಿ ಅಳವಡಿಸಿಕೊಳ್ಳಬಹುದಾದ ಸಲಹೆ/ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಮಾಹಿತಿಗಾಗಿ ಇಲಾಖಾ ಕಚೇರಿ ದೂ.ಸಂ.: 08182-223405 ನ್ನು ಸಂಪರ್ಕಿಸುವುದು.