Rain In Shivamogga ಶಿವಮೊಗ್ಗ ತಾಲೂಕಿನಲ್ಲಿ 25 ಕ್ಕೂ ಹೆಚ್ಚು ಮನೆಗಳು ಧರೆಗುರುಳಿರುವ ಬಗ್ಗೆ ವರದಿಯಾಗಿದೆ.
ಕೆಲವು ಮನೆಗಳು ಭಾಗಶಃ ಕುಸಿದು ಬಿದ್ದಿವೆ. ಅದೃಷ್ಠವಶಾತ್ ಜನಗಳು ಇಲ್ಲದ ವೇಳೆ ಬಿದ್ದ ಪರಿಣಾಮ ಯಾವುದೇ ಪ್ರಾಣಿ ಹಾನಿ ಸಂಭವಿಸಿಲ್ಲ. ಶಿವಮೊಗ್ಗದಲ್ಲಿ ಮಳೆಯ ಆರ್ಭಟ ಕಂಡು ಬರುತ್ತಿಲ್ಲ ಆದರೆ ಮಳೆಗೆ ಥಂಡಿ ಹಿಡಿದಿದೆ. ಮೇಲೆ ಸೋನೆ ಮಳೆ ಅವಾಂತರಗಳನ್ನ ಸೃಷ್ಠಿಸುತ್ತಿವೆ. ಕೋಹಳ್ಳಿ, ಆಯನೂರು, ತ್ಯಾಜುವಳ್ಳಿ, ಹಾರನಹಳ್ಳಿ
ಮುದ್ದಿನಕೊಪ್ಪ, ಹಾರೋಬೆನವಳ್ಳಿಯಲ್ಲಿ ಸುಮಾರು 20ಕ್ಕೂ ಹೆಚ್ಚುಮನೆಗಳು ಧರೆಗೆ ಉರುಳಿವೆ.
ತ್ಯಾಜುವಳ್ಳಿಯಲ್ಲಿ ಶೋಭಾ ಸತೀಶ್ ಅವರ ಮನೆ, ಹಾರನಹಳ್ಳಿಯಲ್ಲಿ ಷಣ್ಮುಖ ರಾವ್, ಮುದ್ದಿನಕೊಪ್ಪದಲ್ಲಿ ಸುಕ್ಕಮ್ಮ ರಾಮಭೋವಿ. ಹಾರೋಬೆನವಳ್ಳಿಯಲ್ಲಿ ಬಸವರಾಜ್ ಎಂಬುವರ ಮನೆ ಹಾನಿಗೊಳಗಾಗಿವೆ.
ಸೊರಬದಲ್ಲಿ ಹಲವೆಡೆ ಧರೆಗುರುಳಿದ ವಿದ್ಯುತ್ ಕಂಬ
ಸೊರಬ ತಾಲೂಕು ಸಾರೆಕೊಪ್ಪ ಗ್ರಾಮ, ಹರಿಗಿ ನಾಗರಾಜ್ ಎಂಬವರ ಮನೆ ಕುಸಿದು ಬಿದ್ದಿದೆ.
ಹಾಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದು ಅವಾಂತರ ಸೃಷ್ಠಿಸಿವೆ. ಹಲವೆಡೆ ಕರೆಂಟ್ ಕಂಬ ಬಿದ್ದುಹೋಗಿದೆ.
ತೀರ್ಥಹಳ್ಳಿ ವರದಿ:
ತಾಲೂಕಿನಾದ್ಯಂತ ಭಾರಿ ಮಳೆ ಹಾಗೂ ಗಾಳಿಗೆ ಹಲವೆಡೆ ಮನೆ,ಕೊಟ್ಟಿಗೆ ಕುಸಿತ,ರಸ್ತೆಗೆ ಬಿದ್ದ ವಿದ್ಯುತ್ ಕಂಬಗಳು,ಅಡಿಕೆ ತೋಟ,ಗದ್ದೆಗಳಿಗೆ ಹಳ್ಳ ಕೊಳ್ಳಗಳ ನೀರು ನುಗ್ಗಿ ಮಲೆನಾಡಿನ ಕೃಷಿಕರ ಪಾಲಿಗೆ ಭಯಹುಟ್ಟಿಸಿದೆ.
ಪ್ರಮುಖ ನದಿಗಳಾದ ತುಂಗೆ,ಮಾಲ ತಿ ನದಿಗಳ ನೀರಿನ ಮಟ್ಟ ಗಣನೀಯವಾಗಿ ಏರತೊಡಗಿದೆ,ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
Rain In Shivamogga ತಾಲೂಕಿನ ಬಹಳಷ್ಟು ಕಡೆ ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ ಹಿನ್ನೆಲೆಯಲ್ಲಿ ಕನಿಷ್ಠ ಮೂರ್ನಾಲ್ಕು ದಿನಗಳ ಕಾಲ ವಿದ್ಯುತ್ ಗಾಗಿ ಗ್ರಾಮಸ್ಥರು ಕಾಯುವಂತಾಗಿದೆ.
ಪಟ್ಟಣ ವ್ಯಾಪ್ತಿಯ ಮಿಲ್ಕೇರಿಯ ಉದಯ್ ಮಡಿವಾಳ್ ಹಾಗೂ ಬೆಟ್ಟಮಕ್ಕಿಯ ಬಡಾವಣೆಯಲ್ಲಿ ಮನೆಯ ಗೋಡೆ ಗಾಳಿ ಮಳೆಯಿಂದ ಕುಸಿದು ಬಿದ್ದಿದೆ.
ಇದರಿಂದ ಯಾರಿಗೂ ಯಾವುದೇ ತೊಂದರೆ ಆಗಿಲ್ಲ ಎಂದು ತಿಳಿದು ಬಂದಿದೆ,ಘಟನಾ ಸ್ಥಳಕ್ಕೆ ಪ.ಪಂ.ಅಧಿಕಾರಿಗಳು ಭೇಟಿ ನೀಡಿದ್ದಾರೆ.