Dr. HC Manjunath ಯುವ ವಿದ್ಯಾರ್ಥಿಗಳಿಗೆ ನಮ್ಮ ಪರಂಪರೆಯ ಮೌಲ್ಯಗಳ ಅರಿವು ಮಾಡಿದಲ್ಲಿ ಅವರಿಂದ ಸಮಾಜಮುಖಿಯಾದ ಉತ್ತಮ ಕಾರ್ಯಗಳನ್ನು ನಿರೀಕ್ಷಿಸಬಹುದು ಎಂದು ಹಿರಿಯ ಪತ್ರಕರ್ತ ಡಾ.ಎಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.
ಮಲ್ಲಿ ಮಲ್ಲಿಕಾರ್ಜುನಪ್ಪ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಜ್ಞಾನ ಪದವಿಯ ನೂತನ ವಿದ್ಯಾರ್ಥಿಗಳ ‘ಪೀಠಿಕಾ’ (ಇಂಡಕ್ಷನ್) ಕಾರ್ಯಕ್ರಮದಲ್ಲಿ ‘ಭಾರತೀಯ ಪರಂಪರೆ ಹಾಗೂ ಸಂಸ್ಕೃತಿ’ ಕುರಿತಾದ ವಿಷಯವಾಗಿ ಮಾತನಾಡುತ್ತಾ ಅತಿಥಿ ಅಭ್ಯಾಗತರನ್ನು ಆದರಿಸುವುದರಿಂದ ಮೊದಲುಗೊಂಡು ಎಲ್ಲ ಸದಾಚಾರಗಳೂ ನಮ್ಮ ದೇಶದಲ್ಲಿ ಎಲ್ಲ ಮತೀಯರಲ್ಲೂ ಪರಂಪರೆಯಾಗಿ ಮುಂದುವರೆದಿದ್ದು ಕಾಲಕಾಲಕ್ಕೆ ಇದನ್ನು ಸುಧಾರಿಸಿಕೊಳ್ಳುತ್ತಾ ಮತ್ತಷ್ಟು ಸಮಾಜಮುಖಿಯಾಗಿಸುವುದೇ ಸಂಸ್ಕೃತಿಯಾಗಿದೆ, ಈ ಮೌಲ್ಯಗಳು ನಮ್ಮ ಭಾರತದ ಎಲ್ಲ ಮತೀಯರಲ್ಲೂ ರೂಢಿಯಲ್ಲಿದ್ದು ವಿಶ್ವದ ಇನ್ನಾವುದೇ ರಾಷ್ಟ್ರಗಳಲ್ಲೂ ಇದನ್ನು ನಿರೀಕ್ಷಿಸಲಾಗದು, ಇಂತಹ ಪ್ರಕೃತಿ ಪರಿಸರ ಹಾಗೂ ಸಾಮಾಜಿಕ ವ್ಯವಸ್ಥೆಗೆ ಪೂರಕವಾಗಿ ಬದುಕುವುದು ನಮ್ಮ ಪರಂಪರೆಯಾಗಿದ್ದು ಕಾಲಕಾಲದ ಅಗತ್ಯಕ್ಕೆ ಅನುಗುಣವಾಗಿ ಇದರಲ್ಲಿ ಬದಲಾವಣೆಗಳನ್ನು ಮಾಡಿ ಮತ್ತಷ್ಟು ಉತ್ತಮವಾಗಿಸುವುದು ಸಂಸ್ಕೃತಿ ಹಾಗೂ ಇದನ್ನು ಸಂವಿಧಾನಬದ್ಧವಾಗಿ ಎಲ್ಲರ ಹಿತಕ್ಕಾಗಿ ನಡೆಸುವುದು ಧರ್ಮ ಎಂದರು.
Dr. HC Manjunath ಇದರ ಅರಿವನ್ನು ವಿದ್ಯಾರ್ಥಿಗಳಲ್ಲಿ ಉಂಟುಮಾಡಿದಲ್ಲಿ ನಮ್ಮ ಮತೀಯ ಸಾಮರಸ್ಯ ಹಾಗೂ ಐಕ್ಯತೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ಡಾ.ಎಚ್ ಬಿ ಮಂಜುನಾಥ್ ಹೇಳಿದರು. ಅಧ್ಯಾಪಕಿ ಡಾ.ಅರುಣಾ ಚರಂತಿಮಠ ನಿರೂಪಿಸಿದ ಕಾರ್ಯಕ್ರಮದಲ್ಲಿ ಅಧ್ಯಾಪಕ ವರ್ಗದ ಓಂಕಾರಪ್ಪ, ವೀರೇಶ್ ಶರ್ಮಾ, ರೇಖಾ ಸಿ ಎನ್, ಸವಿತಾ, ಸಂತೋಷ್ ಮುಂತಾದವರು ಉಪಸ್ಥಿತರಿದ್ದರು.