Wednesday, October 2, 2024
Wednesday, October 2, 2024

Tarunodaya Samskruta Seva Samsthe ಓದಿನ ಜೊತೆ ಆಟದ ಕಡೆಗೂ ಮಕ್ಕಳು ಗಮನ ಕೊಡಬೇಕು- ಗುರುರಾಜ ಭಟ್

Date:

Tarunodaya Samskruta Seva Samsthe ಪಾಠದ ಜೊತೆಗೆ ಆಟವನ್ನೂ ಆಡಿಕೊಂಡು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಂತರಾಗಿರ ಬೇಕೆಂದು ಉಡುಪಿ ಸ್ಟೋರ್ಸ್ ನ ಗುರುರಾಜ್ ಭಟ್ ತಿಳಿಸಿದರು.

ಅವರು ಶಿವಮೊಗ್ಗ ನಗರದ ತರುಣೋದಯ ಸಂಸ್ಕೃತ ಸೇವಾ ಸಂಸ್ಥೆ ಸಂಸ್ಕೃತ ಭಾರತಿ ಮತ್ತು ಉಡುಪಿ ಸ್ಟೋರ್ಸ್‌ನ ಸಹಯೋಗದಲ್ಲಿ ವಿನೋಬಾ ನಗರದಲ್ಲಿ ಇರುವ ಶ್ರೀ ಶನೈಶ್ಚರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪ್ರೌಢಶಾಲಾ ಸಂಸ್ಕೃತ ವಿದ್ಯಾರ್ಥಿಗಳ ಕ್ರೀಡೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಮಕ್ಕಳು ಓದಿನ ಜೊತೆಗೆ ಆಟದ ಕಡೇ ಕೂಡ ಹೆಚ್ಚಿನ ಗಮನವನ್ನು ಕೊಡಬೇಕು ಇದರಿಂದ ಅವರಿಗೆ ಏಕಾಗ್ರತೆ, ಸೋಲು ಗೆಲುವಿನ ಪರಿಚಯ, ದೈಹಿಕ ಸಾಮರ್ಥ, ಮಾನಸಿಕ ನೆಮ್ಮದಿ ಸಿಗುತ್ತದೆ ಎಂದರು.

ಕ್ರೀಡೆಗಳಲ್ಲಿ ಹಲವಾರು ಬಗೆಗಳನ್ನು ನಾವು ಕಾಣುತ್ತೇವೆ ಒಳಾಂಗಣ, ಹೊರಾಂಗಣ, ಜಾಣತನ, ಸಮೂಹ, ಜಾನಪದ ಕ್ರೀಡೆಗಳು ಇತ್ಯಾದಿ ಇವೆಲ್ಲವೂ ನಮ್ಮ ವೈಯುಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು. ‌

Tarunodaya Samskruta Seva Samsthe ಕಳೆದ 15 ವರ್ಷಗಳಿಂದ ನಮ್ಮ ಸಂಸ್ಥೆ ಸಂಸ್ಕೃತ ವಿದ್ಯಾರ್ಥಿಗಳಿಗೆ ಸಂಸ್ಕೃತೋತ್ಸವದಲ್ಲಿ ಏಳು ದಿನಗಳ ಕಾಲ ವಿವಿಧ ಸ್ಪರ್ಧೆಯನ್ನು ಹಮ್ಮಿಕೊಳ್ಳುವ ಮುಖಾಂತರ ಸಂಸ್ಕೃತ ಭಾಷಾ ಪ್ರಚಾರಕ್ಕೆ ಒತ್ತು ಕೊಡುತ್ತಿದೆ ಏಕೆಂದರೆ ಇಂದಿನ ಸನ್ನಿವೇಶದಲ್ಲಿ ನಮ್ಮ ಮಕ್ಕಳಿಗೆ ಸಂಸ್ಕೃತ ಅದ್ಯಯನ ಅವಶ್ಯಕ ಎಂಬುದನ್ನು ತಿಳಿಸುವ ಸಲುವಾಗಿ ಹಾಗೂ
ವಿದ್ಯಾರ್ಥಿಗಳು ಸೋಲೂ ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವನೆ ಬೆಳೆಸಿಕೊಳ್ಳುವ ಎನ್ನುವ ಸಂದೇಶ ನಮ್ಮ ಆಶಯ ಎಂದರು.

ಸಂಸ್ಕೃತ ಭಾರತಿ ಶಿವಮೊಗ್ಗ ನಗರ ಸಂಯೋಜಕ ವಿಮಲಾ ರೇವಣಕರ್ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು ಮನು ಚೌಹಾಣ್ ಕಾರ್ಯಕ್ರಮ ನಿರೂಪಿಸಿದರು ಮೀನಾ ಸ್ವಾಗತಿಸಿದರು, ವರಲಕ್ಷ್ಮಿ ವಂದಿಸಿದರು,

ಸಂಸ್ಕೃತ ಶಿಕ್ಷಕ ಪ್ರಶಾಂತ್, ಕಾರ್ಯಕರ್ತರಾದ ಗೌತಮ, ಶ್ರೀವತ್ಸ, ದೀಪಿಕ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...