CM Siddharamaih ಸಮರ್ಥ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮೈಸೂರು ಪಾದಯಾತ್ರೆ ಹಮ್ಮಿಕೊಂಡಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅಹಿಂದ ವತಿಯಿಂದ ರಾಜ್ಯದಾದ್ಯಂತ ಹೋರಾಟ ಆರಂಭಿಸಲಾಗುವುದು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅಹಿಂದ ಉಪಾಧ್ಯಕ್ಷ ಎಸ್ ಪಿ ಶೇಷಾದ್ರಿ, ವಿಧಾನಸಭಾ ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಕಂಗಾಲಾಗಿರುವ ಬಿಜೆಪಿ ಮತ್ತು ಅಧಿಕಾರವಿಲ್ಲದೇ ಹಪಹಪಿಸುತ್ತಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣ ಮುಂದಿಟ್ಟುಕೊಂಡು ಸದನದ ಸಮಯವನ್ನೇ ವ್ಯರ್ಥ ಮಾಡಿದರು. ಈಗಾಗಲೇ ಈ ಎರಡೂ ಹಗರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ. ತನಿಖೆ ನಡೆಯುತ್ತಿದೆ. ರಾಜ್ಯಪಾಲರಿಗೆ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೂಡ ನೀಡಲಾಗಿದೆ ಎನ್ನುವುದನ್ನು ಮರೆತಿದ್ದಾರೆ ಎಂದರು.
1935ರಿಂದ ಇಲ್ಲಿಯವರೆಗೆ ನಡೆದ ಘಟನಾವಳಿಗಳ ಸ್ಪಷ್ಟ ಮಾಹಿತಿ ಕೊಟ್ಟಿದ್ದಾರೆ. ಅವರದೇ ಪಕ್ಷದ ಬಸವನಗೌಡ ಪಾಟೀಲ್ ಯತ್ನಾಳ್ ಕೂಡ ಪಾದಯಾತ್ರೆ ಮಾಡುತ್ತಿರುವುದು ದುರಾದೃಷ್ಟಕರ. ಹಗರಣದ ತನಿಖಾ ವರದಿ ಬರಲಿ. ನಂತರ ಪಾದಯಾತ್ರೆ ಎಂದಿದ್ದಾರೆ.
ಹೀಗಿದ್ದರೂ ಕೂಡ ರಾಜಕಾರಣಕ್ಕಾಗಿ ಈ ನ್ಯಾಯ ಸಿದ್ಧರಾಮಯ್ಯ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ನಿಜವಾಗಿಯೂ ಕಪ್ಪು ಚುಕ್ಕಿ ಇಲ್ಲದ ಮಾನವೀಯತೆಯ ಮುಖ್ಯಮಂತ್ರಿಗಳು ಅವರು ಎಂದರು.
ಹೀಗಿದ್ದರೂ ಸಾಮಾಜಿಕ ಸಂಸ್ಥೆಯೊಂದು ತನಿಖಾ ವರದಿ ಮಾಡಿ ಸಿದ್ದರಾಮಯ್ಯ ಅವರು ಈ ದೇಶದ ಅತ್ಯುತ್ತಮ ಮುಖ್ಯಮಂತ್ರಿ ಅವರ ಮುಖಕ್ಕೆ ಮಸಿ ಬಳಿಯುವ ಕೆಲಸಗಳನ್ನು ವಿರೋಧಿಗಳು ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ಸರ್ಕಾರವನ್ನು ಉರುಳಿಸಬೇಕು ಎಂಬ ಕುತಂತ್ರ ಈ ಪಾದಯಾತ್ರೆಯ ಹಿಂದೆ ಕಂಡು ಒಂದು ರೀತಿಯ ಭಯ ವಿರೋಧಿಗಳಿಗೆ ಆಗಿ ನಡುಕ ಶುರುವಾಗಿದೆ ಎಂದ ಶೇಷಾದ್ರಿ, ತೇಜೋವಧೆ ಮಾಡುವುದೇ ಬಿಜೆಪಿಗರ ಉದ್ದೇಶವಾಗಿದೆ. ಸಿದ್ಧರಾಮಯ್ಯ ಅವರ ಲ್ಲಿ ನಡುಕ ಉಂಟುಮಾಡಿದೆ ಎಂದರು.
CM Siddharamaih ಜೆಡಿಎಸ್, ಬಿಜೆಪಿ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಕೈಬಿಡಬೇಕು. ರಾಜ್ಯ ಸರ್ಕಾರದ ವಿರುದ್ಧ ಪಿತೂರಿ ಮಾಡುವುದನ್ನು ಈ ಕೂಡಲೇ ನಿಲ್ಲಿಸಿ ರಾಜ್ಯದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಸಹಕರಿಸಬೇಕು. ಇಲ್ಲದಿದ್ದರೆ, ಈ ಎರಡೂ ಪಕ್ಷಗಳ ನಾಯಕರ ವಿರುದ್ಧ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಬಹಿಷ್ಕಾರ, ಮುಷ್ಕರ, ಧರಣಿಯಂತಹ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.