Tuesday, November 26, 2024
Tuesday, November 26, 2024

Koppal News ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯ ಪ್ರಸ್ತಾವಿತ ವಿಸ್ತರಣೆ ಬಗ್ಗೆ ಸಾರ್ವಜನಿಕರೊಂದಿಗೆ ಸಂವಾದ-ಸಮ್ಮತಿ ಸಭೆ

Date:

Koppal News ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯು ಕೊಪ್ಪಳದ ಬೇವಿನಹಳ್ಳಿ ಗ್ರಾಮದ ಹತ್ತಿರ ಸುಮಾರು ೩೦ ವರ್ಷಗಳ ಹಿಂದೆ ಬೀಡು ಕಬ್ಬಿಣ ಮತ್ತು ಫೌಂಡ್ರಿ ಘಟಕಗಳನ್ನು ಸ್ಥಾಪಿಸಿದ್ದು. ಶ್ರೇಷ್ಠ ಮಟ್ಟದ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೀಡು ಕಬ್ಬಿಣ ಮತ್ತು ಕ್ಯಾಸ್ಟಿಂಗ್ಸ್ಗಳ ಉತ್ಪಾದನೆಯಲ್ಲಿ ಮುಂಚೂಣಿ ಯಲ್ಲಿದೆ. ಈ ಕಾರ್ಖಾನೆಯು ಉತ್ಪಾದನೆಯನ್ನು ಮಾಡುವುದರ ಜೊತೆಗೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದು, ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಹಾಗೂ ಸಮುದಾಯದ ಅಭಿವೃದ್ಧಿಗಾಗಿ ಅನೇಕ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದು ಈ ವಲಯದಲ್ಲಿ ಅತ್ಯುತ್ತಮ ಸಂಸ್ಥೆಯಾಗಿ ಹೊರಹೊಮ್ಮಿದೆ.

ಗ್ರಾಹಕರ ಅತ್ಯಗತ್ಯ ಬೇಡಿಕೆಗಳನ್ನು ಪೂರೈಸಲು ಈ ಕಾರ್ಖಾನೆಯು ಪ್ರಸ್ತುತ ಇರುವ ಬೀಡು ಕಬ್ಬಿಣ ಮತ್ತು ಫೌಂಡ್ರಿಯ ಪ್ರಸ್ತಾವಿತ ವಿಸ್ತರಣೆ ಹಾಗೂ ಹೊಸ ಯೋಜನೆಗಳ ಅನುಮತಿಗಾಗಿ ದಿನಾಂಕ ೦೬-೦೮-೨೦೨೪ ರಂದು ಯೋಜನೆಯ ಪ್ರಸ್ತಾವಿತ ಪ್ರದೇಶದಲ್ಲಿ ಪರಿಸರ ಸಾರ್ವಜನಿಕ ಆಲಿಕೆ ಸಭೆಯನ್ನು ಕರೆಯಲಾಗಿತ್ತು.

