Linganamakki Dam ಲಿಂಗನಮಕ್ಕಿ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರುಹರಿದುಬರುತ್ತಿದ್ದು, ಆ. 1 ರಿಂದ 10 ಸಾವಿರ ಕ್ಯೂಸೆಕ್ಸ್‌ನಷ್ಟು ನೀರನ್ನು ಹೊರಬಿಡಲಾಗುವುದು ಎಂದು ಕಾರ್ಗಲ್‌ನ ಕರ್ನಾಟಕ ವಿದ್ಯುತ್ ನಿಗಮದ ಕಾರ್ಯನಿವಾಹಕ ಇಂಜಿನಿಯರ್ ಆರ್. ಶಿವಕುಮಾರ್ ತಿಳಿಸಿದ್ದಾರೆ.
ಜುಲೈ 30ರ ಸಂಜೆ 6 ಗಂಟೆಯ ವೇಳೆಗೆ ಜಲಾಶಯದ ನೀರಿನ ಮಟ್ಟ 1811.50 ಅಡಿಯಷ್ಟಿದ್ದು, 92 ಸಾವಿರ ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ಮುಂದಿನ ಮೂರು ದಿನಗಳ ಕಾಲ ರೆಡ್ ಅಲರ್ಟ ಘೋಷಿಸಿರುವುದರಿಂದ 80 ರಿಂದ 90 ಸಾವಿರದಷ್ಟು ಕ್ಯೂಸೆಕ್ಸ್ ನೀರು ಪ್ರತಿದಿನ ಹರಿದುಬರುವ ಸಾಧ್ಯತೆ ಇದೆ ಎಂದಿದ್ದಾರೆ.
ಇದೇ ಪರಿಸ್ಥಿತಿ ಮುಂದುವರೆದಲ್ಲಿ ಜಲಾಶಯದ ನೀರಿನ ಮಟ್ಟ 1814 ಅಡಿಯಷ್ಟು ತಲುಪಲಿದೆ. ಈ ಹಿನ್ನೆಲೆಯಲ್ಲಿ ಆ. 1ರ ಬೆಳಗ್ಗೆ 10 ಗಂಟೆಯಿಂದ 10 ಸಾವಿರ ಕ್ಯೂಸೆಕ್ಸ್‌ನಷ್ಟು ನೀರನ್ನು ಹೊರಬಿಡಲು ನಿರ್ಧರಿಸಲಾಗಿದೆ.
Linganamakki Dam ಒಳಹರಿವನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳನಲ್ಲಿ ನೀರು ಹೊರಬಿಡುವಿಕೆಯ ಪ್ರಮಾಣವನ್ನು ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
ಜಲಾಶಯದ ಕೆಳಭಾಗದಲ್ಲಿರುವ ಗ್ರಾಮದವರಿಗೆ ಈಗಾಗಲೇ ಕೆಪಿಸಿಎಲ್ ವತಿಯಿಂದ ಪ್ರವಾಹದ ಮುನ್ಸೂಚನೆ ಕೊಡಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.