Indira Gandhi Morarji School Gopal ಯಾವುದೇ ಕಾಯಿಲೆ ಇರಲಿ, ಆ ಕಾಯಿಲೆಯ ಬಗ್ಗೆ ನಾವು ಜಾಗೃತರಾಗಿರಬೇಕು. ಭಯ ಪಟ್ಟಾಗ ಆ ಕಾಯಿಲೆ ನಮ್ಮನ್ನು ಆವರಿಸಿಕೊಳ್ಳುತ್ತದೆ. ಉತ್ತಮವಾದ ಆರೋಗ್ಯ ಉತ್ತಮ ಜೀವನಶೈಲಿ ಆಹಾರ ಅಭ್ಯಾಸಗಳು ನಮ್ಮನ್ನು ರಕ್ಷಣೆ ಮಾಡುತ್ತವೆ ಎಂದು ಎಂ.ಆರ್.ಬಸವರಾಜ್ ಅಭಿಮತ ವ್ಯಕ್ತಪಡಿಸಿದರು.
ಇಂದಿರಾ ಗಾಂಧಿ ಮೊರಾರ್ಜಿ ಶಾಲೆ ಗೋಪಾಳ ಹಾಗೂ ಶರಾವತಿ ನಗರ ವೀಣಾ ಶಾರದಾ ಶಾಲೆಯಲ್ಲಿ ರೋಟರಿ ಕ್ಲಬ್ ಶಿವಮೊಗ್ಗ ರಿವರ್ಸ್ ಸೈಡ್ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ,
ಡೆಂಗ್ಯೂ ಹಾಗೂ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ನಾವು ಸದಾ ಸಕಾರಾತ್ಮಕವಾಗಿರಬೇಕು. ದೈಹಿಕ ವ್ಯಾಯಾಮ ಯೋಗ ಪ್ರಾಣಾಯಾಮಗಳು ನಮ್ಮ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ. ಮಕ್ಕಳು ಸದಾ ಚಟುವಟಿಕೆಯಿಂದ ಕೂಡಿರಬೇಕು. ವಿದ್ಯಾಭ್ಯಾಸ ಜೊತೆಗೆ ಆರೋಗ್ಯದ ಕಡೆಗೂ ಸಹ ಗಮನ ಹರಿಸಬೇಕು. ಸದೃಢ ವಿದ್ಯಾರ್ಥಿಗಳು ಸಮಾಜದ ಆಸ್ತಿ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ನಡೆಸುವ ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ನುಡಿದರು.
Indira Gandhi Morarji School Gopal ಕಾರ್ಯಕ್ರಮದಲ್ಲಿ, ಕಾರ್ಯದರ್ಶಿ ಸಿ ಬಿ ವಿನಯ್, ಆರೋಗ್ಯ ಅಧಿಕಾರಿ ನಾರಾಯಣ್, ಝೆಡ್.ಎಲ್.ಸೋಮಶೇಖರ್, ಫಾಸ್ಟ್ ಎಜಿ ಜಗನ್ನಾಥ್.ಎಂ, ಫಾಸ್ಟ್ ಪ್ರೆಸಿಡೆಂಟ್ ದೇವೇಂದ್ರಪ್ಪ, ಇನ್ನರ್ವಿಲ್ ಅಧ್ಯಕ್ಷ ವಸಂತ ಬಸವರಾಜ್, ಫಾಸ್ಟ್ ಪ್ರೆಸಿಡೆಂಟ್ ಪ್ರತಿಮಾ ಡಾಕಪ್ಪಗೌಡ, ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ ಹಾಗೂ ಮಕ್ಕಳು ಭಾಗವಹಿಸಿದ್ದರು.