Koppal News ಈ ಸಭೆಗೆ ಕೊಪ್ಪಳದ ಜಿಲ್ಲಾಡಳಿತದ ವತಿಯಿಂದ ಶ್ರೀ ಸಿದ್ದರಾಮೇಶ್ವರ, ಅಪರ ಜಿಲ್ಲಾಧಿಕಾರಿಗಳು ಹಾಗೂ ಅಪರ ಜಿಲ್ಲಾ ದಂಡಾಧಿಕಾರಿಗಳು, ಕೊಪ್ಪಳ ಜಿಲ್ಲೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯನಗರದ ವಲಯದ ಹಿರಿಯ ಪರಿಸರ ಅಧಿಕಾರಿಗಳಾದ ಶ್ರೀ ಬಿ. ಎಸ್. ಮುರಳೀಧರ್, ಕೊಪ್ಪಳದ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳಾದ ಶ್ರೀ. ವೈ.ಎಸ್. ಹರಿಶಂಕರ್, ಕಾರ್ಖಾನೆಯ ಉನ್ನತ ಅಧಿಕಾರಿಗಳು, ಜಿಲ್ಲಾಡಳಿತ ಸಿಬ್ಬಂದಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಪ್ರತಿನಿಧಿಗಳು, ಸ್ಥಳಿಯ ಗ್ರಾಮಗಳ ವಿವಿಧ ನಾಗರೀಕರು, ಸಾರ್ವಜನಿಕರು ಹಾಜರಿದ್ದರು. ಶ್ರೀ ವೈ.ಎಸ್. ಹರಿಶಂಕರ್ ಇವರು ಪ್ರಸ್ತಾವಿಕ ಭಾಷಣ ಮಾಡಿ ಕಾರ್ಖಾನೆ ವಿಸ್ತರಣೆಯ ಕುರಿತು ವಿವರಿಸಿದರು. ಕಾರ್ಖಾನೆಯ ಪರಿಸರ ಅಧಿಕಾರಿಗಳಾದ ಶ್ರೀ ಮಹಮದ್ ಅಜೀಜ್ ವiತ್ತು ತಾಂತ್ರಿಕ ಅಧಿಕಾರಿಯಾದ ಶ್ರೀಕಾಂತ್ ಇವರುಗಳು ಯೋಜಿತ ವಿಸ್ತರಣೆಯ ಕುರಿತು ಸಭೆಗೆ ಮಾಹಿತಿಯನ್ನು ಅಂಕಿ-ಅಂಶಗಳ ಸಹಿತ ವಿವರಿಸಿದರು.

ಯೋಜನೆಯ ವಿಸ್ತರಣೆಯ ಮಾಹಿತಿಯನ್ನು ತಿಳಿಸಿದ ನಂತರ ಪರಿಸರ ಅಧಿಕಾರಿಗಳು ಸಾರ್ವಜನಿಕರಿಂದ ಮನವಿ ಮತ್ತು ಸಲಹೆಗಳನ್ನು ನೀಡಲು ಅವಕಾಶ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಹಾಜರಿದ್ದ ಅನೇಕ ಸಂಘ-ಸAಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮಾತನಾಡಿ ಉದ್ದೇಶಿತ ಯೋಜನೆಗಳಿಗೆ ತಮ್ಮ ಸಹಮತಿ ಇದೆ, ಕಾರಣ ಈ ಯೋಜನೆಗಳು ಅನುಸ್ಠಾನಗೊಂಡಲ್ಲಿ ಈ ಭಾಗದಲ್ಲಿ ಉದ್ಯೋಗಗಳು ಸೃಷ್ಠಿಯಾಗುತ್ತವೆ, ಯುವಕರಿಗೆ ಉದ್ಯೋಗಗಳು ಸಿಗುತ್ತವೆ, ಕಾರ್ಖಾನೆಯ ಸಮುದಾಯದ ಅಭಿವೃದ್ಧಿಗಾಗಿ ಮಾಡುವ ಕೆಲಸಗಳಿಂದ ಜನರ ಆರ್ಥಿಕ ಮಟ್ಟ ಹೆಚ್ಚುತ್ತದೆ, ಕಾರಣ ನಮ್ಮ ಸಮ್ಮತಿ ಇದೆ ಎಂದು ತಿಳಿಸಿದರು. ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಕೊಪ್ಪಳ ಜಿಲ್ಲೆಯಿಂದ ಹೆಚ್ಚಿನ ಅನೂಕೂಲವಾಗಲಿದೆ, ಕೊಪ್ಪಳ ಜಿಲ್ಲೆಯ ಸರ್ವಾಂಗೀಣಾ ಅಭಿವೃದ್ಧಿಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.

ಕಾಳಿದಾಸ ಶಿಕ್ಷಣ ಸಂಸ್ಥೆ ಕೊಪ್ಪಳ, ಶ್ರೀ ಗ್ರಾಮದೇವತೆ ಸೇವಾ ಸಮಿತಿ, ಹಳೆಕನಕಾಪುರ, ಬಹುಗ್ರಾಮ ಪಂಚಾಯಿತಿಗಳ ತ್ಯಾಜ್ಯ ಸಂಸ್ಕರಣಾ ಘಟಕ ಜಂಟಿ ಸಮಿತಿ, ನೀರು ಬಳಕೆದಾರರ ಸಂಘ, ಹುಲಿಗಿ, ಪರಿಸರ ಹಿತರಕ್ಷಣಾ ಸಂಸ್ಥೆಯಾದ ವನಲೋಕ, ಬೆಂಗಳೂರು, ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಕೊಪ್ಪಳ, ಮಾರಿಕಾಂಬ ಗ್ರಾಮೀಣ ಅಭಿವೃದ್ಧಿ ಮತ್ತು ಮಹಿಳಾ ಶಕ್ತಿ ಸಂಘ, ಹೊಸಪೇಟೆ ಕರ್ನಾಟಕ ರಕ್ಷಣಾ ವೇದಿಕೆ, ಪ್ರಣತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಬಣವಿಕಲ್ಲು, ದೀಪಾ ಸಂಜೀವಿನಿ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ, ವಿಜಯನಗರ ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ಧ್ರವ ಪರಿಸರ ಮಾಲಿನ್ಯ ನಿಯಂತ್ರಣ ಸಂರಕ್ಷಣಾ ಸಂಸ್ಥೆ, ಕೊಪ್ಪಳ ಶ್ರೀ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿ, ಮುಂಡರಗಿ ಶ್ರೀ ಮಾರುತೇಶ್ವರ ಸೇವಾ ಸಮಿತಿ, ಬೇವಿನಹಳ್ಳಿ ಹಾಗೂ ಹಿಟ್ನಾಳ್ ಗ್ರಾಮ ಪಂಚಾಯತಿಗಳು ಇತ್ಯಾದಿ ಅನೇಕ ಸಂಘ-ಸಂಸ್ಥೆಗಳು ಸಾರ್ವಜನಿಕರು ಪ್ರಸ್ತಾವಿತ ಯೋಜನೆಗಳಿಗೆ ಸಮ್ಮತಿ ಸೂಚಿಸಿ ಮನವಿ ಪತ್ರಗಳನ್ನು ಈ ಸಭೆಯಲ್ಲಿ ನೀಡಿದರು ಹಾಗೂ ಕೆಲವರು ಮಾತನಾಡಿದರು. ಹಾಜರಿದ್ದ ಇನ್ನೂ ಕೆಲವು ಜನ ಹ¯ವಾರು ಬೇಡಿಕೆಗಳಿಗಾಗಿ ಆಗ್ರಹಿಸಿದರು. ಒಟ್ಟಾರೆ ಆಯೋಜಿಸಿದ ಸಭೆಯು ಸಂಪನ್ನವಾಗಿ ಜರುಗಿತು.

ಈ ಕಾರ್ಯಕ್ರಮವನ್ನು ಕಂಪನಿಯ ಮಾನವ ಸಂಪನ್ಮೂಲ, ಆಡಳಿತ, ಇಹೆಚ್‌ಎಸ್ ವಿಭಾಗದ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಶ್ರೀ ಪಿ ನಾರಾಯಣರವರು ಅಚ್ಚು ಕಟ್ಟಾಗಿ ರೂಪಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

COSMO Club Shivamogga ಅಧ್ಯಯನಶೀಲ ತತ್ವದತ್ತ ಮುನ್ನಡೆದು ಸಮರ್ಥ ಸಮಾಜಕ್ಕೆ ದೀಪವಾಗೋಣ- ರಂಜಿನಿ ದತ್ತಾತ್ರಿ

COSMO Club Shivamogga ನಮ್ಮ ನಿಮ್ಮ ನಗುವಿಗೊಂದು ದೀಪ, ಸಂತಸದ ಬೆಳಕಿಗೊಂದು...

MESCOM ನವೆಂಬರ್ 27. ಎಂ.ಆರ್.ಎಸ್. ನಲ್ಲಿ ತ್ರೈಮಾಸಿಕ ನಿರ್ವಹಣೆ. ಶಿವಮೊಗ್ಗದ ಬಹುಪಾಲು ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ

MESCOM ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ...