Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ,ಶಿವಮೊಗ್ಗ ಘಟಕದಿಂದ
ಮೊದಲ ಶ್ರಾವಣ ಸಂಜೆ ಕಾರ್ಯಕ್ರಮ ನಡೆಯಿತು.
ಲೇಖಕ ,ಅಂಕಣಕಾರ ಮತ್ತು ಜನಪ್ರಿಯ ಶಿಶುವೈದ್ಯ ಜನನಿ ಆಸ್ಪತ್ರೆಯ
ಡಾ.ಸಿ.ಜಿ.ರಾಘವೇಂದ್ರ ವೈಲಾಯ ಅವರ ನುಡಿದೀಪದಿಂದ ಚಾಲನೆಗೊಂಡಿತು.
ದೇಶದ ಸಮಕಾಲೀನ ರಾಜಕೀಯ ಸ್ಥಿತ್ಯಂತರ ಮತ್ತು ಹಿಂದುತ್ವಕ್ಕೆ ಒದಗಿರುವ ಸವಾಲುಗಳ ಬಗ್ಗೆ
ಪ್ರಖರವಾಗಿ ಡಾ.ವೈಲಾಯ ವಿಷಯ ಮಂಡಿಸಿದರು.
ಹಿಂದುವಾಗಿ ವರ್ತಮಾನದಲ್ಲಿ ಅನ್ಯದಾಳಿಕೋರರಿಗೆ ಹೇಗೆ ಪ್ರತಿಕ್ರಿಯಿಸಬೇಕೆಂಬುದು ಕೇಂದ್ರೀಕರಿಸಿ ಮಾತನಾಡಿದರು.
ಪರ್ಯಾಯ ಮತ್ತು ಖಡಕ್ ಪರಿಹಾರಗಳ ಬಗ್ಗೆ ಸ್ಪಷ್ಟ,ನೇರ ಮಾತುಗಳಿಂದ ಇಡೀ
ಇಂದಿನ ವಿಷಮ ಸ್ಥಿತಿಯಲ್ಲಿ ಸಿಲುಕಿರುವ ಹಿಂದುತ್ವ ಮತ್ತು ಅದರ ಉಜ್ವಲನೆ ಬಗ್ಗೆ ಸೋದಾಹರಣ ತಿಳಿಸಿದರು.
ಡಾ.ರಾಘವೇಂದ್ರ ವೈಲಾಯರು ತಮ್ಮ ಸ್ವಗೃಹ
“ಸಾಕೇತ” ದಲ್ಲಿ ವ್ಯವಸ್ಥೆಗೊಳಿಸಲು ಅವರ ಕುಟುಂಬ ವರ್ಗದವರೊಂದಿಗೆ ಆತ್ಮೀಯವಾಗಿ ಸಹಕರಿಸಿದರು.
ಶ್ರೀಮತಿ ಡೋಂಗ್ರೆ ಅವರ
ಶಾರದಾ ಸ್ತುತಿಯಿಂದ
ಕಾರ್ಯಕ್ರಮ ಆರಂಭವಾಯಿತು.
ಶ್ರೀ ಎಚ್.ಎನ್.ಸತ್ಯನಾರಾಯಣ ಅವರು ಪ್ರಸ್ತಾವನೆಮಾಡಿ ಎಲ್ಲರಿಗೂ ಸ್ವಾಗತ ಕೋರಿದರು.
ಸುದೀರ್ಘ ಎನಿಸಬಹುದಾದ ಆದರೆ ಎಲ್ಲಿಯೂ ಏಕತಾನತೆ ಕಾಡದೇ ವಿಚಾರ ವೈವಿಧ್ಯದಿಂದ ಡಾ.ವೈಲಾಯರು ಶೋತೃಗಳ ಮನ ನಾಟುವಂತೆ ತಮ್ಮದೇ ಶೈಲಿಯಲ್ಲಿ ಸಂಗತಿಗಳನ್ನ ಚರ್ಚಿಸಿದರು.
ವಿಶೇಷವೆಂದರೆ
ಭಾಗವಹಿಸಿದ್ದ ಶ್ರೋತೃಗಳೆಲ್ಲ ಅಂದಿನ ವಿಚಾರದ ಬಗ್ಗೆ ಅರ್ಥಪೂರ್ಣ ಸಂವಾದವನ್ನೂ ನಡೆಸಿದರು.
Akhila Bharatiya Sahitya Parishad ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಶಿವಮೊಗ್ಗ ಘಟಕದ ಅಧ್ಯಕ್ಷರಾದ ಡಾ.ಸುಧೀಂದ್ರ ಅವರು
ನುಡಿದೀಪದ ವಿಷಯಗಳನ್ನೇ ಹೆಕ್ಕಿ ಮಾತಾಡಿದರು.
ವರ್ತಮಾನದಲ್ಲಿ ಹಿಂದುತ್ವ,ಭಾರತೀಯತೆ
ಸಂಕಷ್ಟಕ್ಕೆ ಸಿಲುಕಿದೆ. ಆದರೆ ಇದರಿಂದ ಪಾರಾಗಲು ರಾಜಕೀಯ
ವಾತಾವರಣ ಪಲ್ಲಟ ಮತ್ತು ಸಂಕರಗೊಂಡಿದೆ.
ಯಾವುದೇ ವ್ಯಕ್ತಿ ಮತ್ತು ವಿಚಾರಗಳನ್ನ ಪಕ್ಷ ಮತ್ತು
ಜಾತಿ ಹಿನ್ನೆಲೆಯಲ್ಲಿ ತೀರ್ಮಾನಿಸಿಬಿಡುತ್ತಾರೆ.
ಇಂತಹ ಪರಿಸ್ಥಿತಿಯಲ್ಲಿ
ಸಾಮಾನ್ಯ ಕುಟುಂಬಗಳನ್ನ ಜಾಗೃತಿ ಗೊಳಿಸುವ ನಾಯಕತ್ವ ಅಥವಾ ಮಾರ್ಗದರ್ಶನ
ನೀಡುವ ” ಮುಖ್ಯಪೀಠ” ಗಳು ಮೌನವಾಗಿವೆ.
ಹೀಗಾಗಿ ಇವತ್ತಿನ ಪೋಷಕ ಬಂಧುಗಳು
” ತ್ರಿಶಂಕು” ಗಳಾಗಿದ್ದಾರೆ.
ಪರಿಹಾರ ಸೂಚಿಸುವ
ಗುರುಪೀಠಗಳು ಇನ್ನಷ್ಟೂ
ಗಂಭೀರ ಮತ್ತು ಸೂಕ್ತ ಮಾರ್ಗೋಪಾಯದಿಂದ
ಸಮಾಜಕ್ಕೆ ಬರಬೇಕಿದೆ.
ಎಂದರು.
ಸುಂದರ ಶ್ರಾವಣ ಸಂಜೆಯನ್ನ ಒಪ್ಪಮಾಡಿಕೊಟ್ಟ ಎಲ್ಲರಿಗೂ ಮತ್ತು ವಿಶೇಷವಾಗಿ ಸ್ವಗೃಹದ
ಸಭಾಭವನದಲ್ಲಿ
ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟ
ಡಾ.ರಾಘವೇಂದ್ರ ವೈಲಾಯ ದಂಪತಿಗಳಿಗೆ
ಆಭಾರ ಮನ್ನಣೆ ಮಾಡಲಾಯಿತು.
