Monday, December 15, 2025
Monday, December 15, 2025

Klive News Special Article ವರ್ಷದ ಹರ್ಷದಲ್ಲಿ ಹಸಿದವರಿಗೊಂದು ತುತ್ತು..

Date:


KLive News Special Article ಡಾ.ಎನ್.ಸುಧೀಂದ್ರ.
ಪ್ರಧಾನ ಸಂಪಾದಕ.
ಕೆ ಲೈವ್.ನ್ಯೂಸ್

ಈಗ ಹಸಿವು ತಾಂಡವ ನಾಟ್ಯಗೈಯುತ್ತಿದೆ. ಸಾಮಾಜಿಕ
ಸಂದರ್ಭಗಳಲ್ಲಿ ಅನೇಕ ಘಟನಾ ವೈಪರೀತ್ಯಗಳು ಈ ಹೊಟ್ಟೆಯ ಹಸಿವಿನಿಂದಾಗಿಯೇ
ಸಂಭವಿಸುತ್ತಿವೆ.

ಇಂತಹ ಸನ್ನಿವೇಶದಲ್ಲಿ ನಮ್ಮ ಸಮಾಜದ ಸೇವಾಮನೋಭಾವದ ವ್ಯಕ್ತಿಗಳು,ಸಂಘಸಂಸ್ಥೆಗಳು
ಊಟದ ಹೊತ್ತಿಗೆ ಅನ್ನ ನೀಡುವ ಕೈಂಕರ್ಯಮಾಡುತ್ತಿವೆ

ಶಿವಮೊಗ್ಗದಲ್ಲಿ ಎಲೆಮರೆಯ
ಕಾಯಂತೆ ಬಹಳ ವ್ಯಕ್ತಿ/ ಸಂಘ ಸಂಸ್ಥೆಗಳಿವೆ. ಏಕೆಂದರೆ ನಗರದಲ್ಲಿ ಹೃದಯ ಧಾರಾಳಿಗಳಿಗೆ ಕೊರತೆಯಿಲ್ಲ.

ನನ್ನನ್ನು ಸೆಳೆದ ಒಂದು ಪುಟ್ಟ ಸಂಘಟನೆಯೆಂದರೆ ಅದು‌
ಶಿವಮೊಗ್ಗದ “ ಸ್ನೇಹ ಬಳಗ”.
ನಾನು ಸಾಮಾಜಿಕ ಜಾಲತಾಣದಲ್ಲಿ ಬಳಗದ “ಪ್ರಸಾದ” ಶೀರ್ಷಿಕೆಯ ಚಟುವಟಿಕೆ ಗಮನಿಸುತ್ತಿದ್ದೆ.

“ಸ್ನೇಹ ಬಳಗ” ಮುಂಚೂಣಿಯಲ್ಲಿ ಕಂಡವರು
ಸಾಮಾಜಿಕ ಕಾಳಜಿಯುಳ್ಳ
ನಗರಗದ್ದೆ ಶ್ರೀನಾಥ್. ಅವರಿಗೆ ಫೋನ್ ಮಾಡಿ ಮಾಹಿತಿ ಪಡೆದೆ.
“ನಾವೇನೂ ಹೇಳುವುದಿಲ್ಲ.ನೀವೇ ಬಂದು ನೋಡಿ. ಇಲ್ಲಿ ಊಟ ನೀಡುತ್ತೇವೆ ಎಂಬ ಹೆಗ್ಗಳಿಕೆಯೂ ನಮಗಿಲ್ಲ. ಊಟ ನೀಡುವ ವ್ಯವಸ್ಥೆಯಲ್ಲಿ ತೊಡಗಿಸಿಕೊಳ್ಳುವುದೇ ನಮ್ಮ ಭಾಗ್ಯ ಅಷ್ಟೆ. ಕೊಡುವವನು ಅವನು( ದೇವರು) ಸ್ವೀಕರಿಸಲು ಬರುವವರೂ ಅವನೆ ( ದೇವರು) ” ಎಂದರು ಶ್ರೀನಾಥ್.

ಪ್ರತೀ ಭಾನುವಾರ ಮಧ್ಯಾಹ್ನ 12-30 ಕ್ಕೆ ಹಸಿದವರಿಗೆ ಅನ್ನದ ತಟ್ಟೆ ನೀಡಲು “ಪ್ರಸಾದ” ಸಿದ್ಧವಾಗಿರುತ್ತದೆ.
ಸ್ಥಳ, ಮೆಗ್ಗಾನ್ ಆಸ್ಪತ್ರೆಯ ಹಳೇಯ ಗೇಟಿನಲ್ಲಿರುವ ಚೌಡೇಶ್ವರಿ ದೇವಾಲಯದ ಸನಿಹ‌ ಮಿತ್ರರೆಲ್ಲರೂ ಗುಂಪಾಗಿರುತ್ತಾರೆ.

“ಸ್ನೇಹ ಬಳಗ”ದ ಸಮಯ ಅಂದರೆ ಮಿಲಿಟರಿ ಟೈಮಿಂಗ್ಸ್.
ಆಸ್ಪತ್ರೆಯ ಆವರಣದಲ್ಲಿನ ಸಹೃದಯಿ ಮುರಳೀಧರ ಅರಸ್ ಅವರ ಮಾಲೀಕತ್ವದ
ಶ್ರೀಕೃಷ್ಣ ವೆಜ್ ಪ್ರಮುಖ‌ ಸಿಬ್ಬಂದಿ ದೇವರಾಜ್ ‌ಆಟೋದಲ್ಲಿ ಬಿಸಿಬಿಸಿ ಅನ್ನ, ಸಾಂಬಾರು, ಉಪ್ಪಿನವರದಾನ.
ಶುಂಠಿ, ಕೊತ್ತಂಬರಿ ಮಿಶ್ರಿತ ಮಜ್ಜಿಗೆ ಡಬರಿಗಳಲ್ಲಿ ಶಿಸ್ತಾಗಿ ಸಾಗಿಸಿ ತರುತ್ತಾರೆ.ಸಂಗಡ
ತಂದ ಮಡಚಿದ ಟೇಬಲ್ ಬಿಡಿಸಿಡುತ್ತಾರೆ. ಅದರ ಮೇಲೆ ಸಾಲಾಗಿ ಅನ್ನ, ಸಾಂಬಾರು, ಮಜ್ಜಿಗೆ ಡಬರಿಗಳು ಕೂರುತ್ತವೆ.
ಜೊತೆಗೆ ಪೇಪರ್ ಲೋಟ, ತಟ್ಟೆಗಳು ರೆಡಿಯಾಗಿರುತ್ತವೆ.

KLive News Special Article ಅದು ಎಂತಹ ಸಮಯವೆಂದರೆ
ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದವರಿಗೆ ಹೊಟ್ಟೆ ಹಸಿಯುವ ಹೊತ್ತು. ಏನಾದರೂ ತಿನ್ನಲು‌
ಆಸ್ಪತ್ರೆಯ ಕಾಂಪೌಂಡಿನಲ್ಲಿರುವ ಕ್ಯಾಂಟೀನುಗಳಿಗೇ ಬರಬೇಕು.
ಕಾಸಿದ್ದವರೇನೋ ಸರಿ. ಹಣಕಡಿಮೆ ಇದ್ದೂ ಉಪವಾಸ ಇರುವವರು ಅನೇಕ.ಅಂಥವರಿಗೆ
“ಪ್ರಸಾದ” ಒಂದು ವರದಾನ
ಒಂದು ಭಾನುವಾರ ನಾನು ಆಸಕ್ತಿಯಿಂದಲೇ ಮಿತ್ರ ಮಂಜುನಾಥಶರ್ಮಾಜಿ‌ ಅವರನ್ನ “ಪ್ರಸಾದ”ದ‌ ಬಳಿ ಕರೆದೊಯ್ದಿದ್ದೆ.

“ ಎರಡೆರಡು ಬಾರಿ ಕೇಳಿ ಅನ್ನ ಬಡಿಸಿ ಸರ್.” ಎಂದು ನನಗೆ
ಶ್ರೀನಾಥ್, ಸುಮತೀಂದ್ರ ಅವರದ್ದು ನಿರ್ದೇಶನ. “ಶರ್ಮಾಜಿ
ಸಾಂಬಾರು ಜಾಸ್ತೀನೇ ಹಾಕಿ.”ಅಂತ ಮೊದಲ ಸಲಕ್ಕೆ ಬಂದ ನಮಗೆ ಅಲ್ಲಿ ಬಡಿಸುವ ಪದ್ಧತಿ ಬಗ್ಗೆ ಪರಿಚಯಿಸಿದರು. ಸುಮಾರು ನೂರರಿಂದ ನೂರೈವತ್ತು ಮಂದಿಗೆ
ಊಟ ವಿತರಿಸುವ ಸಾಮರ್ಥ್ಯ ಸದ್ಯಕ್ಕೆ ಆಗುತ್ತಿದೆ.

ಈಗ ಇಂತಹ ಚಟುವಟಿಕೆಗಳು
ಸಮಾಜದಲ್ಲಿ ನಡೆಯುತ್ತಿವೆ.
ಇಲ್ಲಿನ ಅಪರೂಪತೆಯೆಂದರೆ
ಯಾರು ಬಂದರೂ ಅವರು
ಸ್ನೇಹ ಬಳಗದವರಾಗಿ ಬಿಡುತ್ತಾರೆ.

ಒಂದು ಉದ್ದೇಶಕ್ಕಾಗಿ ಮುಂಚೆ
ಬಳಸಿದ ಹಣದ ಸಂಗ್ರಹದಲ್ಲಿ
ಒಂದುಲಕ್ಷ ಹತ್ತು ಸಾವಿರ ರೂಪಾಯಿ ಉಳಿಯಿತಂತೆ.
ಆ ಹಣದಿಂದ ಈ ಘನೋದ್ದೇಶ
ಈಡೇರಿಸಲು ಸ್ನೇಹ‌ಬಳಗ ನಿರ್ಧಾರಮಾಡಿತಂತೆ.

ಈಗ “ಪ್ರಸಾದ”ಆರಂಭವಾಗಿ
ಅವಿರತ ಐವತ್ತೊಂದು ಭಾನುವಾರ ಕಳಿದಿವೆ. ವಿಶೇಷ ಎಂದರೆ ಆಗಸ್ಟ್ ತಿಂಗಳ 4 ರಂದು ಭಾನುವಾರ “ಪ್ರಸಾದ” ವಿತರಣೆಗೆ ಒಂದು ವರ್ಷದ ಹರ್ಷ.
ಶಾಸಕ ಚನ್ನಬಸಪ್ಪ, ಡಿ.ಎಸ್ .ಅರುಣ್ ಮುಂತಾದವರು
ಈ ಹರ್ಷ ಹಂಚಿಕೊಳ್ಳಲು ಬರುತ್ತಿದ್ದಾರೆ. ಮಿತ್ರರಾದ ಕೃಷ್ಣಾನಂದ, ಸೂಳಿಕೆರಿ ವಿಜಯೀಂದ್ರ, ಶಂಕರ್, ಡಾ.ಯೋಗೀಂದ್ರ, ಹಿಂದು ಪತ್ರಿಕೆಯ ವರದಿಗಾರ ಮಾಧವ ಮುಂತಾದವರು‌ ಸ್ವಯಂಸೇವಕರಾಗಿರುವ ಅಟೆಂಡೆನ್ಸ್
ಇರುತ್ತದೆ.

ಈ ಸಾಮಾಜಿಕ ಸೇವೆಗೆ ಆಸಕ್ತಿಯಿರುವವರು ಪ್ರಸಾದ
ನೀಡ ಬಯಸುವವರು ಸ್ನೇಹ ಬಳಗ ವನ್ನ ಸಂಪರ್ಕಿಸಬಹುದು
ಅದು ಹೇಗೆಂದರೆ ಇಷ್ಟ ಇರುವವರು ಭಾನುವಾರವೇ
ಮಧ್ಯಾಹ್ನ 12-30 ಕ್ಕೆ ಶಿವಮೊಗ್ಹ ಮೆಗಾನ್ ಆಸ್ಪತ್ರೆ ಆವರಣದಲ್ಲಿ
ಮಿತ್ರರನ್ನ ಭೇಟಿಯಾಗಬೇಕು.
ಕೂಡಿಟ್ಟ ಹಣ ಸಾಕಷ್ಟು ಖಾಲಿಯಾಗದೇ ದಾನಿಗಳಿಂದಲೇ “ಪ್ರಸಾದ’ ಅವ್ಯಾಹತ ಮುಂದುವರೆದಿದೆ.
ಮಳೆಗಾಳಿಗೆ ರಕ್ಷಣೆ,ಊಟದ ಪಾತ್ರೆಗಳಿಗೆ ಧೂಳು ಬೀಳದಂತೆ ರಕ್ಷಿಸಬೇಕಿದೆ.
ಈಗಿರುವ ಸ್ಥಳದಲ್ಲೆ ಒಂದು ಶಾಶ್ವತ ಪ್ರಸಾದ ವಿತರಣಾ ಪುಟ್ಟ ಬಿಂದುವನ್ನ ಸ್ಥಾಪಿಸುವ
ಚಿಂತನೆ ನಡೆದಿದೆ

ಇಂತಹ ಒಂದು ಪುಣ್ಯಕಾರ್ಯದಲ್ಲಿ ಆಸಕ್ತಿ ಇರುವವರಿಗೆ ಅವಕಾಶಮಾಡಿಕೊಡುತ್ತಿರುವ
ಸ್ನೇಹ ಬಳಗಕ್ಕೆ ಒಂದು ಹಿಡಿ
ಅನ್ನದ ಸಲಾಮ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...