Thursday, October 3, 2024
Thursday, October 3, 2024

Competitive Exam ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಧ್ಯಯನ ಕ್ರಮ ತಿಳಿಸಿದ ಸೌಭಾಗ್ಯ ಬೀಳಗಿಮಠ

Date:

Competitive Exam ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅಧ್ಯಯನ ಮಾಡುವ ಅಭ್ಯರ್ಥಿಗಳು ಸಮಯ ಪಾಲನೆ, ವಿಷಯಗಳ ಗ್ರಹಿಕೆ ಹಾಗೂ ಓದಿದ್ದರ ಪುನರ್ಮನ ನಿತ್ಯವೂ ಕ್ರಮ ತಪ್ಪದೇ ಮಾಡುವುದು ಅವಶ್ಯ ಎಂದು 2023-24ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ ಐಎಎಸ್ ಪರೀಕ್ಷೆಯಲ್ಲಿ 101ನೇ ರ್‍ಯಾಂಕ್ ಪಡೆದು ಉತ್ತೀರ್ಣರಾಗಿರುವ ದಾವಣಗೆರೆ ನಗರದವರೇ ಆದ ಸೌಭಾಗ್ಯ ಬೀಳಗಿ ಮಠ ಹೇಳಿದರು.

ದಾವಣಗೆರೆ ನಗರ ಕೇಂದ್ರ ಗ್ರಂಥಾಲಯದ ಸಿಲ್ವರ್ ಜುಬಿಲಿ ರೇಡಿಂಗ್ ರೂಮ್ ಆವರಣದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರದ ಆವರಣದಲ್ಲಿ ವಿದ್ಯಾರ್ಥಿಗಳಿಗಾಗಿ ಏರ್ಪಾಡು ಆಗಿದ್ದ ಸಂವಹನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ದೇಶ ವಿದೇಶಗಳಲ್ಲಿನ ವಿದ್ಯಮಾನಗಳು ಅದರಿಂದ ನಮ್ಮ ದೇಶದ ಸಾಮಾಜಿಕ ಆರ್ಥಿಕ ಔದ್ಯಮಿಕ ಆಡಳಿತಾತ್ಮಕ ನೈಸರ್ಗಿಕ ಮುಂತಾದ ಪರಿಸ್ಥಿತಿಯ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ಮಾಡುತ್ತಿರಬೇಕು, ಇದಕ್ಕಾಗಿ ಹೆಚ್ಚೆಚ್ಚು ಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಕೈಗೊಳ್ಳುವವರು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು ಹಾಗೆಯೇ ವಿಷಯ ಪ್ರಸ್ತುತಿಯಲ್ಲಾಗಲಿ ಉತ್ತರ ನೀಡುವಲ್ಲಿ ಸತ್ಯವನ್ನೇ ಹೇಳಬೇಕು ಎಂದರಲ್ಲದೆ ತಮ್ಮ ಅನುಭವಗಳನ್ನು ಹಂಚಿಕೊಂಡರು.

ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಹಿರಿಯ ಪತ್ರಕರ್ತ ಡಾ.ಎಚ್ ಬಿ ಮಂಜುನಾಥ್ ರವರು ಮಾತನಾಡಿ ನಮ್ಮ ನಾಡಿನ ನೆಲ ಜಲ ಹಾಗೂ ಆಡಳಿತಾತ್ಮಕ ವಿಚಾರವಾಗಿ ನಮಗೆ ನಮ್ಮ ನಾಡಿಗೆ ನ್ಯಾಯ ದೊರಕಬೇಕೆಂದರೆ ಉನ್ನತ ಅಧಿಕಾರಿಗಳು ಮೂಲತಃ ಅಪ್ಪಟ ಕನ್ನಡಿಗರೇ ಆಗಿರಬೇಕು, ಈ ನಿಟ್ಟಿನಲ್ಲಿ ನಮ್ಮ ರಾಜ್ಯದ ವಿದ್ಯಾರ್ಥಿಗಳು ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಕೈಕೊಂಡು ಉನ್ನತ ಹುದ್ದೆಗಳನ್ನು ಪಡೆಯಬೇಕಿದೆ ಎಂದರಲ್ಲದೆ ಓದುವ ಹವ್ಯಾಸ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಂಡಲ್ಲಿ ಐಎಎಸ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳು ಕಷ್ಟಕರವಲ್ಲ ಎಂದರಲ್ಲದೆ ದಾವಣಗೆರೆ ಗ್ರಂಥಾಲಯ ವ್ಯವಸ್ಥೆ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಮಾಡುವಲ್ಲಿ ತಾವು ಪಟ್ಟ ಪರಿಶ್ರಮವನ್ನು ವಿವರಿಸಿದರು.

