Madhu Bangarrappa ವಾಜಪೇಯಿ ಲೇಔಟ್ ನ ಹಗರಣ, ಜಂಕ್ಷನ್‌ನಲ್ಲಿ ಯಡಿಯೂರಪ್ಪ ಅರಣ್ಯ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ, ನಿದಿಗೆ ಬಳಿ ಗಾರ್ಮೆಂಟ್‌ನ ಜಾಗಕ್ಕೆ ೧೯೨ ಎ ಸೆಕ್ಷನ್ ಹಾಕಿ ರೈತರ ಭೂಮಿಯನ್ನು ಬಲವಂತವಾಗಿ ಒಕ್ಜಲೆಬ್ಬಿಸಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪಗಳಿವೆ. ಇವುಗಳ ತನಿಖೆಗೂ ರಾಜ್ಯ ಸರಕಾರ ಮುಂದಾಗಲಿದೆ.
ಭ್ರಷ್ಠಾಚಾರದಲ್ಲಿ ಬಿಜೆಪಿಯ ಅಧ್ಯಕ್ಷರೇ ನಂಬರ್ ಒನ್ ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
Madhu Bangarrappa ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ಹಗರಣದ ವಿಚಾರದಲ್ಲಿ ಪಾದಯತ್ರೆಗೆ ವಿಪಕ್ಷಗಳು ಮುಂದಾಗಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲೂ ಹಗರಣವಾಗಿದ್ದಕ್ಕೆ ತಪ್ಪಿತಸ್ಥg ವಿರುದ್ಧ ಕ್ರಮ ಕೈಗೊಂಡರೂ ವಿಪಕ್ಷಗಳು ಆರೋಪ ಮಾಡಲು ಮುಂದಾಗಿವೆ. ಬಿ.ವೈ ವಿಜೇಂದ್ರ ಕೇವಲ ಸಿಎಂ ವಿರುದ್ಧ ಮಾತ್ರವಲ್ಲ, ನನ್ನ ವಿರುದ್ಧವೂ ಹಗುರವಾಗಿ ಮಾತನಾಡಿದ್ದಾರೆ. ಆದರೆ ಯತ್ನಾಳ್ ಎತ್ತಿರುವ ವಿಷಯಗಳ ಬಗ್ಗೆ ಅವರು ಮಾತನಾಡದೆ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ನೀತಿಗೆಟ್ಟ ವಿಚಾರದ ಬಗ್ಗೆ ವಿಜೇಂದ್ರ ಮಾತನಾಡುತ್ತಾರೆ. ಅವರ ವಿರುದ್ಧವೇ ಭ್ರಷ್ಠಾಚಾರ, ದೌರ್ಜನ್ಯದ ಆರೋಪವಿದೆ. ಆದರೆ ಸಿದ್ದರಾಮಯ್ಯನವರ ಮತ್ತು ಡಿಕೆಶಿ ವಿರುದ್ಧ ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಾರೆ. ಡಿಕೆಶಿಯನ್ನು ಜೈಲಿಗೆ ಹಾಕಿಸುವಲ್ಲಿ ಯಡಿಯೂರಪ್ಪನವರ ಪಾಲು ಇದೆ ಎಂದು ಗುಡುಗಿದರು.