Klive Special Article ಉತ್ತು – ಬಿತ್ತಿ ಭುವಿಗೆ
ಬೆವರ ಸುರಿಸಿ ನಾಡಿಗೆ
ಅನ್ನ ನೀಡುವ ನನ್ನ ರೈತ
ಬಿಸಿಲಲ್ಲಿ ಬೆಂದು
ಮಳೆಯಲ್ಲಿ ನೆನೆದು
ಚಳಿಯಲ್ಲಿ ನಡುಗಿ ಊರ ಹಸಿವು ನೀಗಿಸುವ ನನ್ನ ರೈತ
ಬೆಳೆಗಾಗಿ ಸಾಲ – ಸೂಲ ಮಾಡಿ ಹಾಕಿದ ಬೀಜ ಜೀವ – ಜಲವಿಲ್ಲದೆ ಕಂಗೆಟ್ಟು, ಮಳೆ ಬಂದಾಗ ಸಂತೋಷಪಟ್ಟ ನನ್ನ ರೈತ
ಮಳೆ ಬಂದು ಇಳೆತುಂಬಿ
ಬೆಳೆ ಮುಳುಗಿ ಹೋದಾಗ ಯಾರಿಗೂ ಹೇಳದೆ ಸಂಕಟ ಪಟ್ಟ ನನ್ನ ರೈತ
ಕಷ್ಟಪಟ್ಟು ಹೊಟ್ಟೆ – ಬಟ್ಟೆ ಕಟ್ಟಿ ದುಡಿದು – ದುಡಿದು ಸೋತು – ಸೊರಗಿ ಹೋದ ನನ್ನ ರೈತ
ಬೆಳೆಗಾಗಿ ತಂದ ಸಾಲ ತೀರಲಿಲ್ಲ ಕೊಟ್ಟವರು ಬಿಡುತ್ತಿಲ್ಲ ಮಾನಕ್ಕಾಗಿ ಜೀವ ಪಣಕಿಟ್ಟ ನನ್ನ ರೈತ
Klive Special Article ಸಾಲ ಕೊಟ್ಟವರು ಬಿಡಲಿಲ್ಲ
ಸರ್ಕಾರದ ಮನಸ್ಸು ಕರಗಲಿಲ್ಲ ಕೊನೆಗೂ ರೈತನ ಭವಣೆ ತೀರಲಿಲ್ಲ
ಇಷ್ಟೆಲ್ಲಾ ಕಷ್ಟವ ಅನುಭವಿಸಿಯೂ ಎದೆಗುಂದದೆ ದೇಶಕ್ಕೆ ಅನ್ನವ ನೀಡುವಾತ ನನ್ನ ರೈತ
ದೇಶಕ್ಕೆ ಅನ್ನವ ನೀಡುವಾತ ನನ್ನ ರೈತ…..!
ರಚನೆ : ಧರ್ಮರಾಜ್.ಜಿ.ಸಾಗರ, ಪತ್ರಕರ್ತರು ಹಾಗೂ ಹವ್ಯಾಸಿ ಕವಿ, ಸಾಗರ