Saturday, November 23, 2024
Saturday, November 23, 2024

78th Independence day ಕೇಸರಿ,ಬಿಳಿ,ಹಸಿರು.ಹೋರಾಟದ ನೆನಪು ನೂರು

Date:

78th Independence day ಈ ವರ್ಷ ಇಡೀ ಭಾರತ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸುತ್ತಿದೆ. ಪ್ರತಿಯೊಬ್ಬ ಭಾರತೀಯನಿಗೂ ಆಂಗ್ಲರಿ0ದ ಮುಕ್ತಿಯನ್ನು ಪಡೆದುಕೊಂಡ ಐತಿಹಾಸಿಕ ದಿನವಿದು. ಕೋಟಿ ಕೋಟಿ ದೇಶ ಪ್ರೇಮಿಗಳ ಕನಸು ನನಸಾದ ಒಂದು ನೆನಪು. ಅದೆಷ್ಟೋ ದೇಶ ಭಕ್ತರು ಮತ್ತುಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ, ಸಾಹಸ, ವೀರತೆಯನ್ನು ನೆನಪಿಸಿಕೊಳ್ಳುವ ಹಾಗೂ ಗೌರವಿಸುವ ಸಮಯ ಇದಾಗಿದೆ.
ಸ್ವಾತಂತ್ರ್ಯ ದಿನಾಚರಣೆಯು ದೇಶದ ಘತಕಾಲವನ್ನು ಆಚರಿಸುವುದು ಅಷ್ಟೇ ಅಲ್ಲದೆ, ನಾಗರಿಕರಾಗಿ ನಮ್ಮ ಕರ್ತವ್ಯವನ್ನು ನೆನಪಿಸುತ್ತದೆ. ನಾವು ಅನುಭವಿಸುತ್ತಿರುವ ಸ್ವಾತಂತ್ರ‍್ಯವು ನಮ್ಮ ದೇಶದ ಬೆಳವಣಿಗೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡುವ ಕರ್ತವ್ಯದೊಂದಿಗೆ ಬರುತ್ತದೆ ಎಂಬುದನ್ನು ನೆನಪಿಡುವ ದಿನವಾಗಿದೆ. ಪ್ರಜೆಗಳಾದ ನಾವು ನಮ್ಮ ಜೀವನದಲ್ಲಿ ಉತ್ಕೃಷ್ಟರಾಗುವ ಮೂಲಕ, ಜವಾಬ್ದಾರಿಯುತ ನಾಗರಿಕರಾಗಿ ಪ್ರಜಾಪ್ರಭುತ್ವ ಮತ್ತು ಏಕತೆಯ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ದೇಶಕ್ಕೆ ಗೌರವ ನೀಡಬೇಕು.
ಪ್ರತಿಯೊಬ್ಬ ಭಾರತೀಯನಿಗೂ ಸ್ವಾತಂತ್ರ‍್ಯ ದಿನಾಚರಣೆ ಮೌಲ್ಯಯುತವಾದದ್ದು. ಯಾಕೆಂದರೆ ಸ್ವಾತಂತ್ರ್ಯ ಹೊರಾಟಗಾರರು ನಿಸ್ವಾರ್ಥ ಸೇವೆ, ತ್ಯಾಗ ಮತ್ತು ಸಾಟಿಯಿಲ್ಲದ ಕೊಡುಗೆಗಳನ್ನು ನೀಡಿ ನಮಗೆ ಸ್ವಾತಂತ್ರ‍್ಯವನ್ನು ತಂದುಕೊಟ್ಟಿದ್ದಾರೆ. ಅತಂಹ ಮಹಾನ್ ಪುರುಷರು ಮತ್ತು ಮಹಿಳೆಯರನ್ನು ನೆನಪಿಸಿಕೊಳ್ಳಲು ಮತ್ತು ಕೃತಜ್ಞತೆಯನ್ನು ಸಲ್ಲಿಸುವ ಅವಕಾಶ ಇದಾಗಿದೆ.
ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು, ಸುಭಾಷ್ ಚಂದ್ರಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಲಾಲಾ ಲಜಪತ್ ರಾಯ್, ರಾಣಿ ಲಕ್ಷ್ಮಿಬಾಯಿ, ರಾಣಿ ಅಬ್ಬಕ್ಕ, ಕಿತ್ತೂರ್ ರಾಣಿ ಚೆನ್ನಮ್ಮ, ಬಾಲಗಂಗಾಧರ ತಿಲಕ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಸರ್ದಾರ್‌ವಲ್ಲಭಾಯ್ ಪಟೇಲ್, ಖುದಿರಾಮ್ ಬೋಸ್, ಡಾ. ರಾಜೇಂದ್ರ ಪ್ರಸಾದ್, ಭಗತ್ ಸಿಂಗ್, ಸುಖ್‌ದೇವ, ಬಿಪಿನ್ ಚಂದ್ರಪಾಲ್ ಮತ್ತು ಅನೇಕ ಪ್ರಮುಖ ನಾಯಕರುಗಳು ಸ್ವಾತಂತ್ರö್ಯಕ್ಕಾಗಿ ಹೋರಾಡಿದ್ದಾರೆ, ಅವರು ದೇಶವನ್ನು ಪ್ರೀತಿಸುತ್ತಿದ್ದರು ಮತ್ತು ಜನರ ಬಗ್ಗೆ ಕಾಳಜಿ ವಹಿಸಿದ್ದರಿಂದ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ‍್ಯ ಪಡೆಯಲು ಅವರು ಸಾಕಷ್ಟು ತ್ಯಾಗ ಮಾಡಬೇಕಾಯಿತು. ತಮ್ಮ ಸ್ವಂತ ಭೂಮಿಯಲ್ಲಿ ಗುಲಾಮರಂತೆ ದುಡಿಯಲು ಜನರನ್ನು ದಬ್ಬಾಳಿಕೆಗೆ ಒಳಪಡಿಸುವ ಮತ್ತು ಹಿಂಸಿಸುವ ದೃಶ್ಯವನ್ನು ಅವರಿಗೆ ಸಹಿಸಲಾಗಲಿಲ್ಲ. ಇದು ಸ್ವಾತಂತ್ರ‍್ಯ ಹೋರಾಟಗಾರರ ಧೈರ್ಯವನ್ನು ಒಟ್ಟುಗೂಡಿಸಲು ಮತ್ತು ಅವರು ನಂಬಿರುವ ಮತ್ತು ಅರ್ಹತೆಗಾಗಿ ನಿಲ್ಲುವಂತೆ ಉತ್ತೇಜಿಸಿತು.
78th Independence day 1600 ರಲ್ಲಿ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಬ್ರಟಿಷರು, 1611 ರಲ್ಲಿ ಸೂರತ್‌ನಲ್ಲಿ ಮೊದಲ ತಾತ್ಕಾಲಿಕ ಫ್ಯಾಕ್ಟರಿಯನ್ನು ಪ್ರಾರಂಭಿಸುತ್ತಾರೆ, 1857ರ ಸಿಪಾಯಿ ದಂಗೆ ನಡೆದ ನಂತರ ಭಾರತೀಯರಲ್ಲಿ ಸ್ವಾತಂತ್ರö್ಯದ ಕಿಚ್ಚು ಪ್ರಾರಂಭವಾಗುತ್ತದೆ. ಇದನ್ನು ಗಮನಿಸಿದ ಕಂಪನಿ ಸರಕಾರ 1858ರಲ್ಲಿ ಬ್ರಿಟನ್ ರಾಣಿ ನೇರ ಆಡಳಿತ ಪ್ರಾರಂಭಿಸಿ, ಲಾರ್ಡ್ ಕ್ಯಾನಿಂಗ್‌ನ್ನು ಭಾರತದಲ್ಲಿನ ಮೊದಲ ವೈಸರಾಯ್ ಆಗಿ ನೇಮಕ ಮಾಡಿಕೊಂಡರು. 1905ರ ಬಂಗಾಳದ ವಿಭಜನೆಯ ನಂತರ ದೇಶದಲ್ಲಿ ಮಂದಗಾಮಿಗಳು ಮತ್ತು ತೀವ್ರಗಾಮಿಗಳು ಎಂಬ ಬಣಗಳು ಹೋರಾಟವನ್ನು ಹೆಚ್ಚು ಪರಿಣಾಮಕಾರಿಯಾಗಿ ಪ್ರಾರಂಭಿಸುತ್ತದೆ. ಅಲ್ಲಿಂದ 1947 ರ ಆಗಸ್ಟ್ 15 ರಂದು ಮಹಾತ್ಮಾ ಗಾಂಧಿಯವರ ನೇತೃತ್ವದ ಸ್ವಾತಂತ್ರ‍್ಯ ಚಳವಳಿ ಮತ್ತು ಅವರ ಅಹಿಂಸಾತ್ಮಕ ಪ್ರತಿರೋಧದ ಸಂದೇಶದ ನಂತರ ಭಾರತವು ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವತಂತ್ರವಾಯಿತು. ಅಧಿಕಾರದ ಹಸ್ತಾಂತರವನ್ನು ಭಾರತದ ಕೊನೆಯ ವೈಸರಾಯ್ ಲಾರ್ಡ್ ಮೌಂಟ್ ಬ್ಯಾಟನ್ ನೋಡಿಕೊಳ್ಳುತ್ತಿದ್ದರು. ರಾಜೇಂದ್ರ ಪ್ರಸಾದ್ ಮೊದಲ ರಾಷ್ಟçಪತಿ ಹಾಗೂ ಜವಾಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನ ಮಂತ್ರಿಯಾದರು ಮತ್ತು ಆಚರಣೆಯ ಗೌರವಾರ್ಥವಾಗಿ ದೆಹಲಿಯ ಕೆಂಪು ಕೋಟೆಯ ಲಾಹೋರಿ ಗೇಟ್ ಮೇಲೆ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲಾಯಿತು.
ಪ್ರಕಾಶಮಾನ ಮತ್ತು ಬಲಿಷ್ಠ ಭಾರತಕ್ಕಾಗಿ ಕೆಲಸ ಮಾಡಲು ನಾವು ಪ್ರತಿಜ್ಞೆ ಮಾಡೋಣ.ಸ್ವಾತಂತ್ರ್ಯ ಪಡೆದು 78 ವರ್ಷನೇ ವರ್ಷಕ್ಕೆ ಕಾಲಿಟ್ಟರು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದೆ. ನಮ್ಮಲ್ಲಿ ಇರುವ ಅಗಾಧ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿನ್ನು ಹೊಂದಬಹುದಾಗಿದೆ. ಈ ಬಾರಿ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತೀಯರ ಸಾಧನೆ ತುಸು ಹೆಚ್ಚಬೇಕಿತ್ತು. ಮುಂದಿನ ದಿನಗಳಲ್ಲಿ ನಮ್ಮ ದೇಶ ಮೊದಲ ಸ್ಥಾನದಲ್ಲಿ ಬರುವ ಗುರಿ ಹೊಂದಬೇಕಿದೆ. ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ತಾಂತ್ರಿಕ, ರಾಜಕೀಯವಾಗಿ ಅಂತರರಾಷ್ಟಿçÃಯ ಮಟ್ಟದಲ್ಲಿ ದೇಶದ ಪ್ರಗತಿಯನ್ನು ಸಾಧಿಸುವ ಮಹತ್ತರ ಯೋಜನೆಯನ್ನು ಭಾರತೀಯರು ಹೊಂದವ ರೀತಿ ಯೋಚಿಸ ಬೇಕು. ನಮಗೆ ಲಭಿಸಿದ ಸ್ವಾತಂತ್ರ್ಯವನ್ನು ಸದುಪಯೋಗ ಮಾಡಿಕೊಂಡು ದೇಶದ ಅಭಿವೃದ್ಧಿಯಲ್ಲಿ ಪಾಲ್ಗೂಳ್ಳಬೇಕು. ಇದು ಸ್ವಾತಂತ್ರö್ಯ ಹೋರಾಟಗಾರರಿಗೆ ಮತ್ತು ದೇಶಕ್ಕೆ ಕೊಡುವ ಗೌರವ ಆಗಿರುತ್ತದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ “ರಾಜ್ಯೋತ್ಸವ ಕವಿಗೋಷ್ಠಿ”

Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ...

Mohare Hanumantharaya Award ಪ್ರಶಸ್ತಿ ಪುರಸ್ಕೃತ ಪತ್ರಕರ್ತ, ‘ಕ್ರಾಂತಿ ದೀಪ ‘ಮಂಜುನಾಥ್ ಅವರಿಗೆ ಸನ್ಮಾನ

Mohare Hanumantharaya Award ಪತ್ರಿಕೋದ್ಯಮದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಮೊಹರೆ ಹಣಮಂತರಾಯ...

MESCOM ನವೆಂಬರ್ 23 .ಹೊಳಲೂರು ಸುತ್ತಮುತ್ತ ವಿದ್ಯುತ್ ಸರಬರಾಜು ವ್ಯತ್ಯಯ

MESCOM ಹೊಳಲೂರು ಗ್ರಾಮದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ...

Rotary Club Shimoga ಪ್ರೌಢಾವಸ್ಥೆಯು ದೇಹದಲ್ಲಿ ಅನೇಕ ಬದಲಾವಣೆ ತರುತ್ತದೆ.ಅದನ್ನ ಗಮನಿಸಬೇಕು- ಡಾ.ಮೋಕ್ಷಾ

Rotary Club Shimoga ರೋಟರಿ ಸಂಸ್ಥೆಯು ನಿಸ್ವಾರ್ಥವಾಗಿ ವಿಶ್ವದ ಎಲ್ಲ ಭಾಗಗಳಲ್ಲಿ...