Radio Shivamogga ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ 90.8 ಎಫ್ ಎಮ್ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಆರ್ ಜೆ ಹಂಟ್ ನಡೆಸಿತು. ಇದರಲ್ಲಿ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪರಿಸರ ಕೇಂದ್ರದ ಪದಾಧಿಕಾರಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಎ.ಎಸ್. ಚಂದ್ರಶೇಖರ್ ರೇಡಿಯೋ ಮಹತ್ವ, ವಿದ್ಯಾರ್ಥಿಗಳು ಇದನ್ನು ಸದಾವಕಾಶವಾಗಿಸಿಕೊಳ್ಳುವ ಬಗೆಯನ್ನು ವಿಸ್ತೃತವಾಗಿ ತಿಳಿಸಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ರಾಜ್ಯ ಉಪಾಧ್ಯಕ್ಷೆ ಭಾರತೀ ಚಂದ್ರಶೇಖರ್ ರೇಡಿಯೋದ ಜೊತೆಗಿನ ತಮ್ಮ ನಂಟಿನ ಬಗ್ಗೆ ತಿಳಿಸಿ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಮಾತನಾಡಿ, ರೇಡಿಯೋ ಶಿವಮೊಗ್ಗದ ಉತ್ಸಾಹಿ ತಂಡ ಕಾಲೇಜಿಗೆ ಬಂದಿರುವುದು ಸಂತಸ ತಂದಿದೆ. ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ ದೊರೆಯಲಿದೆ. ದೊರೆತ ಅವಕಾಶವನ್ನು ಉಪಯೋಗಿಸಿಕೊಂಡು, ಬದುಕಿನಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ಶುಭಾಶಿಸಿದರು.
ನಿಲಯ ನಿರ್ದೇಶಕ ಜಿ.ಎಲ್. ಜನಾರ್ದನ್, ಬಾನುಲಿ ಸಂಯೋಜಕ ಗುರುಪ್ರಸಾದ್ ಬಾಲಕೃಷ್ಣ, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ಪರಿಸರ ಅಧ್ಯಯನ ಕೇಂದ್ರದ ಸಂಯೋಜಕ ದಿನೇಶ್ ಹೊಸನಗರ, ಆರ್ ಜೆ ಗಳಾದ ಶ್ರೀಧರ್, ಮಹಾಲಕ್ಷ್ಮೀ, ಶ್ವೇತಾ, ಅರ್ಪಿತಾ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
Radio Shivamogga ಉಪನ್ಯಾಸಕ ಪರಿಸರ ನಾಗರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ಸಹಕರಿಸಿದರು.
ಈ ಆಡಿಷನ್ ಆಯೋಜನೆಯಲ್ಲಿ ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರವು ಸಹಭಾಗಿಗಳಾಗಿದ್ದವು.