Malnad Areca Marketing Co-operative Society Limited ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘವು ಪ್ರಸಕ್ತ ಸಾಲಿನಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಪಾರಿತೋಷಕವನ್ನು ನೀಡುತ್ತಿದ್ದು, ಕೆಳಕಂಡ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
2023-24ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಗೆ ವಿದ್ಯಾರ್ಥಿಗಳಿಗೆ ಬೆಳ್ಳಿ ಹಬ್ಬದ ಪಾರಿತೋಷಕ ಹಾಗೂ ಪದವಿ ಬಿ.ಎ., ಬಿ.ಎಸ್ಸಿ., ಬಿ.ಕಾಂ., ಅಥವಾ ಬಿ.ಬಿ.ಎಂ., ಅಥವಾ ಬಿ.ಸಿ.ಎ., ಬಿ.ಎಸ್ಸಿ(ಕೃಷಿ ಅಥವಾ ತೋಟಗಾರಿಕೆ), ಬಿ.ವಿ.ಎಸ್ಸಿ.,/ಬಿ.ಎಫ್.ಎಸ್.ಸಿ.,/ಬಿ.ಟೆಕ್ ಡೈರಿ.,/ ಎಂ.ಬಿ.ಬಿ.ಎಸ್.,/ ಬಿ.ಯು.ಎಂ.ಎಸ್.,/ ಬಿ.ಹೆಚ್.ಎಂ.ಎಸ್.,/ ಬಿ.ಎ.ಎಂ.ಎಸ್.,/ ಬಿ.ಎಸ್.ಎಂ.ಎಸ್.,/ ಬಿ.ಎನ್.ವೈ.ಎಸ್./ ಬಿ.ಡಿ.ಎಸ್.,/ ಬಿ.ಪಿ.ಟಿ.,/ ಬಿ.ಫಾರ್ಮ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸುವರ್ಣ ಮಹೋತ್ಸವದ ಪಾರಿತೋಷಕವನ್ನು ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಎ., (ಸಂಸ್ಕೃತ Malnad Areca Marketing Co-operative Society Limited ಅಥವಾ ಯಾವುದೇ ವಿಷಯ), ಎಂ.ಕಾಂ., ಅಥವಾ ಎಂ.ಸಿ.ಎ.,/ ಎಂ.ಎಸ್ಸಿ.,/ ಎಂ.ಬಿ.ಎ.,/ ಎಂ.ಟೆಕ್., ಅಥವಾ ಎಂ.ಇ.,/ ಎಂ.ಫಾರ್ಮ/ ಸಿ.ಎ.,/ ಇಂಜಿನಿಯರಿಂಗ್ ಪದವಿಗಳಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಜ್ರ ಮಹೋತ್ಸವ ಪಾರಿತೋಷಕವನ್ನು ಹಾಗೆಯೇ ರಾಜ್ಯ ಮಟ್ಟ, ರಾಷ್ಟ್ರ ಮಟ್ಟ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಪುರಸ್ಕಾರ ಪಡೆದ ಸದಸ್ಯರ ಮಕ್ಕಳಿಗೆ ಪಾರಿತೋಷಕವನ್ನು ಮಾಮ್‌ಕೋಸ್ ವತಿಯಿಂದ ನೀಡಲು ತೀರ್ಮಾನಿಸಿದ್ದು, ಅದರಂತೆ ಸದಸ್ಯರು ಸೆಪ್ಟಂಬರ್ 30 ರೊಳಗಾಗಿ ಅರ್ಜಿ ಮತ್ತು ಅಂಕಪಟ್ಟಿಯ ನಕಲನ್ನು ಸಂಘದ ಶಾಖೆಗಳಿಗೆ ಅಥವಾ ಕೇಂದ್ರ ಕಚೇರಿಗೆ ಸಲ್ಲಿಸುವಂತೆ ಮಾಮ್‌ಕೋಸ್‌ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Malnad Areca Marketing Co-operative Society Limited ಮ್ಯಾಮ್ಕೋಸ್ ಸದಸ್ಯರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
Date: