Department of Fisheries ರಾಜ್ಯದ ಒಳನಾಡು ಮೀನುಗಾರರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಜಿಲ್ಲಾ ಮೀನುಗಾರರ ಸಹಕಾರ ಸಂಘಗಳ ಕ್ಷೇಮಾಭಿವೃದ್ಧಿ ಸಮಿತಿ ಒತ್ತಾಯಿಸಿದೆ.
ಮೀನುಗಾರಿಕೆ ಇಲಾಖೆಯಿಂದ ಸೌಲಭ್ಯ ನೀಡುವಲ್ಲಿ ತಾರತಮ್ಯ ಎಸಗಲಾಗುತ್ತಿದೆ. ಇದರಿಂದ, ಒಳನಾಡು ಮೀನುಗಾರರು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ, ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದೆ.
ಕಳೆದ ಎರಡು ವರ್ಷಗಳಿಂದ ಏತ ನೀರಾವರಿ ಕೆರೆಗಳನ್ನು ವಿಲೇವೇರಿ ಮಾಡಿಲ್ಲ. ಇಲ್ಲಿ ಸಮುದ್ರ ಮೀನುಗಾರಿಕೆ ಮಾಡುತ್ತಿರುವ ಮೀನುಗಾರರಿಗೆ ಸರ್ಕಾರದ ಯೋಜನೆಯ ಶೇ 90ರಷ್ಟು ಅನುದಾನ ನೀಡಲಾಗುತ್ತಿದೆ. ಆದರೆ,
ಒಳನಾಡು ಮೀನುಗಾರರಿಗೆ ಶೇ ೧೦ ಅನುದಾನ ಸಿಗುತ್ತಿದೆ. ಕಡಲ ತೀರದ ಮೀನುಗಾರಿಕೆಗೆ ಒಬ್ಬೊಬ್ಬರಿಗೆ ಆರರಿಂದ ಹತ್ತು ಲಕ್ಷ ಡೀಸೆಲ್ ಸಬ್ಸಿಡಿ ಕೊಡುತ್ತಿದ್ದಾರೆ. ಒಳನಾಡಿನ ಮೀನುಗಾರರಿಗೆ 10 ಸಾವಿರ ಸಹಾಯಧನ ನೀಡುತ್ತಿದೆ. ಇದರಿಂದ ತಾಲ್ಲೂಕು ವ್ಯಾಪ್ತಿಯ ಉಳಿದ ಮೀನುಗಾರರು ಅನ್ಯಾಯಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.
Department of Fisheries ಮೀನುಗಾರಿಕೆ ಸಲಕರಣೆ ಕಿಟ್ ಗಳನ್ನು ಪ್ರತಿ ವರ್ಷವೂ ಮೀನುಗಾರರಿಗೆ ನೀಡಬೇಕು. ಮತ್ತು ಮೀನು ಮಾರಾಟ ಮಾಡುವ ಮಹಿಳೆಯರಿಗೆ ಮೀನು ಮಾರಾಟ ಸಾಮಾಗ್ರಿ ಸಲಕರಣೆಗಳನ್ನು ನೀಡಬೇಕು. ಮೀನುಗಾರರಿಗೆ ಮನೆಗಳ ಸೌಲಭ್ಯದ ಹಂಚಿಕೆಯಲ್ಲಿ ತಾರತಮ್ಯ ನಡೆಯುತ್ತಿದೆ, ಪ್ರತಿ ತಾಲೂಕಿಗೆ ಮನೆಗಳ ಸೌಲಭ್ಯ ದೊರೆಯುತ್ತಿಲ್ಲ.,
ಮೂಲ ಮೀನುಗಾರರು ವಿದ್ಯಾವಂತರಾಗಿರುವುದರಿಂದ ಇ- ಟೆಂಡರ್ ಬಗ್ಗೆ ತಿಳುವಳಿಕೆ ಇಲ್ಲ. ಇದರ ಲಾಭ ಕಾರ್ಪೊರೇಟ್ ಮತ್ತು ಹಣವಂತರು ಪಡೆಯುತ್ತಿದ್ದಾರೆ.