Bhadra Dam ಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಸಂಪೂರ್ಣ ಮುಳುಗಡೆಯಾದ ಬೆನ್ನಲ್ಲೇ ನಗರದ ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಸೃಷ್ಠಿಯಾಗಿದೆ.
ಸುಮಾರು 30 ಸಾವಿರ ಕ್ಯೂಸೆಕ್ ನಷ್ಟು ನೀರು ನದಿಗೆ ಹರಿಸಿರುವ ಪರಿಣಾಮ ನಗರ ವ್ಯಾಪ್ತಿಯಲ್ಲಿ ನದಿ ಉಕ್ಕಿ ಹರಿಯುತ್ತಿದ್ದು, ಹೊಸ ಸೇತುವೆ ಮೇಲ್ಬಾಗದಲ್ಲಿ ಸುಮಾರು ೨ ಅಡಿಗೂ ಎತ್ತರದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಬಿಎಚ್ ರಸ್ತೆಯಲ್ಲಿ ನೀರು ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ನೀರು ಬಿಎಚ್ ರಸ್ತೆಗೂ ಸಹ ನುಗ್ಗಿದೆ. ನದಿ ಪಾತ್ರಕ್ಕೆ ಹೊಂದಿಕೊಂಡಿರುವ ಜನವಸತಿ ಪ್ರದೇಶಗಳನ್ನು ದಾಟಿ ಬಿಎಚ್ ರಸ್ತೆಯಲ್ಲೂ ಸಹ ನೀರು ನಿಂತಿದೆ. ಹೀಗಾಗಿ, ವಾಹನ ಸವಾರರು ಹಾಗೂ ಪಾದಾಚಾರಿಗಳ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
Bhadra Dam ಹಲವು ಪ್ರದೇಶಗಳಲ್ಲಿ ಪ್ರವಾಹ ಭೀತಿ ಇನ್ನು, ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಹಲವು ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ. ನಿನ್ನೆ ರಾತ್ರಿಯಿಂದಲೇ ನಗರದ ಅಂಬೇಡ್ಕರ್ ನಗರ, ಯಕೀನ್ಷಾ ಕಾಲೋನಿ, ಚಾಮೇಗೌಡ ಲೈನ್, ಗುಂಡೂರಾವ್ ಶೆಡ್, ಗೌಳಿಗರ ಬೀದಿ ಸೇರಿದಂತೆ ನದಿಯಂಚಿನ ತಗ್ಗು ಪ್ರದೇಶಗಳಿಗೆ ಹಾಗೂ ಕವಲಗುಂದಿ ಪ್ರದೇಶದ ಸುಮಾರು ೩೦ ಮನೆಗಳಿಗೆ ನೀರು ನುಗ್ಗಿದೆ.
ಪ್ರವಾಹ ಭೀತಿ ಹಾಗೂ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಈ ಎಲ್ಲಾ ಪ್ರದೇಶದ ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದ್ದು, ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ನಗರದಲ್ಲಿ ವಾಹನ ದಟ್ಟಣೆ ಹೊಸ ಸೇತುವೆ ಮುಳುಗಡೆಗೊಂಡಿರುವ
ಬೆನ್ನಲ್ಲೇ ಅಂಡರ್ ಬ್ರಿಡ್ಜ್ ಬಳಿಯ ಬಿಎಚ್ ರಸ್ತೆಯಲ್ಲೂ ಸಹ ನೀರು ತುಂಬಿಕೊಂಡಿದೆ. ಒಂದು ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಹಳೆ ಸೇತುವೆ ಮೇಲೆ ವಾಹನ ದಟ್ಟಣೆ ಹೆಚ್ಚಾಗಿದೆ. ಬಿಎಚ್ ರಸ್ತೆಯ ಪೆಟ್ರೋಲ್ ಬಂಕ್ ಎದುರಿನಲ್ಲೂ ಸಹ ನೀರು ತುಂಬಿಕೊಂಡಿರುವ ಪರಿಣಾಮ ವಾಹನ ಸವಾರರು ಪರದಾಡುವಂತಾಗಿದೆ.
Bhadra Dam ಭದ್ರಾವತಿಯಲ್ಲಿ ಉಕ್ಕಿ ಹರಿದ ಭದ್ರೆ ಹಲವೆಡೆ ಅಭದ್ರ ಪರಿಸ್ಥಿತಿ ಕಾಳಜಿ ಕೇಂದ್ರಕ್ಕೆ ಚಾಲನೆ
Date: