Krishna Bhairegowda ಬಿಜೆಪಿ-ಜೆಡಿಎಸ್ ಅಧಿಕಾರದ ದಾಹದಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣೇಬೈರೇಗೌಡ ದೂರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು,ರಾಜಕೀಯ ಮೇಲಾಟ ಮಾಡುವ ಪ್ರಯತ್ನ ನಡೆದಿದೆ. ಮಳೆಯಿಂದ ಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ.
ಅವರ ಬಗ್ಗೆ ಕಾಳಜಿ ಇಲ್ಲ. 135 ಜನರನ್ನ ಆಯ್ಕೆಯಾದ ಸರ್ಕಾರವನ್ನ ಕೆಡವಲು ಯತ್ನಿಸಲಾಗುತ್ತದೆ. ಅಧಿಕಾರಕ್ಕಾಗಿ ಹಂಬಲಿಸುತ್ತಿದ್ದಾರೆ ಎಂದು ದೂರಿದರು.
ಈಗ ರಾಜ್ಯಪಾಲರನ್ನ ದಾಳವನ್ನಾಗಿ ಮಾಡಿಕೊಳ್ಳಲಾಗಿದೆ. ವಾಲ್ಮೀಕಿ ಹಗರಣದಲ್ಲಿ ಕಲ್ಲೇಶ ಎಂಬ ಅಧಿಕಾರಿಗೆ ಸಿಎಂ ವಿರುದ್ಧ ಹೇಳಿಕೆಕೊಟ್ಟರೆ ಇಡಿ ಬಿಡುತ್ತದೆ ಎಂದು ಬೆದರಿಸಿದ ಉದಹರಣೆಯಿದೆ. ಇದೇ ರೀತಿ ರಾಜ್ಯಪಾಲರ ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ದೂರಿದರು.
ಜಾರ್ಖಂಡ್, ಪ.ಬಂಗಾಳ, ಪಂಜಾಬ್ ಕೇರಳ, ತಮಿಳುನಾಡು ಮೊದಲಾದ ಕಡೆಗಳಲ್ಲಿ ರಾಜ್ಯಪಾರನ್ನ ಬಳಸಿಕೊಂಡು ಜನಾದೇಶದ ವಿರುದ್ಧ ಹೋದ ಪ್ರಕರಣ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಇದು ಕರ್ನಾಟಕದಲ್ಲಿ ಮುಂದುವರೆದಿದೆ. ನಾವು ಬಗ್ಗೊಲ್ಲ. ..ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ. ಬೀದಿಗಳಿದು ಹೋರಾಟ ಮಾಡುತೇವೆ.
ಲೋಕಾಯುಕ್ತರ ಮುಂದೆ ಈ ಹಿಂದೆ ಸಚಿವರಾಗಿದ್ದ ಶಶಿಕಲಾ ಜೊಲ್ಲೆ, ಮುರಗೇಶ್ ನಿರಾಣಿ, ಜನಾರ್ಧನ ರೆಡ್ಡಿ ಅವರ ಆದಾಯಕ್ಕಿಂತ ಶೇ.25% ರಷ್ಟು ಹೆಚ್ಚಿಗೆ ಆರೋಪವಿದೆ. ಇವರ ವಿರುದ್ಧ ವಿಚಾರಣೆಗೆ ಅನುಮತಿ ಬೇಕೆಂದು ಲೋಕಾಯುಕ್ತರು 2021ರಲ್ಲಿ ರಾಜ್ಯಪಾರ ಮುಂದೆಯಿದೆ.
ಇಡಿ ಬಂದು ಸಿಎಂ ವಿರುದ್ಧ ವಿಚಾರಣೆ ಕೇಳಿದ ತಕ್ಷಣ ರಾಜ್ಯಪಾಲರು ವಿಚಾರಣೆಗೆ ಮುಂದಾಗುತ್ತಾರೆ. ಪ್ರಜಾಪ್ರಭುತ್ವದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನ ಉರುಳಿಸಲು ವಿಪಕ್ಷಗಳು ರಾಜ್ಯಪಾಲರನ್ನ ದಾಳವಾಗಿ ಮಾಡಿಕೊಳ್ಳಲು ಮುಂದಾಗಿದ್ದಾರೆ. ಎಂದು ದೂರಿದರು.
Krishna Bhairegowda ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಲ್ಲಿ ಎಲ್ಲಾಕಡೆ ಇದೇ ಪರಿಸ್ಥಿತಿ ಇದೆ. ಗವರ್ನರ್ ಕಚೇರಿಯನ್ನ ರಾಜಕೀಯ ಶಕ್ತಿಯನ್ನಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು. ಶಶಿಕಲಾ ಜೊಲ್ಲೆ ನಿರಾಣಿ ಮತ್ತು ಜನಾರ್ಧನ್ ರೆಡ್ಡಿ ವಿಚಾರದಲ್ಲಿ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಆಕ್ಷೇಪಿಸಿದರು.
ಕುಮಾರಸ್ವಾಮಿ ಅವರು 10 ತಿಂಗಳಲ್ಲಿ ಸರ್ಕಾರ ಉರುಳುತ್ತದೆ ಎಂದು ಹೇಳುತ್ತಿದ್ದಾರೆ. ಇವರಿಗೆ ಮತ್ತು ವಿಜೇಂದ್ರರಿಗೆ ಅಧಿಕಾರ ಬೇಕಿದೆ. ಮಳೆಯಿಂದ ಜನ ತೊಂದರೆಯಲ್ಲಿದ್ದಾರೆ.
ಅವರ ಬಗ್ಗೆ ಈ ನಾಯಕರಿಗೆ ಗಮನವಿಲ್ಲ. ಆದರೆ ಸರ್ಕಾರ ಬೀಳಿಸುವ ಯತ್ನದಲ್ಲಿದ್ದಾರೆ ಎಂದು ಲೇವಡಿ ಮಾಡಿದರು.