State Farmers Association ಐಪಿ ಸೆಟ್‌ಗೆ ಆಧಾರ್ ಕಾರ್ಡ್ ಜೋಡಣೆ ಮಾಡುವ ಕ್ರಮ ರೈತರಿಗೆ ತೊಂದರೆ ಕೊಡುವ ಉದ್ದೇಶವಾಗಿದೆ. ಆದ್ದರಿಂದ ಆಧಾರ್ ಕಾರ್ಡ್ ಜೋಡಣೆ ಮಾಡುವ ಕ್ರಮವನ್ನು ತಾವುಗಳು ಕೂಡಲೇ ನಿಲ್ಲಿಸಬೇಕೆಂದು ಒತ್ತಾಯಿಸಿರುವ ರಾಜ್ಯ ರೈತ ಸಂಘ, ರೈತರು ಸಹ ಯಾವುದೇ ಕಾರಣಕ್ಕೂ ಆಧಾರ್ ಕಾರ್ಡ್‌ನ್ನು ವಿದ್ಯುತ್ ಚ್ಛಕ್ತಿ ಇಲಾಖೆಗೆ ಕೊಡಬಾರದೆಂದು ಮನವಿ ಮಾಡಿದೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಸಂಘದ ರಾಜ್ಯಾಧ್ಯಕ್ಷ ಎಚ್. ಆರ್. ಬಸವರಾಜಪ್ಪ ಮತ್ತು ಮುಖಂಡರು,
ಚುನಾವಣೆ ಪೂರ್ವದಲ್ಲಿ ವಿದ್ಯುತ್‌ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ಸರಕಾರ ಭರವಸೆ ಕೊಟ್ಟಿತ್ತು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಸರ್ಕಾರಕ್ಕೂ ಕೂಡ ವಿಧಾನಸಭೆಯಲ್ಲಿ ನಿರ್ಣಯವನ್ನು ಮಾಡಿ ಕೇಂದ್ರಕ್ಕೆ ಕಳುಹಿಸಿಬೇಕೆಂದು ಒತ್ತಾಯಿಸಿತ್ತು. ಪಕ್ಕದ ರಾಜ್ಯಗಳಾದ ಆಂಧ್ರ ತಮಿಳುನಾಡು, ತೆಲಂಗಾಣ, ಪಶ್ಚಿಮ ಬಂಗಾಳ ಸರ್ಕಾರಗಳು ವಿಧಾನಸಭೆಯಲ್ಲಿ ವಿದ್ಯುತ್ ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ತೀರ್ಮಾನಿಸಿ ಕೇಂದ್ರಕ್ಕೆ ನಿರ್ಣಯವನ್ನು ಕಳುಹಿಸಿವೆ ಎಂದರು.
State Farmers Association ಸ್ವಾತಂತ್ರ್ಯದ ನಂತರ ಇಲ್ಲಿಯವರೆಗೆ ಐ.ಪಿ ಸೆಟ್‌ಗಳು ರೈತರು ಉಪಯೋಗಿಸುತ್ತಿದ್ದಾರೆ. ೧೦ ಹೆಚ್.ಪಿ ಐ.ಪಿ ಸೆಟ್‌ಗಳಿಗೆ ಆಧಾರ್ ವರೆಗಿನ ಐ.ಪಿ ಸೆಟ್‌ಗಳಿಗೆ ವಿದ್ಯುತ್ ಚ್ಚಕ್ತಿ ದರ ಇಲ್ಲ. ಆದರೂ ಕಾರ್ಡ್ ಜೋಡಿಸಲು ಆದೇಶ ಮಾಡಿರುವುದರ ಉದ್ದೇಶವೇನು ಎಂದು ಪ್ರಶ್ನಿಸಿರುವ ಸಂಘ, ಆಧಾರ್ ಕಾರ್ಡ್ ಜೋಡಣೆ ಮಾಡುವುದರ ಹಿಂದೆ ವಿದ್ಯುಚ್ಚಕ್ತಿ ಖಾಸಗೀಕರಣ ಮಾಡುವ ಹುನ್ನಾರ ಅಡಗಿದೆ.. ಕೇಂದ್ರ ಸರ್ಕಾರ ಹಿಂದಿನ ಲೋಕಸಭೆಯಲ್ಲಿ ಖಾಸಗೀಕರಣ ಮಾಡುವ ಮಸೂದೆಯನ್ನು ಮಂಡಿಸಿ ಸದನ ಸಮಿತಿಗೆ ಕಳುಹಿಸಿದೆ ಎಂದು ಹೇಳಿದರು.
ಕೆಲವು ರೈತರದ್ದು ಪಹಣಿ ಖಾತೆ ಇಲ್ಲದ ಕಾರಣ ಆರ್.ಆರ್. ನಂಬರ್ ಸಿಕ್ಕಿರುವುದಿಲ್ಲ, ಇಂತಹ ರೈತರಿಗೆ ಆಧಾರ್ ಕಾರ್ಡ್ ನೊಂದಣಿ ಸಹ ಆಗುವುದಿಲ್ಲ. ಕರ್ನಾಟಕದಲ್ಲಿ 25 ಲಕ್ಷಕ್ಕೂ ಹೆಚ್ಚಿಗೆ ಐ.ಪಿ ಸೆಟ್‌ಗಳಿವೆ. ಹಿಂದೆ ಅಕ್ರಮ-ಸಕ್ರಮ ಯೋಜನೆಯಡಿ ಹಣ ಕಟ್ಟಿಸಿಕೊಂಡು ಕೊಡುತ್ತಿದ್ದರು. ಈಗ ಅದನ್ನು ನಿಲ್ಲಿಸಿ ಸ್ವಯಂ ವೆಚ್ಚ ಯೋಜನೆಯನ್ನು ಜಾರಿಗೆ ತಂದು ಒಬ್ಬ ಸಣ್ಣ ರೈತ ಐ.ಪಿ ಸೆಟ್‌ಗಾಗಿ 3 ರಿಂದ 4 ಲಕ್ಷ ಬಂಡವಾಳ ಹೂಡಲು ಸಾಧ್ಯವಿಲ್ಲ ಎಂದಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪ್ರ. ಕಾರ್ಯದರ್ಶಿ ಇ ಬಿ ಜಗದೀಶ, ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಹಸಿರು ಸೇನೆಯ ಜಿಲ್ಲಾ ಸಂಚಾಲಕ ಎಂ ಡಿ ನಾಗರಾಜ, ಗುರುಶಾಂತ್, ಕಸೆಟ್ಟಿ ರುದ್ರೇಶ್ ಮೊದಲಾದವರಿದ್ದರು.