Monday, December 15, 2025
Monday, December 15, 2025

Kudali – Samsthan Mutt ಪಂಚಮಹಾಯಜ್ಞಗಳಿಂದ ಆಧುನಿಕ ಸಮಸ್ಯೆಗಳಿಗೆ ಪಾರಂಪರಿಕ ಪರಿಹಾರ ಸಾಧ್ಯ- ಶ್ರೀಶ್ರೀಅಭಿನವ ಶಂಕರ ಭಾರತಿಶ್ರೀ

Date:

Kudali – Samsthan Mutt ಭಾರತೀಯ ಪರಿಸರದಲ್ಲಿನ ಆಧುನಿಕ ಸಮಸ್ಯೆಗಳಿಗೆ ನಮ್ಮ ಸನಾತನ ಹಿನ್ನೆಲೆಯಲ್ಲಿಯೇ ಸಾಕಷ್ಟು ಪರಿಹಾರಗಳಿವೆ ಎಂದು‌ ಶಿವಮೊಗ್ಗ ಜಿಲ್ಲೆ ಕೂಡಲಿ ಸಂಸ್ಥಾನದ ಶ್ರೀಶಾರದಾ ಪೀಠದ
ಶ್ರೀಶ್ರೀಅಭಿನವ ಶಂಕರ ಭಾರತಿ ಸ್ವಾಮೀಜಿ ಹೇಳಿದ್ದಾರೆ.

ಈಗಷ್ಟೇ ಸುಮಾರು ಐವತ್ತು ವರ್ಷಗಳ ಹಿಂದೆ ಇಂಗ್ಲೆಂಡಿನಲ್ಲಿ ಕಲಿತು ಬಂದ ಒಂದು ಬೃಹತ್‌
ವಿದ್ವಾಂಸ ವೃಂದ
ನಮ್ಮ ಭಾರತೀಯ ಹಿಂದೂ ಧರ್ಮ ,ವೇದೋಪನಿಷತ್ತುಗಳು,
ಇವೆಲ್ಲ ಜೀವ ವಿರೋಧಿ ಎಂಬ
ಸಿದ್ಧಾಂತವನ್ನಿಟ್ಟು ಕೊಂಡು
ಸಾಹಿತ್ಯ ರಚನೆಗೆ ತೊಡಗಿದರು.
ಈ ಬಗೆಯ ದೃಷ್ಟಿಕೋನದಿಂದ
ನಮ್ಮಲ್ಲಿನ ಭಾರತೀಯ ದರ್ಶನಗಳನ್ನ ಮೂಲೆಗುಂಪು ಮಾಡುವಲ್ಲಿ ಒಂದು
“ ಇಂಗ್ಲೀಷ್ ಕಲಿತವರ ಪಡಸಾಲೆ “ಯೇ ಬಲವಾಗಿ ಬೇರೂರಿತು.
ಇಂಗ್ಲೀಷ್ ಸಾಹಿತ್ಯವೇ ಸಾಹಿತ್ಯ.
ಅದೇ ಜೀವಪರ. ಸಾಹಿತ್ಯರೂಪಿಯಾಗಿ ಭಾರತದಲ್ಲಿ ಲಭ್ಯವಿರುವ ವೇದ ಸಾಹಿತ್ಯ ಜೀವ ವಿರೋಧಿ ಎಂಬುದನ್ನ ಸಾರ್ವಕಾಲಿಕವಾಗಿ ಜನರ ಮನಸ್ಸಿನಲ್ಲಿ ಬಿತ್ತಲಾಯಿತು.

Kudali – Samsthan Mutt ಬ್ರಿಟೀಷರಿಗೆ ಬೇಕಾದದ್ದೂ ಇದೆ
ಕಲಿತವರಿಂದ ಚರಿತ್ರೆಯನ್ನ ತಮ್ಮಮೂಗಿನ‌‌ ನೇರಕ್ಕೇ ನಿರ್ದೇಶಿಸಿ ಬರೆಸಿದರು.

ಸಾಹಿತ್ಯ ವಲಯದಲ್ಲಿ ಸ್ಥಾಪಿಸಿದ ಈ ವಾದ ತತ್ವವಾಗಿ ವ್ಯಕ್ತಿಗಳ, ಸಂಘಟನೆಗಳ ಅಸ್ತ್ರಗಳಾದವು.
ಕಡೆಗವು ರಾಜಕೀಯ ಪ್ರಣಾಳಿಕೆಗಳ ಒಳ ಸೇರಿದವು.

ನಿಜಕ್ಕೂ ನಾವು ಎದಿರಿಸುತ್ತಿರುವ ಸಮಸ್ಯೆಗಳು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ ಮತ್ತು
ರಾಷ್ಟ್ರಮಟ್ಟದಲ್ಲಿವೆ.
ಕಾರಣ, ಪೂರ್ವಿಕವಾಗಿ ಕೂಡು ಕುಟುಂಬಗಳಿದ್ದ ನಮ್ಮ ಸಾಮಾಜಿಕ ವ್ಯವಸ್ಥೆ ಆಧುನಿಕತೆ ಗಾಳಿಬೀಸುತ್ತಿದ್ದಂತೆಯೇ ಚದುರಿತು.
ನಾವು ನಮ್ಮ ವೇದ ಸಾಹಿತ್ಯದ ಬಗೆಗಿನ ಅವಜ್ಞತೆಗೊಳಗಾದೆವು.
ಎಂದು ಶ್ರೀಗಳು‌ ನುಡಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ,ಶಿವಮೊಗ್ಗ ಜಿಲ್ಲಾ ಶಾಖೆಯ ವತಿಯಿಂದ ಏರ್ಪಡಿಸಿದ್ದ ‘ ಶ್ರಾವಣ ಸಂಜೆ’ ಕಾರ್ಯಕ್ರಮದಲ್ಲಿ
ಅವರು ಅನುಗ್ರಹ ಉಪನ್ಯಾಸ ನೀಡಿ ಮಾತನಾಡಿದರು.
ಪಂಚಮಹಾ ಯಜ್ಞಗಳನ್ನ ನಮ್ಮಲ್ಲಿ ವೇದಕಾಲೀನವಾಗಿದ್ದವು.
ದೇವ ಯಜ್ಞ, ಪಿತೃ ಯಜ್ಞ, ಭೂತ ಯಜ್ಞ,ಬ್ರಹ್ಮ‌ಯಜ್ಞ, ಮನುಷ್ಯ ಯಜ್ಞ.
ಇಲ್ಲಿ ಯಜ್ಞ ಎಂದರೆ ತ್ಯಾಗ ಎಂಬರ್ಥವಿದೆ.
ದೇವಯಜ್ಞದಲ್ಲಿ , ಯಜ್ಞಯಾಗಾದಿಗಳ ಮೂಲಕ ದೈವಗಳ ಕೃಪೆಗೊಳಗಾಗುವುದು.
ನಿಸರ್ಗದಲ್ಲಿ ಎಲ್ಲವೂ ದೈವದ ಕೊಡುಗೆ ಎಂದು ಪರಿಭಾವಿಸುವುದು.

ಬ್ರಹ್ಮ ಯಜ್ಞದಲ್ಲಿ ನಾವು ಪಡೆದ ಜ್ಞಾನವನ್ನ ಪ್ರತಿಫಲಾಪೇಕ್ಷೆ ಇಲ್ಲದೇ ಅರ್ಥಿಗಳಿಗೆ ಕಲಿಸುವುದು.
ನಾವು ಅರ್ಜಿಸಿದ ವಿದ್ಯೆಯನ್ನ
ಹೆಚ್ಚುವರಿಯಾಗಿ ನೀಡುವುದು.ಸ್ವಯಂ ಜ್ಞಾನ ಜೀವನದ ಜಂಜಡಗಳಿಂದ ಮುಕ್ತಗೊಳಿಸುತ್ತದೆ.