Competitive Exam ನಗರ ಕೇಂದ್ರ ಗ್ರಂಥಾಲಯ ಉಪನಿರ್ದೇಶಕರಾದ ಪಿ ಆರ್ ತಿಪ್ಪೇಸ್ವಾಮಿಯವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತಾ ಸ್ಪರ್ಧಾತ್ಮಕ ಪರೀಕ್ಷಾ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವ ಎಲ್ಲ ಬೇಡಿಕೆಗಳನ್ನು ಸ್ವೀಕರಿಸಿ ಅದಕ್ಕೆ ಸ್ಪಂದಿಸಲು ಪ್ರಯತ್ನಿಸುವುದಾಗಿ ಹೇಳಿದರಲ್ಲದೇ ಇದಕ್ಕೆ ಪೂರಕವಾದ ಪುಸ್ತಕ ಹಾಗೂ ಗ್ರಂಥಗಳ ಬಗೆಗೆ ವಿದ್ಯಾರ್ಥಿಗಳಿಂದ ಹಾಗೂ ಸೌಭಾಗ್ಯ ಬೀಳಗಿ ಮಠ ರವರಿಂದ ಸೂಚಿತವಾಗುವ ಪುಸ್ತಕ ಹಾಗೂ ಗ್ರಂಥಗಳ ಪೂರೈಕೆ ಮಾಡಲು ಪ್ರಯತ್ನಿಸುವುದಾಗಿ ಹೇಳಿದರು.

ಸೌಭಾಗ್ಯ ಬೀಳಗಿ ಮಠ ರವರ ತಂದೆಯವರು ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯರು ಆದ ಶರಣಯ್ಯ ಬೀಳಗಿ ಮಠರವರು, ಸಿಬ್ಬಂದಿಗಳಾದ ಮಹಾಸ್ವಾಮೀ ಬಿ ಇ, ಗೋಪಾಲ್ ಕೆ, ಸಂಗಣ್ಣ ಬೆಳಗಲ್ಲ, ಮಂಜುನಾಥ ಎಸ್ ಬಗರಿ, ಪರಶುರಾಮಪ್ಪ ಎಮ್ ಆರ್ ಮುಂತಾದವರು ಉಪಸ್ಥಿತರಿದ್ದರು. ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನ ವಿದ್ಯಾರ್ಥಿಗಳು ತತ್ಸಂಬಂಧಿ ಪ್ರಶ್ನೆಗಳನ್ನು ಕೇಳಿ ಸೌಭಾಗ್ಯ ಬೀಳಗಿ ಮಠ ರವರಿಂದ ಉತ್ತರಗಳನ್ನು ಪಡೆದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Navaratri Festival ಬಂಗಾರಮಕ್ಕಿಯಲ್ಲಿ ಶರನ್ನವರಾತ್ರಿ ಉತ್ಸವ

Navaratri Festival ಬಂಗಾರಮಕ್ಕಿಯ ಹೇಮಪುರ ಮಹಾಪೀಠದ ಶ್ರೀ ವಿಶ್ವ ವೀರಾಂಜನೇಯ...

Klive Special Article ನವರಾತ್ರಿಯ ಮೊದಲ ದಿನ. ಶೈಲಪುತ್ರಿ ದೇವಿರೂಪ ಆರಾಧನೆ

ಲೇ; ಎನ್.ಜಯಭೀಮ ಜೊಯಿಸ್. ಶಿವಮೊಗ್ಗ Navaratri Festival ವಂದೇ ವಾಂಛಿತ ಲಾಭಾಯಚಂದ್ರಾರ್ಧಕೃತಶೇಖರಂ/ವೃಷಾರೂಢಂ...

Gandhi Jayanthi ನಗರದ ರೋವರ್ಸ್ ಕ್ಲಬ್ ನಲ್ಲಿ ಗಾಂಧಿ ಜಯಂತಿ ಆಚರಣೆ

Gandhi Jayanthi ನಗರದ ರೋವರ್ಸ್ ಕ್ಲಬ್ ಆವರಣದಲ್ಲಿ ಮಹಾತ್ಮ ಗಾಂಧೀಜಿಯವರ...

B.Y.Raghavendra ಸಾರ್ವಜನಿಕ ಉದ್ಯಮಗಳು & ಗೃಹ ಇಲಾಖೆ ಸಂಬಂಧಿತ ಸ್ಥಾಯಿ ಸಮಿತಿಗೆ ನೇಮಕವಾಗಿರುವ ಸಂಸದ ರಾಘವೇಂದ್ರರಿಗೆ ಅಭಿನಂದನೆ

B.Y.Raghavendra ಕೇಂದ್ರ ಸರ್ಕಾರದ ಸಂಸದೀಯ ಸಂಸ್ಥೆಗಳಾದ ಸಾರ್ವಜನಿಕ ಉದ್ಯಮಗಳ ಸಮಿತಿ,...