Monday, February 2, 2026
Monday, February 2, 2026

Rotary Shivamogga ಶಿವಮೊಗ್ಗದ ರೋಟರಿ ಚಿತಾಗಾರದ ಆವರಣದಲ್ಲಿ ಪುಂಡರ ಹಾವಳಿ ತಡೆಯಲು ಮನವಿ

Date:

Rotary Shivamogga ಶಿವಮೊಗ್ಗನಗರದ ಮಂಜುನಾಥ್ ಗೌಡ ಪೂರ್ವ ಚಿತಾಗಾರದಲ್ಲಿ ಗಾಂಜಾ ಸೇವಿಸಿ ಪುಂಡರ ಹಾವಳಿ ಹೆಚ್ಚಾಗಿದೆ. ಇಲ್ಲಿ ಸಾರ್ವಜನಿಕರು ಒಡಾಡುವುದು ಕಷ್ಟವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್‌ರವರಿಗೆ ರೋಟರಿ ಚಿತಾಗಾರದ ಟ್ರಸ್ಟ್ ವತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು.
ರೋಟರಿ ಪೂರ್ವ ಚಿತಾಗಾರದ ಪಕ್ಕದ ಬಡಾವಣೆ ಹಾಗೂ ಸುತ್ತ ಮುತ್ತಲಿನ ಪಡ್ಡೆ ಹುಡುಗರು ಚಿತಾಗಾರದಲ್ಲಿರುವ ಕಿಟಕಿಯ

Rotary Shivamogga ಗಾಜುಗಳನ್ನು ಒಡೆದು ಹಾಕುವುದು, ನಲ್ಲಿಗಳನ್ನು ಕೀಳುವುದು, ಕಿಟಕಿ ಫೇಮ್‌ಗಳನ್ನು ಕಳ್ಳತನ ಮಾಡುವುದರ ಜೊತೆಗೆ ಕಂಟ್ರಿ ಕ್ಲಬ್‌ಗೆ ಹೋಗಿ ಬರುವವರಿಗೆ ಹೆದರಿಸುವುದು ಹೆಚ್ಚಾಗಿದೆ. ಇದಕ್ಕೆ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ಕೋರಲಾಗಿದೆ.
ಮನವಿ ಸಲ್ಲಿಸುವ ವೇಳೆ ರೋಟರಿ ಚಿತಾಗಾರದ ಟ್ರಸ್ಟ ನ ಪ್ರಭಾರ ಮ್ಯಾನೇಜಿಂಗ್ ಟ್ರಸ್ಟಿ ಡಾ. ಪರಮೇಶ್ವರ್ ಡಿ. ಶಿಗ್ಗಾಂವ್, ಮಾಜಿ ಮ್ಯಾನೇಜಿಂಗ್ ಟ್ರಸ್ಟಿ . ಕಡಿದಾಳ್ ಗೋಪಾಲ್, ಉಪಾಧ್ಯಕ್ಷ ಸುರೇಶ್ ಕುಮಾರ್, ಖಜಾಂಚಿ ಜಿ.ವಿಜಯ್ ಕುಮಾರ್ ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...