Indian Army ಸೊರಬ ತಾಲೂಕಿನ ಹೆಸರಿ ಗ್ರಾಮದ ಶಿವಮೂರ್ತಿ ಅವರು ಭಾರತೀಯ ಸೇನೆಯಲ್ಲಿ ಸೈನಿಕನಾಗಿ ೨೨ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಭಾನುವಾರ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಇಡಿ ಗ್ರಾಮದ ಜನರೆಲ್ಲಾ ಸೇರಿ ಹೂವುಗಳನ್ನು ಎರಚಿ, ಪಟಾಕಿ ಸಿಡಿಸಿ, ಡೊಳ್ಳಿನ ನೃತ್ಯದೊಂದಿಗೆ ಸ್ವಾಗತಿಸಿ, ಸಂಭ್ರಮಿಸಿದರು.
ಸೈನಿಕ ಶಿವಮೂರ್ತಿ ಅವರು ಜಮ್ಮು ಕಾಶ್ಮೀರ, ದೇಹಲಿ, ಪಶ್ಚಿಮ ಬಂಗಾಲ, ಪಂಜಾಬ್, ಗುಜರಾಜ್ ಹಾಗೂ ಇತರೆ ಸ್ಥಳಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತರಾಗಿ ಹುಟ್ಟೂರಿಗೆ ಆಗಮಿಸಿದರು.
ಮಹಿಳೆಯರು ಅವರಿಗೆ ಆರತಿ ಬೆಳಗುವ ಮೂಲಕ ಸ್ವಾಗತಿಸಿದರು. ಗ್ರಾಮಸ್ಥರು ಮೆರವಣಿಗೆಯಲ್ಲಿ ಕರೆತಂದು ಸನ್ಮಾನಿದರು. ಅನೇಕ ಮುಖಂಡರು ವೈಯಕ್ತಿಕವಾಗಿ ಸನ್ಮಾನಿಸಿ, ಹೂಗುಚ್ಚ ನೀಡಿದರು.
ಯುವಕರು ಶಿವಮೂರ್ತಿ ಅವರಿಂದ ಕೇಕ್ ಕತ್ತರಿಸಿ, ಪರಸ್ಪರ ಹಂಚಿ ಸವಿದು ಸಂಭ್ರಮ ಪಟ್ಟರು.
ನಂತರ ಮಾತನಾಡಿದ ಶಿವಮೂರ್ತಿ, ಸೈನಿಕನಾಗಿ ಸೇವೆ ಸಲ್ಲಿಸಿದ ಅನುಭವಗಳು ಸಾಕಷ್ಟಿವೆ.
ಗ್ರಾಮ ಸೇರಿದಂತೆ ಹಲವು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ದೇಶಾಭಿಮಾನ ಬೆಳೆಸಿಕೊಳ್ಳಲು, ಶಿಸ್ತು ಮೈಗೂಡಿಸಿಕೊಳ್ಳಲು ಹಾಗೂ ಸೈನ್ಯಕ್ಕೆ ಸೇರಲು ಮಾರ್ಗದರ್ಶನ ನೀಡಲಾಗುವುದು ಎಂದರು.
Indian Army ಇಂಡುವಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಹೆಸರಿ, ಅಧ್ಯಕ್ಷ ವೇದಮೂರ್ತಿ ಚಿಕ್ಕಸವಿ ಮಾತನಾಡಿದರು.
ಪತ್ನಿ ಅನುಪಮಾ ಶಿವಮೂರ್ತಿ, ಮಕ್ಕಳಾದ ಮೌಲ್ಯ, ವೃತಿಕ್, ತಾಯಿ ನಿಂಗಮ್ಮ, ಗ್ರಾಮ ಸಮಿತಿ ಅಧ್ಯಕ್ಷ ರಮೇಶ್, ಉದ್ಯಮಿ ವಿಜಯ್ ಹೆಸರಿ, ರಾಜಪ್ಪ,ಇಂಡುವಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಉಮೇಶ್, ನಿಜಲಿಂಗಪ್ಪ, ರವೀಂದ್ರ, ಸುಬ್ರಹ್ಮಣ್ಯ, ಬಸವರಾಜ್, ಶಿವಾನಂದ್, ಧಯಾನಂದಸ್ವಾಮಿ, ಹಿರಿಯಪ್ಪ ಸೇರಿದಂತೆ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.