Department of Information and Public Relations ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಜಿಲ್ಲೆಯಲ್ಲಿ ಅಳವಡಿಸಲಾದ ಹೆದ್ದಾರಿ ಫಲಕಗಳ ಪೈಕಿ ಶಿಥಿಲಗೊಂಡ ನಾಲ್ಕು ಹೆದ್ದಾರಿ ಫಲಕಗಳ ವಿಲೇವಾರಿಗೆ ಅರ್ಹ ಬಿಡ್‌ದಾರರಿಂದ ದರಪಟ್ಟಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ತಾಲೂಕಿನ ಹೊಳಲೂರು, ಆಯನೂರು ಮತ್ತು ಶಿವಮೊಗ್ಗ ನಗರದ ವಾರ್ತಾ ಇಲಾಖೆ ಆವರಣ ಹಾಗೂ ಸಾಗರ ತಾಲೂಕಿನ ತಾಳಗುಪ್ಪ ಗ್ರಾಮದಲ್ಲಿ ಅಳವಡಿಸಲಾದ 10x 20 ಅಳತೆಯ ಹೆದ್ದಾರಿ ಫಲಕಗಳನ್ನು ಇರುವ ಸ್ಥಳಗಳಲ್ಲೇ ಹರಾಜು ಮಾಡಲಾಗುವುದು.
Department of Information and Public Relations ಆಸಕ್ತ ಬಿಡ್‌ದಾರರು ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ದಿ:03/08/2024 ರೊಳಗಾಗಿ ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸರ್. ಎಂ.ವಿ. ರಸ್ತೆ, ಶಿವಮೊಗ್ಗ ಈ ವಿಳಾಸಕ್ಕೆ ಸಲ್ಲಿಸುವಂತೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8496872447 ನ್ನು ಸಂಪರ್ಕಿಸುವುದು.