Saturday, December 6, 2025
Saturday, December 6, 2025

Rotary Inner wheel Shivamogga ವೈಯಕ್ತಿಕ ಜನ್ಮದಿನ & ವಿವಾಹ ವಾರ್ಷಿಕೋತ್ಸವ ಆಚರಣೆ ಸಮಾಜ‌ಮುಖಿಯಾಗಲಿ- ವೀಣಾ ನರಹರಿ

Date:

Rotary Inner wheel Shivamogga ನಮ್ಮ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟು ಹಬ್ಬಗಳನ್ನು ಸಮಾಜಮುಖಿಯಾಗಿ ಆಚರಿಸಿಕೊಳ್ಳೋಣ. ಸಮಾಜದ ಋಣ ಹಾಗೂ ಹೆತ್ತವರ ಋಣವನ್ನು ತೀರಿಸಲು ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಅನಾಥಾಶ್ರಮದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳ ಜೊತೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡರೆ ಅದು ಫಲಪ್ರದವಾಗುತ್ತದೆ ಎಂದು ರೋಟರಿ ಶಿವಮೊಗ್ಗ ಪೂರ್ವ ಇನ್ನರ್ ವೀಲ್ ಸದಸ್ಯರಾದ ವೀಣಾ ನರಹರಿ ಅವರು ಅಭಿಪ್ರಾಯ ಪಟ್ಟರು.

ಅವರು ತಾಯಿ ಮನೆ ಮಕ್ಕಳ ಅನಾಥಾಶ್ರಮದಲ್ಲಿ ತಮ್ಮ 35ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆಯ ವೇಳೆ ತಾಯಿ ಮನೆ ಆಶ್ರಮಕ್ಕೆ ಐದು ಚೀಲ ಅಕ್ಕಿ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಣೆ ಮಾಡುತ್ತ ಮಾತನಾಡಿದ ಅವರು, ತಾಯಿ ಮನೆ ಆಶ್ರಮದಲ್ಲಿ ಇರುವ ಮಕ್ಕಳು ತುಂಬಾ ಪ್ರತಿಭಾವಂತರಿದ್ದು, ಸಾಂಸ್ಕೃತಿಕ ಹಾಗೂ ಕ್ರೀಡೆಗಳಲ್ಲಿ ತುಂಬಾ ಸಬಲರಾಗಿದ್ದಾರೆ. ಇಂತಹ ಮಕ್ಕಳಿಗೆ ಪ್ರೋತ್ಸಾಹ ಹಾಗೂ ಸಹಾಯ ಹಸ್ತ ಅಗತ್ಯ. ಯಾವುದೋ ಕಾರಣಕ್ಕಾಗಿ ಆಶ್ರಮ ಸೇರಿದ ಇಂತಹ ಮಕ್ಕಳು ಸಮಾಜದ ಮುಖ್ಯ ವಾಹಿನಿಯಲ್ಲಿ ಇರಬೇಕು. ಇವರಿಗೂ ಎಲ್ಲಾ ರೀತಿಯ ಸೌಲಭ್ಯಗಳು ದೊರಕುವಂತಾಗಬೇಕು ಎಂದ ಅವರು, ಇಂತಹ ಆಶ್ರಮಗಳಿಗೆ ಸಂಘ ಸಂಸ್ಥೆಗಳ ನೆರವು ಅತ್ಯಗತ್ಯ ಎಂದು ಹೇಳಿದರು.

ಇನ್ನರ್ವಿಲ್ ಶಿವಮೊಗ್ಗ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಮಾತನಾಡಿ, ಅನಾಥ ಮಕ್ಕಳಿಗೆ ನೀಡಿದ ಸಹಾಯ ಒಂದು ನಿಜವಾದ ಮನುಕುಲದ ಸೇವೆ. ಈಗಾಗಲೇ ನಮ್ಮ ಇನ್ನರ್ವೀಲ್ ಸಂಸ್ಥೆಯಿಂದ ಸಾಕಷ್ಟು ಈ ತರದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಹೇಳಿದರು.

Rotary Inner wheel Shivamogga ಇನ್ನರ್ ವಿನ್ನ ಮಾಜಿ ಅಧ್ಯಕ್ಷರಾದ ಬಿಂದು ವಿಜಯ ಕುಮಾರ್ ಮಾತನಾಡಿ, ತಾಯಿ ಮನೆ ಆಶ್ರಮದಲ್ಲಿ ಸ್ವಚ್ಛತೆ ಹಾಗೂ ಒಳ್ಳೆಯ ವ್ಯವಸ್ಥೆ ಇದ್ದು ಸುದರ್ಶನ್ ಅವರು ನಿಜವಾಗಿಯೂ ಸಹ ತುಂಬಾ ಒಳ್ಳೆಯ ಕಾರ್ಯವನ್ನು ಮಾಡಿದ್ದಾರೆ. ಎಲ್ಲಾ ಸೇವೆಗಳಿಗಿಂತ ಇಂತಹ ಮಾನವೀಯ ಸೇವೆ ಅತಿ ಮುಖ್ಯ ಎಂದು ತಾಯಿ ಮನೆ ಸುದರ್ಶನ್ ಅವರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ವೀಲ್ ಮಾಜಿ ಅಧ್ಯಕ್ಷರಾದ ಶ್ವೇತಾ ಆಶಿತ್ ಮಾತನಾಡಿ, ಮಕ್ಕಳನ್ನು ಹುರಿದುಂಬಿಸಿದರು.

ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಾಂಸ್ಕೃತಿಕ ಚಟುವಟಿಕೆಗಳು ನೆರವೇರಿದವು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...