ದೇವ ಯಜ್ಞದಲ್ಲಿ ನಮ್ಮ ನಂಬಿಕೆಯ ದೇವರುಗಳ ಆರಾಧನೆ.
ಹೋಮ ಹವನಗಳ ಮೂಲಕ
ವಾತಾವರಣ ಶುದ್ಧತೆ ಮತ್ತು
ಸ್ವಾಸ್ಥ್ಯ ಸಾಧನೆಗೆ ಸಹಾಯಕ.ನಮ್ಮ ಆರೋಗ್ಯ ಸಂರಕ್ಷಿಸುವಲ್ಲಿ ಬಲವಾದ ಮಾರ್ಗ.
ಪಿತೃಯಜ್ಞದಲ್ಲಿ ನಮ್ಮ ವಂಶದ ಹಿರಿಯರಿಗೆ ವೈದೀಕ ಶ್ರಾದ್ಧಗಳಲ್ಲಿ ನೀಡುವ ಗೌರವ. ಇದರಿಂದ ಈ ಭೂಮಿಯಲ್ಲಿ ನಾನು ಯಾರ ಮಗ. ನಮ್ಮ ಹಿರಿಯರ ಪರಂಪರೆ ಯಾವುದು ಎಂದು ನಾವೇ ಪ್ರತೀ‌ಕ್ಷಣದಲ್ಲೂ ಸ್ಮರಿಸುವ ಮಾರ್ಗ. ನಮ್ಮ ಅಸ್ತಿತ್ವದ ಅರಿವಾದಲ್ಲಿ ನಮ್ಮ ಬದುಕಿನ ಆದ್ಯತೆಗಳೇ ಇರುವುದಿಲ್ಲ. ಬರುವುದನ್ನ ಬಂದಹಾಗೆ ಅನುಭವಿಸುವುದು
ಇನ್ನು ಮನುಷ್ಯ ಯಜ್ಞ. ನಾವು ಜೀವಿಸುತ್ತಿರುವ ಸಮಾಜದಲ್ಲಿ‌
ನಮ್ಮ ದೈನಿಕ ಆಹಾರದಲ್ಲಿ ಅತಿಥಿಯೊಬ್ಬರಿಗೆ ದಿನವೂ ಉಣಬಡಿಸುವುದು. ನಿರ್ಗತಿಕರು,ಪೀಡಿತರು ,ಹಸಿದವರು ಮುಂತಾದವರಿಗೆ ಆಹಾರ ನೀಡುವುದು.
ಭೂತ ಯಜ್ಞದಲ್ಲಿ ಕೊನೇ ಪಕ್ಷ ಪರಿಸರದ ಪ್ರಾಣಿಪಕ್ಷಿಗಳಿಗೆ ಉಣ್ಣಿಸುವುದು. ಅವು ನಮ್ಮ ಜೀವನ ಚಕ್ರದ ಭಾಗವೆಂಬ ಮನೋಧರ್ಮ ಹೊಂದುವುದಾಗಿದೆ.
ಇವಿಷ್ಟೂ ಸಾರಾಂಶದಲ್ಲಿ ಹೇಳಬಹುದಾದ ನಾವು ಜನನಮಾಡಬಹುದಾದ ತ್ಯಾಗಗಳು ಅಂದರೆ ಯಜ್ಞಗಳಾಗಿವೆ.
ಇವುಗಳ ತಳಹದಿಯಲ್ಲಿ ನಮ್ಮ ಜೀವನ ರೂಪಿತವಾದರೆ ನಮಗೆ ಆಧುನಿಕತೆಯ ಈ‌ ಕಾಲದಲ್ಲೂ
ಸಮಸ್ಯಾರಹಿತ ಬದುಕು ನಮ್ಮದಾಗುತ್ತದೆ.
ಪೂಜ್ಯಶ್ರೀಶ್ರೀ ಅಭಿನವ ಶಂಕರ ಭಾರತಿ ಸ್ವಾಮಿಗಳು ಈ ಪಂಚಮಹಾಯಜ್ಞಗಳ ಬಗ್ಗೆ ಸೋದಾಹರಣವಾಗಿ ತಿಳಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಶಿವಮೊಗ್ಗ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ.ಸುಧೀಂದ್ರ ಅವರು ಉಪಸ್ಥಿತರಿದ್ದರು.
ಪಂಚಮಹಾಯಜ್ಞಗಳ ಬಗ್ಗೆ
ತಿಳಿಯಹೇಳಬೇಕಾದ ಹೊಣೆ
ನಮ್ಮ ಪ್ರಾಜ್ಞರ ಮೇಲಿದೆ. ಯುವ ಪೀಳಿಗೆಗೆ ಈ ತ್ಯಾಗಗಳು ಸರಳ
ಅರ್ಥವಾದರೆ ಆಧುನಿಕ ಸಮಸ್ಯೆಗಳೇ ಉದ್ಭವಿಸುವುದಿಲ್ಲ.
ಹೆಚ್ಚು ವಿದೇಶಿ ಭಾಷೆ ಕಲಿತ‌ ವಿದ್ಯಾವಂತರು ಪಾಶ್ಚಿಮಾತ್ಯ
ವಾದಗಳ ಮೂಲಕ ನಮ್ಮ ವೇದಕಾಲೀನ ಸಾಹಿತ್ಯದ ಒಳತಿರುಳನ್ನ ಅದುಮಿಡುವಲ್ಲಿ‌
ಯಶಸ್ವಿಯಾಗಿದ್ದಾರೆ. ಈ ಆಂತರ್ಯದ ಐಶ್ವರ್ಯವನ್ನ ನಮ್ಮದಾಗಿಸಿಕೊಳ್ಳಬೇಕು.
ಕೂಡಲಿಶ್ರೀಗಳು‌ ನಮಗೆಲ್ಲ
ಜ್ಞಾನದ ಮಿಂಚಿನ ಹೊಳಪನ್ನ
ನೀಡಿದ್ದಾರೆ. ಮುಂದಿನ ದಿನಗಳಲ್ಲಿ
ಅಭಾಸಾಪ ಚಟುವಟಿಕೆಗಳಿಗೆ
ಶ್ರೀಗಳ ಆಶೀರ್ವಾದ‌ ಇರಲಿ
ಎಂದು ಡಾ.ಸುಧೀಂದ್ರ ಆಶಿಸಿದರು.
ಮೊದಲಿಗೆ ಅಭಾಸಾಪ
ಸಮನ್ವಯ ಪ್ರಮುಖ ಶ್ರೀಹರ್ಷ ಅವರು ಸ್ವಾಮೀಜಿಗಳಿಗೆ ಗೌರವ ಅರ್ಪಿಸಿ ಎಲ್ಲರಿಗೂ ಸ್ಚಾಗತ ಕೋರಿದರು. ಶ್ರೀಮತಿ‌ ಹರ್ಷ ಅವರು ಶಾರದಾ ಪ್ರಾರ್ಥನೆ ಮಾಡಿದರು.ಖಜಾಂಚಿ ಮಂಜುನಾಥ ಶರ್ಮರು ಆಭಾರಮನ್ನಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...