Linganamakki Dam ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರ ಹರಿಸಲಾಗುತ್ತಿದೆ.
ಶನಿವಾರ ಬೆಳಿಗ್ಗೆ ೧೦ ಗಂಟೆಯ ಮಾಹಿತಿಯಂತೆ ಜಲಾಶಯದಿಂದ ಸುಮಾರು ೫೮ ಸಾವಿರ ಕ್ಯೂಸೆಕ್ ನೀರನ್ನು, ೧೧ ಕ್ರಸ್ಟ್ ಗೇಟ್ ಗಳ ಮೂಲಕ ಹೊರ ಹರಿಸಲಾಗುತ್ತಿದೆ ಡ್ಯಾಂನ ಒಳಹರಿವು ೬೧,೮೩೫ ಕ್ಯೂಸೆಕ್ ಇದೆ. ಡ್ಯಾಂ ನೀರಿನ ಮಟ್ಟವನ್ನು ೧೮೧೫. ೩೫ (ಗರಿಷ್ಠ ಮಟ್ಟ : ೧೮೧೯) ಅಡಿಗೆ ಕಾಯ್ದುಕೊಳ್ಳಲಾಗಿದೆ.
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಮುಂದುವರಿದಿರುವುದರಿಂದ ಲಿಂಗನಮಕ್ಕಿ ಡ್ಯಾಂ ಒಳಹರಿವಿನಲ್ಲಿ ನಿರಂತರ ಏರಿಕೆ ಕಂಡುಬರಲಾರಂಭಿಸಿದೆ.
Linganamakki Dam ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರ ಬಿಟ್ಟಿರುವ ಕಾರಣದಿಂದ, ವಿಶ್ವವಿಖ್ಯಾತ ಜೋಗ ಜಲಪಾತದ ಜಲಧಾರೆಯ ವೈಭೋಗ ಮತ್ತಷ್ಟು ಕಳೆಗಟ್ಟಿದೆ. ಅಕ್ಷರಶಃ ಜಲಪಾತ ಭೋರ್ಗರೆಯಲಾರಂಭಿಸಿದೆ.
ವೀಕೆಂಡ್ ನಲ್ಲಿಯೇ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರ ಹರಿಸುತ್ತಿರುವುದರಿಂದ, ಜೋಗ ಜಲಪಾತಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.
ಮೈದುಂಬಿದ ನದಿ :
ಲಿಂಗನಮಕ್ಕಿ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಹೊರಬಿಟ್ಟಿರುವ ಕಾರಣದಿಂದ, ಶರಾವತಿ ನದಿ ಹೊನ್ನಾವರ ತಾಲೂಕಿನಲ್ಲಿ ಮೈದುಂಬಿ ಹರಿಯುತ್ತಿದೆ. ನದಿಪಾತ್ರದ ತಗ್ಗು ಪ್ರದೇಶಗಳಲ್ಲಿ ಪ್ರವಾಹ ಭೀತಿ ಸೃಷ್ಟಿಸಿದೆ. ಡ್ಯಾಂನಿಂದ ಪ್ರಸ್ತುತ ಹೊರಬಿಡುತ್ತಿರುವ ನೀರಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾದರೆ, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.
Linganamakki Dam ಲಿಂಗನಮಕ್ಕಿ ಡ್ಯಾಂ ನಿಂದ 25,000 ಕ್ಯುಸೆಕ್ ನೀರು ಬಿಡುಗಡೆ ಜನರ ಮುಂಜಾಗ್ರತೆಗೆ ಇಲಾಖೆ ಮನವಿ
Date: